KALPATHARU KRANTHI

ತಿಪಟೂರು ವೈಭವಿ ಆಸ್ಪತ್ರೆ ಮೇಲೆ ಕೆಲ ಮಾಧ್ಯಮಗಳಲ್ಲಿ ಬಂದಿರುವ ಸುದ್ದಿ ನಿರಾಧಾರ : ಡಾ//ಮಧುಸೂಧನ್

20250128_115832
Spread the love

ಜನವರಿ 10 ರಂದು ತಿಪಟೂರು ತಾಲ್ಲೋಕಿನ ರಂಗಾಪುರ ಗ್ರಾಮದ ಕವನ ಎನ್ನು ಸುಮಾರು 14 ಹುಡುಗಿ ಚಿಕಿತ್ಸೆಗಾಗಿ ವೈಭವಿ ಮಲ್ಟಿಸ್ಪೆಷಲಿಟಿ ಹಾಸ್ಪೆಟಲ್ ನಲ್ಲಿ ಬಹುಅಂಗಾಗ ವೈಪಲ್ಯ ಚಿಕಿತ್ಸೆಗೆ ಒಳಗಾಗಿದ್ದು, ಮಗುವಿಗೆ ನಮ್ಮ ಹಾಸ್ಪೆಟಲ್ ನಲ್ಲಿ ದೊರೆಯುವ ಎಲ್ಲಾ ಚಿಕಿತ್ಸೆ ಸಹ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರು ಉನ್ನತ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಸೂಚನೆ ನೀಡದ್ದು ಚಿಕಿತ್ಸೆಯಲ್ಲಿ ಯಾವುದೇ ಲೋಪವಾಗಿರುವುದಿಲ್ಲ, ಕೆಲಮಾಧ್ಯಮಗಳಲ್ಲಿ ಬಂದಿರುವ ಸುದ್ದಿ ನಿರಾಧಾರವಾಗಿದ್ದು ದುರುದೇಶಪೂರಿತವಾಗಿದೆಎಂದು ವೈಭವಿ ಆಸ್ಪತ್ರೆ ವೈದ್ಯಾಧಿಕಾರಿ ಡಾ//ಮಧುಸೂಧನ್ ತಿಳಿಸಿದರು.

