KALPATHARU KRANTHI

ತಿಪಟೂರಿನಲ್ಲಿ ಶೇಖರ್ ರಕ್ತ ನಿಧಿಕೇಂದ್ರಕ್ಕೆ ಶಾಸಕ ಕೆ.ಷಡಕ್ಷರಿ ಚಾಲನೆ

Spread the love

ರಕ್ತದಾನ ಮಹಾದಾನ ರಕ್ತವನ್ನ ಕೃತಕವಾಗಿ ಉತ್ವಾದನೆ ಮಾಡಲು ಸಾಧ್ಯವಿಲ್ಲ,ದಾನಿಗಳು ನೀಡುವ ರಕ್ತವನ್ನ ಸಂಕಷ್ಟದಲ್ಲಿ ಇರುವ ರೋಗಿಗಳಿಗೆ ನೀಡಿ ಜೀವ ಉಳಿಸುವ ಮಹತ್ಕಾರ್ಯಕ್ಕೆ ಎಲ್ಲರೂ ಬೆಂಬಲ ನೀಡಬೇಕು ಎಂದು ಶಾಸಕ ಕೆ.ಷಡಕ್ಷರಿ ತಿಳಿಸಿದರು.


ತಿಪಟೂರು ನೂತನವಾಗಿ ಆರಂಭವಾಗಿರುವ ಶೇಖರ್ ರಕ್ತನಿಧಿ ಕೇಂದ್ರವನ್ನ ಉದ್ಘಾಟಿಸಿದ ಶಾಸಕ ಕೆ.ಷಡಕ್ಷರಿ ಮಾತನಾಡಿ ರಕ್ತ ಕೃತಕವಾಗಿ ಉತ್ಪಾದನೆ ಮಾಡಲಾಗದ ಜೀವಾಮೃತ ರಕ್ತದಾನಿಗಳಿಂದ ಸಂಗ್ರಹಿಸಿದ ರಕ್ತವನ್ನ ಸಂಸ್ಕರಣೆ ಮಾಡಿ ತುರ್ತು ಅಗತ್ಯವಿರುವ ರೋಗಿಗಳಿಗೆ ನೀಡುವುದದಿಂದ ರೋಗಿಗಳ ಉಳಿಸಲು ಸಾಧ್ಯವಾಗುತ್ತದೆ.ತಿಪಟೂರು ದಿನದಿಂದ ದಿನಕ್ಕೆ ಅಭಿವೃದ್ದಿ ಹೊಂದುತ್ತಿದ್ದು,ರಕ್ತ ನಿಧಿಕೇಂದ್ರ ತುರ್ತು ಅಗತ್ಯವಾಗಿತ್ತು, ಡಾ//ಸೋಮಶೇಖರ್ ರಕ್ತನಿಧಿ ಕೇಂದ್ರ ಆರಂಭಿಸಿ ಉತ್ತಮ ಕೆಲಸ ಮಾಡಿದ್ದಾರೆ, ತುರ್ತು ಅನಾರೋಗ್ಯ, ಅಪಘಾತಗಳ ಸಂದರ್ಭದಲ್ಲಿ ರಕ್ತಕ್ಕಾಗಿ ರೋಗಿಗಳು ತುಮಕೂರು ಹಾಸನ ಬೆಂಗಳೂರಿಗೆ ಹೋಗಬೇಕಿತ್ತು. ಎಷ್ಟೊ ರೋಗಿಗಳು ಮಾರ್ಗಮಧ್ಯೆಯೇ ಸಾವನ್ನಪ್ಪಿದ ಉದಾಹರಣೆಗಳುಂಟು, ನಮ್ಮ ತಿಪಟೂರಿನಲ್ಲಿ ರಕ್ತನಿಧಿ ಕೇಂದ್ರ ಆರಂಭವಾಗಿರುವುದು ಶ್ಲಾಘನೀಯ ಎಂದು ತಿಳಿಸಿದರು.


ಕಾರ್ಯಕ್ರಮದಲ್ಲಿ ಉಪಸ್ಥಿತರಿದ ನಿವೃತ್ತ ಪೊಲೀಸ್ ಅಧಿಕಾರಿ ಲೊಕೇಶ್ವರ್ ಮಾತನಾಡಿ ತಿಪಟೂರಿಗೆ ರಕ್ತ ನಿಧಿ ಕೇಂದ್ರ ಅವಶ್ಯಕತೆ ಇತ್ತು,ತುರ್ತು ಸಂದರ್ಭದಲ್ಲಿ ರಕ್ತಕ್ಕಾಗಿ ಸುಮಾರು 70ಕಿಲೋಮೀಟರ್ ಹೋಗಬೇಕಿತ್ತು, ಬ್ಲಡ್ ಬ್ಯಾಂಕ್ ನಿಂದ ಆರಂಭವಾಗಿರುವುದರಿಂದ ರೋಗಿಗಳಿಗೆ ನೆರವಾಗಲಿದೆ.ರಕ್ತದಾನಿಗಳು ಹೆಚ್ಚಿನ ರಕ್ತದಾನ ಮಾಡುವ ಮೂಲಕ ಸಂಕಷ್ಟದಲ್ಲಿ ಇರುವ ರೋಗಿಗಳಿಗೆ ನೆರವಾಗಬೇಕು ಎಂದು ತಿಳಿಸಿದರು.


