KALPATHARU KRANTHI

ಫೆ. ೨ ರಂದು ಕೆರೆಗೋಡಿ-ರಂಗಾಪುರ ಸುಕ್ಷೇತ್ರದಲ್ಲಿ ಶ್ರೀ ಗುರು ಸಪ್ತಾಹ

Spread the love

ತಿಪಟೂರು : ತಾಲೂಕಿನ ಕೆರೆಗೋಡಿ-ರಂಗಾಪುರ ಸುಕ್ಷೇತ್ರದಲ್ಲಿ ಸುಕ್ಷೇತ್ರಾಧ್ಯಕ್ಷರಾದ ಶ್ರೀ ಗುರುಪರದೇಶಿಕೇಂದ್ರ ಸ್ವಾಮೀಜಿಯವರ ನೇತೃತ್ವದಲ್ಲಿ ಶ್ರೀ ಗುರು ಸಪ್ತಾಹ ಪ್ರಾರಂಭವಾಗಿದ್ದು ಇದರ ಅಂಗವಾಗಿ ಹಮ್ಮಿಕೊಂಡಿರುವ ಧಾರ್ಮಿಕ ಸಮಾರಂಭವು ಫೆ. ೨ರ ಭಾನುವಾರದಂದು ನಡೆಯಲಿದ್ದು ಸಭೆಯ ಉದ್ಘಾಟನೆಯನ್ನು ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆಗಳ ರಾಜ್ಯ ಸಚಿವÀ ವಿ. ಸೋಮಣ್ಣ ನೆರವೇರಿಸಲಿದ್ದಾರೆ. ಒಂದು ವಾರಗಳ ನಡೆಯುವ ಗುರುಸಪ್ತಾಹ ಕಾರ್ಯಕ್ರಮದಲ್ಲಿ ಬೆಳ್ಳಿ ರಥದಲ್ಲಿ ಐದನೇ ಶ್ರೀಗಳ ಪಾದುಕೆಗಳ ಉತ್ಸವ, ನಂದಾದೀಪ ಸ್ಥಾಪನೆಯೊಂದಿಗೆ ಪ್ರಾರಂಭವಾಗಿದ್ದು, ಅಖಂಡ ಭಜನೆ, ಶಿವಾನುಭವ ಗೋಷ್ಠಿ, ಶರಣ ತತ್ವ ಚಿಂತನೆ ಕಾರ್ಯಕ್ರಮಗಳು ನಡೆಯಲಿವೆ. ಫೆ. ೨ರಂದು ಬೆಳಗ್ಗೆ ೧೧.೩೦ಕ್ಕೆ ಧಾರ್ಮಿಕ ಸಮಾರಂಭದ ಸಾನಿಧ್ಯವನ್ನು ಸುಕ್ಷೇತ್ರಾಧ್ಯಕ್ಷರಾದ ಶ್ರೀ ಗುರುಪರದೇಶಿಕೇಂದ್ರ ಸ್ವಾಮೀಜಿ ವಹಿಸಲಿದ್ದು, ಶಾಸಕ ಕೆ. ಷಡಕ್ಷರಿ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಾಜಿ ಲೋಕಸಭಾ ಸದಸ್ಯ ಜಿ.ಎಸ್. ಬಸವರಾಜು, ಮಾಜಿ ಸಚಿವರಾದ ಜೆ.ಸಿ. ಮಾಧುಸ್ವಾಮಿ, ಬಿ.ಸಿ. ನಾಗೇಶ್ ಮತ್ತಿತರರು ಭಾಗವಹಿಸಲಿದ್ದು ನಿವೃತ್ತ ಉಪನ್ಯಾಸಕ ಪಂಡಿತ್ ತಗಡೂರು ವೀರಭದ್ರಪ್ಪ ಉಪನ್ಯಾಸ ನೀಡಲಿದ್ದಾರೆ. ನಂತರ ಎಸ್‌ಪಿಎಸ್ ವಿದ್ಯಾಮಂದಿರ ಹಾಗೂ ಗ್ಲೋಬಲ್ ಇಂಗ್ಲೀಷ್ ಶಾಲೆ ವತಿಯಿಂದ ವಿಜ್ಞಾನ ವಸ್ತು ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಫೆ.೪ರಂದು ಎಸ್‌ಪಿಎಸ್ ವಿದ್ಯಾಪೀಠದ ಶಾಲಾ ಕಾಲೇಜುಗಳ ವಾರ್ಷಿಕೋತ್ಸವ ಮತ್ತು ಹಿರಿಯ ವಿದ್ಯಾರ್ಥಿ ಹಾಗೂ ಕ್ಷೇತ್ರಾಭಿಮಾನಿಗಳ ಸಂಘದ ವತಿಯಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಯು.ಕೆ. ಶಿವಪ್ಪ ವಹಿಸಲಿದ್ದು, ಉಪವಿಭಾಗಾಧಿಕಾರಿ ಸಪ್ತಶ್ರೀ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಚ್.ಕೆ. ಮನಮೋಹನ್, ಬಿಇಓ ಚಂದ್ರಯ್ಯ, ಸಂಘದ ಸಹ ಕಾರ್ಯದರ್ಶಿ ಕೆ.ಆರ್. ಶಂಕರಪ್ಪ, ಪ್ರಧಾನ ಕಾರ್ಯದರ್ಶಿ ಯು.ಎಸ್. ಬಸವರಾಜು ಮತ್ತಿತರರು ಭಾಗವಹಿಸಲಿದ್ದು, ನಿವೃತ್ತ ಶಿಕ್ಷಕ ತಿಮ್ಮಯ್ಯ ಉಪನ್ಯಾಸ ನೀಡಲಿದ್ದಾರೆ. ಅಂದು ರಾತ್ರಿ ೧೦.೩೦ಕ್ಕೆ ಶ್ರೀ ಶಂಕರೇಶ್ವರಸ್ವಾಮಿಯವರ ಉತ್ಸವವು ವಿವಿಧ ಜಾನಪದ ಕಲಾತಂಡಗಳೊAದಿಗೆ ನಡೆಯಲಿದೆ. ಫೆ.೫ರಂದು ಶ್ರೀ ಗುರುಸಪ್ತಾಹ ಮುಕ್ತಾಯವಾಗಲಿದ್ದು ರಥಸಪ್ತಮಿ ಪ್ರಯುಕ್ತ ಕೆರೆಗೋಡಿಯಲ್ಲಿ ಶ್ರೀಶಂಕರೇಶ್ವರಸ್ವಾಮಿಯವರ ಸೂರ್ಯಮಂಡಲೋತ್ಸವ ನಡೆಯಲಿದೆ. ಈ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಶ್ರೀ ಗುರುಪರದೇಶಿಕೇಂದ್ರ ಸ್ವಾಮೀಜಿ ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಶ್ರೀ ಗುರುಪರದೇಶಿಕೇಂದ್ರ ಸ್ವಾಮೀಜಿಯವರ ಫೋಟೋ ೩೦-ಟಿಪಿಟಿ೪ರಲ್ಲಿ ಕಳುಹಿಸಲಾಗಿದೆ.

ವರದಿ: ಸಂತೋಷ್ ಓಬಳ. ಗುಬ್ಬಿ

Exit mobile version