*
ತುಮಕೂರು ಜಿಲ್ಲೆ ತಿಪಟೂರು. ನಗರದ ಕೃಷಿ ಉತ್ವನ್ನ ಮಾರುಕಟ್ಟೆಯಲ್ಲಿ ಸೋಮವಾರ ರಾತ್ರಿ ಕಳ್ಳರು ಲಕ್ಷಾಂತರ ಮೌಲ್ಯದ ಸುಮಾರು 3635 ಕೆಜಿ ಕೊಬ್ಬರಿ ಕಳವು ಮಾಡುವ ಮೂಲಕ ಕೈಚಳಕ ತೋರಿಸಿದ್ದಾರೆ.
ಎಪಿಎಂಸಿ ಮಾರುಕಟ್ಟೆಯ ಮುಖ್ಯ ದ್ವಾರದ ಬೀಗ ಒಡೆದು ಕಳ್ಳರು ಘಟಕಿನಕೆರೆ ಮೂಲದ ನಾಗರಾಜ್ ಎಂಬುವರ ಒಡೆತನಕ್ಕೆ ಸೇರಿದ ಗಂಗಾ ಟ್ರೇಡರ್ಸ್ ನ ಕಂಪೌಂಡ್ ಹಾಗೂ ಅಂಗಡಿ ಬಾಗಿಲು ಬೀಗ ಮುರಿದು 3645 ಕೆ.ಜಿ ತೂಕದ ಕೊಬ್ಬರಿಯನ್ನು ಕಳ್ಳತನ ಮಾಡಲಾಗಿದೆ. ಏಷಿಯಾ ಖಂಡದಲ್ಲಿಯೇ ದೊಡ್ಡ ಮಾರುಕಟ್ಟೆಯ ಕಾವಲುಗಾರರ ಕಣ್ ತಪ್ಪಿಸಿ ಕಳವು ಮಾಡಿರುವುದು ಹಲವಾರು ಅನುಮಾನಗಳಿಗೆ ಎಡೆಮಾಡಿಕೊಟ್ಟಿದು.
ಮಾರುಕಟ್ಟೆಯಲ್ಲಿ ಭದ್ರತಾ ವೈಪಲ್ಯಕ್ಕೆ ಸಾಕ್ಷಿಯಾಗಿದೆ
ಬಲ್ಲಮೂಲಗಳ ಪ್ರಕಾರ, 4ಟನ್ ಕೊಬ್ಬರಿಯನ್ನ ಲಾರಿಯಲ್ಲಿ ತುಂಬಿ ಸಾಗಿಸಲಾಗಿದೆ ಇಷ್ಟೊಂದು ರಾಜಾರೋಷವಾಗಿ ಕಳ್ಳತನವಾಗಿರುವುದು, ಎಪಿಎಂಸಿ ಮಾರುಕಟ್ಟೆ ವೈಪಲ್ಯವನ್ನ ತೋರಿಸುತ್ತಿದ್ದು,
ಕಳ್ಳರು ಪೂರ್ವ ನಿಯೋಜಿತ ಸಂಚುರೂಪಿಸಿ ಕಳ್ಳತನ ಮಾಡಿದ್ದಾರೆ.
ಕದಿಯಲು ಬಂದ ಕಳ್ಳರು ಚಾಕು ಹಾಗೂ ಕಾರದ ಪುಡಿಯನ್ನು ತಂದಿದ್ದು, ಕಾರದಪುಡಿಯನ್ನು ಅಲ್ಲೇ ಚೆಲ್ಲಿ ಹೋಗಿದ್ದಾರೆ.
ಸ್ಥಳಕ್ಕೆ ಎಪಿಎಂಸಿ ಅಧಿಕಾರಿಗಳು,ತಿಪಟೂರು ಡಿವೈಎಸ್ಪಿ ವಿನಾಯಕ ಶೆಟ್ಟಿಗೇರಿ ನಗರಠಾಣೆ ವೃತ್ತ ನಿರೀಕ್ಷಕ ವೆಂಕಟೇಶ್, ಸಬ್ ಇನ್ಪೆಕ್ಟರ್ ಕೃಷ್ಣಪ್ಪ ಭೇಟಿ ನೀಡಿದ್ದು,
ವಿಶೇಷ ತನಿಖಾ ತಂಡ ರಚನೆ ಮಾಡಲಾಗಿದ್ದು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳಲಾಗಿದ್ದು, ಸಿಸಿ ಕ್ಯಾಮರ ದೃಶ್ಯಾವಳಿಗಳ ಆಧಾರದ ಮೇಲೆ ಪೊಲೀಸರು ತನಿಖೆಯನ್ನು ಕೈಗೆತ್ತಿಕೊಂಡಿದ್ದಾರೆ.
ವರದಿ:ಮಂಜುನಾಥ್ ಹಾಲ್ಕುರಿಕೆ