ತುಮಕೂರು ಜಿಲ್ಲೆ ತಿಪಟೂರು ನಗರದ ಭಾರತೀಯ ವೈದ್ಯಕೀಯ ಸಂಘದ ಆವರಣದಲ್ಲಿ ಆಯೋಜಿಸಿದ ಪತ್ರಿಕಾ ಘೋಷ್ಠಿಯಲ್ಲಿ ಮಾಧ್ಯಮ ಘೋಷ್ಠಿ ಉದೇಶಿಸಿ ಮಾತನಾಡಿದ ಡಾ// ಮಧುಸೂಧನ್,ನಮ್ಮ ಹಾಸ್ಪೆಟಲ್ ಗೆ ಚಿಕಿತ್ಸೆಗಾಗಿ ಬಂದಿದ್ದ ಕವನ ಎನ್ನುವ ಸುಮಾರು 14 ವರ್ಷದ ಹುಡುಗಿ ಮೊದಲು ಶ್ರೀದೇವಿ ಮಕ್ಕಳ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿ, ವೈದ್ಯರ ಸೂಚನೆ ಮೇರೆಗೆ ವೈಭವಿ ಆಸ್ಪತ್ರೆಗೆ ದಾಖಲಿಸಲಾಗಿದ್ದು,ಮಗು ನಮ್ಮ ಆಸ್ಪತ್ರೆಗೆ ದಾಖಲಿಸಿಕೊಂಡು ತುರ್ತು ಚಿಕಿತ್ಸೆ ಸಹ ,ನೀಡಲಾಗಿದೆ.ಮಗುವಿನ ನಾಡಿಮಿಡಿತ ಹಾಗೂ ತೀವ್ರ ಉಸಿರಾಟದತೊಂದರೆ,ತೊಂದರೆಗೆ ಒಳಗಾಗಿತ್ತು,ತಕ್ಷಣ ತುರ್ತುಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಉನ್ನತ ಆಸ್ಪತ್ರೆಗೆ,ಕರೆದುಕೊಂಡು ಹೋಗಲು ಸೂಚಿಸಿದ್ದೇವು, ಹೆಚ್ಚಿನ ಚಿಕಿತ್ಸೆಗೆ ಕರೆದುಕೊಂಡು ಹೋಗುವ ವೇಳೆ ಹುಡುಗಿ ಸಾವನ್ನಪ್ಪಿದೆ, ಆದರೆ ಕೆಲ ಮಾಧ್ಯಮಗಳು ನಮ್ಮ ಆಸ್ಪತ್ರೆಯಿಂದ ಸೂಕ್ತ ಚಿಕಿತ್ಸೆ ನೀಡದೆ ಕರ್ತವ್ಯ ಲೋಪವೆಸಗಲಾಗಿದೆ ಎಂದು ಸುಳ್ಳು ಸುದ್ದಿ ಮಾಡುತ್ತಿರುವುದು, ಸರಿಯಲ್ಲ, ಪ್ರಾಣಾಪಾಯದಲ್ಲಿ ಇದ್ದ ಹುಡುಗಿಗೆ ನಮ್ಮ ಶಕ್ತಿ ಮೀರಿ ತುರ್ತು ಚಿಕಿತ್ಸೆ ನೀಡಿದ್ದೇವೆ ಆದರೆ ಸುಳ್ಳು ಆರೋಪದ ಸುದ್ದಿ ನೋಡಿ, ನಮಗೆ ಆಘಾತವಾಗಿದೆ, ಪ್ರಾಮಾಣಿಕವಾಗಿ ಕೆಲಸ ಮಾಡುವವರ ಮೇಲೆ ಸುಳ್ಳು ಆರೋಪ ಮಾಡಿದರೆ,ತುರ್ತು ಸಂದರ್ಭದಲ್ಲಿ ಚಿಕಿತ್ಸೆ ನೀಡಲು ಮಾನಸಿಕ ಸ್ಥೈರ್ಯ ಕುಗಿಸುವ ಕೆಲಸವಾಗುತ್ತದೆ,ನಾನು ಆತ್ಮಸಾಕ್ಷಿಯಿಂದ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇವೆ. ನಮ್ಮ ಆಸ್ಪತ್ರೆ ವಿರುದ್ದ ಯಾರಾದರೂ ಪೂರ್ವಾಗ್ರಹ ಪೀಡಿತರಾಗಿ, ದುರುದೇಶಪೂರಕವಾಗಿ ಅಪಪ್ರಚಾರ ಮಾಡಿದರೇ ಕಾನೂನು ಕ್ರಮಕ್ಕೆ ಮುಂದಾಗುತ್ತೇವೆ ಎಂದು ತಿಳಿಸಿದರು.
ಪತ್ರಿಕಾ ಘೋಷ್ಠಿಯಲ್ಲಿ ಉಪಸ್ಥಿತರಿದ ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷ ಡಾ//ರಾಮೇಗೌಡ ಮಾತನಾಡಿ ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದ ಮಗುವಿಗೆ,ತುರ್ತು ಚಿಕಿತ್ಸೆ ನೀಡಲಾಗಿದೆ ಆದರೆ ದುರುದೇಶ ಪೂರಕವಾಗಿ ಮಾಧ್ಯಮಗಳಲ್ಲಿ ನಿರಾಧಾರ ಆರೋಪಮಾಡಿ,ಆತ್ಮಸ್ಥೈರ್ಯ ಕುಗ್ಗಿಸುವ ಕೆಲಸ ಮಾಡಿದರೆ ವೈದ್ಯರು ತುರ್ತು ಸಂದರ್ಭಗಳಲ್ಲಿ ಹೇಗೆ ತಾವೇ ಧೈರ್ಯವಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು,


