ನಗರದ ಹಿಂಡಿಸ್ಕೆರೆ ಗೇಟ್ ಜಾಕಿ ಹಾಗೂ ವೇರ್ ವೆಲ್ ಗಾರ್ಮೇಂಟ್ಸ್ ಆಟೋ ನಿಲ್ದಾಣದಲ್ಲಿ ,ತಿಪಟೂರು ನಗರಪೊಲೀಸ್ ಠಾಣೆ ಹಾಗೂ ಶ್ರಿಜೈ ಮಾರುತಿ ಆಟೋ ಚಾಲಕರು ಹಾಗೂ ಮಾಲೀಕರ ಸಂಘದಿಂದ, ಆಟೋ ಚಾಲಕರಿಗೆ ರಸ್ತೆ ಸುರಕ್ಷತಾ ಸಪ್ತಹದ ಅಂಗವಾಗಿ ಜಾಗೃತಿ ಕಾರ್ಯಕ್ರಮ ನಡೆಸಲಾಯಿತು.
ತಿಪಟೂರು ನಗರಪೊಲೀಸ್ ಠಾಣೆ ಅಸಿಸ್ಟೆಂಟ್ ಸಬ್ ಇನ್ಪೆಕ್ಟರ್ ರಾಮಣ್ಣ ರಸ್ತೆ ಸುರಕ್ಷತಾ ಸಪ್ತಹಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮ ಉದೇಶಿಸಿ ಮಾತನಾಡಿದ ಅವರು ಆಟೋ ಚಾಲಕರು, ಸಂಚಾರಿ ನಿಯಮಗಳನ್ನ ಕಡ್ಡಾಯವಾಗಿ ಪಾಲಿಸಬೇಕು,ಪ್ರಯಾಣಿಕರು ನಿಮಗೆ ಅನ್ನ ಕೊಡುವ ದೇವರಿದ್ದಹಾಗೆ, ಅವರ ಸುರಕ್ಷತೆ ಜೊತೆ ನಿಮ್ಮ ಸುರಕ್ಷತೆಗೂ ಆಧ್ಯತೆ ನೀಡಿ,ಪ್ರತಿಯೊಬ್ಬ ಆಟೋ ಚಾಲಕರು ಕಡ್ಡಾಯವಾಗಿ, ಸಮವಸ್ತ್ರಧರಿಸಿ ಆಟೋ ಚಲಾಯಿಸಬೇಕು,ಆಟೋ ಎಮಿಷನ್ ಟೆಸ್ಟ್,ಮಾಡಿಸಿ,ಕಡ್ಡಾತವಾಗಿ ಇನ್ಸುರೇನ್ಸ್ ಮಾಡಿಸಿ,ಅಪಘಾತಗಳು ಹೇಳಿಕೇಳಿ ಆಗುವುದಿಲ್ಲ ಆಕಸ್ಮಿಕ ಅಪಘಾತ ಸಂದರ್ಭಗಳಲ್ಲಿ ನಿಮ್ಮ ಹಾಗೂ ನಿಮ್ಮ ಕುಟುಂಬಗಳ ಸುರಕ್ಷತೆಗಾಗಿ ನೆರವಾಗುತ್ತವೆ,ಆಟೋ ಚಾಲಕರು ವಾಹನಗಳನ್ನ ಅಡ್ಡಾದಿಡ್ಡಿಯಾಗಿ ಓಡಿಸುತ್ತಾರೆ ಎನ್ನುವ ಸಾರ್ವಜನಿಕರಲಿ ಆಪಾದನೆಗಳಿದ್ದು, ಸಂಚಾರಿ ನಿಯಮ ಪಾಲನೆಮಾಡಿ ಸುರಕ್ಷಿತವಾಗಿ ವಾಹನ ಚಲಾಯಿಸಿ,ನಿಮ್ಮ ವೃತ್ತಿಗೆ ಅಗೌರವ ತಂದುಕೊಳ್ಳ ಬೇಡಿ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿಡಿ.ಎಸ್.ಎಸ್ ತಾಲ್ಲೋಕು ರಾಜು ಬೆಣ್ಣೆನಹಳ್ಳಿ,ಜೈ ಮಾರುತಿ ಆಟೋ ಚಾಲಕರ ಸಂಘದ ಅಧ್ಯಕ್ಷ ಮಹೇಶ್,ಉಪಾಧ್ಯಕ್ಷರಾದ ರಂಗಸ್ವಾಮಿ,ಪುಟ್ಟೆಗೌಡ,ಖಜಾಂಚಿ ಹರ್ಷ,ಜವರೇಗೌಡ,ಯತೀಶ್,ನವೀನ್,ನಾಗೇಶ್,ರಾಜು,ವಸಂತಕುಮಾರ್,ಗಿರೀಶ,ವಿಕಾಸ್,ರಾಮಣ್ಣ,ತೇಜುಅರುಣ್,ನಾಗೇಶ್ ಮುಂತ್ತಾದವರು ಉಪಸ್ಥಿತರಿದರು
ವರದಿ :ಮಂಜುನಾಥ್ ಹಾಲ್ಕುರಿಕೆ