ಶೇಖರ್ ರಕ್ತನಿಧಿ ಕೇಂದ್ರದ ಮುಖ್ಯಸ್ಥರಾದ ಡಾ//ಸೋಮಶೇಖರ್ ಮಾತನಾಡಿ ತಿಪಟೂರು, ಚಿಕ್ಕನಾಯ್ಕನಹಳ್ಳಿ,ತುರುವೇಕೆರೆ,ಅರಸೀಕೆರೆ,ಹೊಸದುರ್ಗ,ಸೇರಿದಂತೆ ಅಕ್ಕಪಕ್ಕದ ಮೂರ್ನಾಲ್ಕು ಜಿಲ್ಲೆಗಳ ಭಾಗದ ಜನರಿಗೆ,ರಕ್ತನಿಧಿ ಕೇಂದ್ರದಿಂದ ಉಪಯೋಗವಾಗಲಿದೆ, ನಾಲ್ಕುವರ್ಷಗಳಿಂದ ಸತತ ಪ್ರಯತ್ನದಿಂದ ಶಾಸಕರಾದ ಕೆ.ಷಡಕ್ಷರಿ , ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ಸಚಿವ ವಿ.ಸೋಮಣ್ಣ,ನಿವೃತ್ತ ಪೊಲೀಸ್ ಅಧಿಕಾರಿ ಲೋಕೇಶ್ವರ್ ರವರ ಪೋತ್ಸಾಹ ಹಾಗೂ ಸಹಕಾರದಿಂದ ರಕ್ತನಿಧಿ ಕೇಂದ್ರಕ್ಕೆ ಅನುಮೋದನೆ ದೊರೆಯಲು ಸಾಧ್ಯವಾಗಿತು,ನಮ್ಮ ರಕ್ತನಿಧಿ ಕೇಂದ್ರದಲ್ಲಿ,ಅತ್ಯಾಧುನಿಕ ಸೌಲಭ್ಯಗಳನ್ನ ಒಳಗೊಂಡ ಉತ್ತಮ ಸೇವೆ ನೀಡಲಾಗುವುದು, ರಕ್ತದಾನಿಗಳು ರಕ್ತವನ್ನ ದಾನಮಾಡುವ ಮೂಲಕ ನೆರವಾಗಬೇಕು ಎಂದು ತಿಳಿಸಿದರು
ಕಾರ್ಯಕ್ರಮದಲ್ಲಿ ನೊಣವಿನಕೆರೆ ಸೋಮಕಟ್ಟೆ ಕಾಡಸಿದ್ದೇಶ್ವರ ಮಠದ ಶ್ರೀಶ್ರೀ ಅಭಿನವ ಕಾಡಸಿದ್ದೇಶ್ವರ ಮಹಾಸ್ವಾಮೀಜಿ, ಹಾಗೂ ತಿಪಟೂರು ಗುರುಕುಲಾನಂದಾಶ್ರಮದ ಶ್ರೀಶ್ರೀ ಕರಿಬಸವ ದೇಶಿಕೇಂದ್ರ ಮಹಾಸ್ವಾಮೀಜಿಗಳು ದಿವ್ಯಸಾನಿಧ್ಯ ವಹಿಸಿದ್ದು, ಶ್ರೀಗಳ ಪಾದಪೂಜೆ ನೆರವೇರಿಸಲಾಯಿತು.ಅರಸೀಕೆರೆ ಶಾಸಕರಾದ ಕೆ.ಎಂ ಶಿವಲಿಂಗೆಗೌಡ .ಮಾಜಿ ಶಿಕ್ಷಣ ಸಚಿವ ಬಿ.ಸಿ ನಾಗೇಶ್.ನಗರಸಭೆಅಧ್ಯಕ್ಷರಾದಯಮುನಾಧರಣೇಶ್,ಉಪಾಧ್ಯಕ್ಷರಾದ ಮೇಘನ ಭೂಷಣ್,ಮುಖಂಡರಾದ ಸುಜೀತ್ ಭೂಷಣ್, ಮುಖಂಡರಾದ ಕೆ.ಟಿ ಶಾಂತಕುಮಾರ್ ಪ್ರಕಾಶ್,ರವಿ ಕುಮಾರ್, ಡಾ//ಶ್ರೀಧರ್.ಮಂಜುನಾಥ್ ಮುಂತ್ತಾದವರು ಉಪಸ್ಥಿತರಿದರು.

ವರದಿ :ಮಂಜುನಾಥ್ ಹಾಲ್ಕುರಿಕೆ

Exit mobile version