ಕುಮಾರ್ ಅಸ್ಪತ್ರೆಯ ವೈದ್ಯಾಧಿಕಾರಿ ಡಾ//ಶ್ರೀಧರ್ ಮಾತನಾಡಿ ವೈದ್ಯರು ಸಹ ಮನುಷ್ಯರೇ ನಾವೇನು ದೇವರಲ್ಲ, ನಾವೂ ಪ್ರತಿಯೊಬ್ಬ ರೋಗಿಯನ್ನ ಬದುಕಿಸಬೇಕು ಎನ್ನುವ ಆಸೆಯಿಂದ ಚಿಕಿತ್ಸೆ ನೀಡುತ್ತೇವೆ,ಆದರೆ ನಮ್ಮ ಕೈಮೀರಿ ಸಾವು ನೋವುಗಳು ಸಂಭವಿಸಿದರೆ, ನಾವೇನು ಮಾಡಲು ಸಾಧ್ಯ,ವೈಭವಿ ಆಸ್ಪತ್ರೆಯಲ್ಲಿ ಮಗುವಿಗೆ ಚಿಕಿತ್ಸೆ ನೀಡುವಾಗ ಮಗು ಸಂಪೂರ್ಣ ಅಸ್ವಸ್ಥಗೊಂಡಿದ್ದು ಬಹುಅಂಗಾಗ ವೈಪಲ್ಯಕ್ಕೆ ಒಳಗಾಗಿದ್ದ,ಮಗುವಿಗೆ ಆಸ್ಪತ್ರೆಯಲ್ಲಿ ಇರುವ ಎಲ್ಲಾಸೌಲಭ್ಯ ಬಳಸಿ ಚಿಕಿತ್ಸೆ ನೀಡಿದರು ಮಾಧ್ಯಮಗಳಲ್ಲಿ ಆರೋಪ ಮಾಡಿರುವುದು ಸರಿಯಲ್ಲ ಎಂದು ತಿಳಿಸಿದರು
ಡಾ//ವಿವೇಚನ್ ಮಾತನಾಡಿ ವೈಭವಿ ಆಸ್ಪತ್ರೆಯಲ್ಲಿ ಮಗುವಿಗೆ ಎಲ್ಲಾ ರೀತಿ ಚಿಕಿತ್ಸೆ ನೀಡಲಾಗಿದೆ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಯ ಕರ್ತವ್ಯ ಲೋಪವಾಗಿಲ್ಲ,ಎಂದು ತಿಳಿಸಿದರು
ಪತ್ರಿಕಾ ಘೋಷ್ಠಿಯಲ್ಲಿ ಉಪಸ್ಥಿತರಿದ ಸ್ತ್ರೀ ಹಾಗೂ ಪ್ರಸೂತಿ ತಜ್ಞ ವೈದ್ಯರಾದ ಡಾ//ರವಿ ಮಾತನಾಡಿ ತಿಪಟೂರಿನಿಂದ ಹಾಸನ ಆಸ್ಪತ್ರೆ ,ತುಮಕೂರು ಆಸ್ಪತ್ರೆ, ಬೆಂಗಳೂರು ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿಯೇ ಅನೇಕ ರೋಗಿಗಳ ಪ್ರಾಣಹಾನಿಯಾಗಿರುವ ಉದಾಹರಣೆಗಳಿವೆ,ವೈಭವಿ ಮಲ್ಟಿ ಸ್ಪೆಷಲಿಟಿ ಆಸ್ಪತ್ರೆಯಲ್ಲಿ ಅತ್ಯಾಧುನಿಕ ಸೌಲಭ್ಯವಿದ್ದು, ಮಕ್ಕಳಿಗೆ ಉತ್ತಮ ವೈದ್ಯಕೀಯ ಸೌಲಭ್ಯ ನೀಡಲಾಗುತ್ತಿದೆ,ಆದರೇ ಆಸ್ಪತ್ರೆಗೆ ಬರುವ ಮೊದಲೇ ರೋಗಿ ತೀವ್ರವಾದ ಕಾಯಿಲೆಗೆ ಒಳಗಾಗಿದರೆ ನಮ್ಮ ಅಸ್ಪತ್ರೆಯ ಸೌಲಭ್ಯಗಳು ಹಾಗೂ ವೈದ್ಯರು ಶಕ್ತಿಮೀರಿ ಪ್ರಯತ್ನಿಸಿದರು ಜೀವ ಉಳಿಸಲು ಸಾಧ್ಯವಾಗುವುದಿಲ್ಲ,ಎಂದು ತಿಳಿಸಿದರು
ಪತ್ರಿಕಾ ಘೋಷ್ಠಿಯಲ್ಲಿ ವೈದ್ಯರಾದ ಡಾ//ನಟರಾಜ್ ಡಾ//ಅನೀಲ್.ಡಾ//ಕಿರಣ್ ಉಪಸ್ಥಿತರಿದರು

ವರದಿ:ಮಂಜುನಾಥ್ ಹಾಲ್ಕುರಿಕೆ

Exit mobile version