ತಿಪಟೂರು :- ತಾಲೂಕಿನ ಹೊನ್ನವಳ್ಳಿ ಹೋಬಳಿ ಹರಿಸಮುದ್ರ ಗ್ರಾಮದ ಐತಿಹಾಸಿಕ ಶ್ರೀ ತಿಮ್ಮಪ್ಪ ಸ್ವಾಮಿ ಹಾಗೂ ಶ್ರೀ ಆಂಜನೇಯ ಸ್ವಾಮಿ ದೇವಾಲಯದ ಜೀರ್ಣೋದ್ದಾರಕ್ಕೆ ಶ್ರೀಕ್ಷೇತ್ರ ಧರ್ಮಸ್ಥಳದಿಂದ ಒಂದು ಲಕ್ಷದ ಐವತ್ತು ಸಾವಿರ ರೂಪಾಯಿಯ ಸಹಾಯಧನದ ಡಿ ಡಿ ಯನ್ನು ತಾಲ್ಲೂಕು ಯೋಜನಾಧಿಕಾರಿ ಕೆ ಉದಯ್ ಗ್ರಾಮಸ್ಥರ ಸಮ್ಮುಖದಲ್ಲಿ ವಿತರಿಸಿ ಪೂಜ್ಯ ಕಾವಂದರು ಶ್ರೀಕ್ಷೇತ್ರದ ಮಂಜುನಾಥ ಸ್ವಾಮಿಯ ಸನ್ನಿಧಿಯಲ್ಲಿ ಭಕ್ತರು ಕಾಣಿಕೆ ರೂಪದಲ್ಲಿ ಹುಂಡಿಗೆ ಹಾಕಿದ ಭಕ್ತಿ ಕಾಣಿಕೆಯನ್ನು ಗ್ರಾಮೀಣ ಪ್ರದೇಶಗಳಲ್ಲಿನ ದೇವಾಲಯಗಳ ಜೀರ್ಣೋದ್ದಾರ ಹಾಗೂ ಧಾರ್ಮಿಕ ಕಾರ್ಯಗಳಿಗಾಗಿ ಪ್ರಸಾದ ರೂಪದಲ್ಲಿ ಹಣವನ್ನು ನೀಡುತ್ತಿದ್ದು ಇದು ಈ ಸಂಧರ್ಭಕ್ಕೆ ಈ ಗ್ರಾಮದ ದೇವಾಲಯದ ಕಾರ್ಯಕ್ಕೆ ಸಹಕರಿಯಾಗಲಿ ಎಂದರು ಈ ಸಂದರ್ಭದಲ್ಲಿ ಸಾಹಿತಿ ಸಾರ್ಥವಳ್ಳಿ ಶಿವಕುಮಾರ್ ಉಪಸ್ಥಿತರಿದ್ದು ಶ್ರೀಕ್ಷೇತ್ರ ಧರ್ಮಸ್ಥಳದ ಪೂಜ್ಯ ಡಾ. ವೀರೇಂದ್ರ ಹೆಗ್ಗಡೆಯವರು ಹಾಗೂ ಮಾತೃಶ್ರೀ ಹೇಮಾವತಿ ಅಮ್ಮನವರು ನಾಡಿನ ಐತಿಹಾಸಿಕ ದೇವಾಲಯಗಳನ್ನು ಜೀರ್ಣೋದ್ದಾರಕ್ಕೆ ಕಳೆದ 3 ದಶಕಗಳಿಂದ ಸಹಾಯಧ ನೀಡುತ್ತಿರುವುದು ನಮ್ಮ ಇತಿಹಾಸ ಪರಂಪರೆ ಹಾಗೂ ನಂಬಿಕೆಯ ಜೊತೆಗೆ ಜನರಲ್ಲಿ ಶ್ರದ್ಧಾ ಭಕ್ತಿ ಶಾಶ್ವತವಾಗಿ ಉಳಿಯುವಂತೆ ಮಾಡತ್ತಿರುವುದು ಹೆಮ್ಮೆಯ ವಿಷಯ ಇಂದು ಈ ಗ್ರಾಮದ ಪುರಾತನ ಶ್ರೀ ತಿಮ್ಮಪ್ಪ ಸ್ವಾಮಿ ದೇವಾಲಯಕ್ಕೆ ಸಹಾಯ ಧನ ನೀಡಿ ದೇಗುಲ ನೀರ್ಮಾಣಕ್ಕೆ ನೇರವಾಗಿದೆ ಪೂಜ್ಯರಿಗೆ ಮತ್ತು ಶ್ರೀ ಮಂಜುನಾಥ ಸ್ವಾಮಿಯವರಿಗೆ ಗ್ರಾಮವು ಭಕ್ತಿಪೂರ್ವಕ ನಮನಗಳನ್ನು ಸಲ್ಲಿಸುತ್ತದೆ ಎಂದರು ಗ್ರಾಮದ ನಿವೃತ್ತ ಶಿಕ್ಷಕ ಅಡವಿಶಪ್ಪ ಶಿವಕುಮಾರ್ ಚನ್ನಬಸವಯ್ಯ ಸೋಮಶೇಖರ್ ಕುಮಾರ್ ಅರ್ಚಕ ಕೃಷ್ಣಮುರ್ತಿ ಪ್ರಸನ್ನಕುಮಾರ್ ಸೇರಿದಂತೆ ಯುವ ಮುಖಂಡರು ಗ್ರಾಮಸ್ಥರು ಉಪಸ್ಥಿತರಿದ್ದರು
ತಾಲೂಕಿನ ಹೊನ್ನವಳ್ಳಿ ಹೋಬಳಿ ಹರಿಸಮುದ್ರ ಗ್ರಾಮದ ಐತಿಹಾಸಿಕ ಶ್ರೀ ತಿಮ್ಮಪ್ಪ ಸ್ವಾಮಿ ಹಾಗೂ ಶ್ರೀ ಆಂಜನೇಯ ಸ್ವಾಮಿ ದೇವಾಲಯದ ಜೀರ್ಣೋದ್ದಾರಕ್ಕೆ ಶ್ರೀಕ್ಷೇತ್ರ ಧರ್ಮಸ್ಥಳದಿಂದ ಒಂದು ಲಕ್ಷದ ಐವತ್ತು ಸಾವಿರ ರೂಪಾಯಿಯ ಸಹಾಯಧನದ
