ತಿಪಟೂರು ನಗರದ ಹಣ್ಣು ಮತ್ತು ತರಕಾರಿ ಮಾರುಕಟ್ಟೆ ಯಲ್ಲಿ ರಾತ್ರಿ ಸುಮಾರು 8ಗಂಟೆ ಸಮಯದಲ್ಲಿ ಹೂವಿನ ತೊಡಗಿದ, ತಿಪಟೂರು ನಗರದ ಕೋಟೆ ವಾಸಿ ಸಂತೋಷ್ ಉರುಫ್ ಸಂತು ಎನುವವನಿಗೆ ಚಾಕುವಿನಿಂದ ಇರಿಯಾಲಾಗಿದ್ದು, ಗಾಯಾಳು ಸಂತೋಷ್ ತಿಪಟೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದಾನೆ
ತಿಪಟೂರು ನಗರದ ಹಳೇಪಾಳ್ಯದ ತನ್ನ ಮಾವನ ಮನೆಯಲ್ಲಿ ವಾಸವಾಗಿದ್ದ ಆನಂದ ಹೂವು ತರಕಾರಿ ಮಾರುಕಟ್ಟೆಯಲ್ಲಿ ಹೂವಿನ ಅಂಗಡಿಗೆ ಕೆಲಸಕ್ಕೆ ಹೋಗುತ್ತಿದ್ದ ಎನ್ನಲಾಗಿದ್ದು
ಸಂಜೆ ಬಾರ್ ನಲ್ಲಿ ಸಂತು ಮತ್ತು ಆನಂದ ಜೊತೆಯಾಗಿ ಎಣ್ಣೆ ಕುಡಿದಿದ್ದಾರೆ,ಎಣ್ಣೆ ಜಾಸ್ತಿಯಾಗಿ ಇಬ್ಬರ ನಡುವೆ ಜಗಳವಾಗಿದ್ದು, ಬಾರ್ ನಲ್ಲಿ ಜಗಳವಾಡಿಕೊಂಡ ಇಬ್ಬರನ್ನು ಬಾರ್ ನಿಂದ ಆಚೆಕಳಿಸಲಾಗಿದ್ದು,ಬಾರ್ ನಿಂದ ಬಂದ ಸಂತೋಷ್ ಹೂವು ಮತ್ತು ಹಣ್ಣು ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡುತ್ತಿದ್ದಾಗ ಅಂಗಡಿ ಬಳಿ ಬಂದ ಆನಂದ್ ಜಗಳ ತೆಗೆದು, ಸಂತೋಷ್ ಗೆ ಚಾಕುವಿನಿಂದ ಚುಚ್ಚಿದ್ದಾನೆ,ತಕ್ಷಣ ಸ್ಥಳೀಯರು ಸಂತೋಷ್ ನನ್ನು ತಿಪಟೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದ್ದು,ಸ್ಥಳಕ್ಕೆ ತಿಪಟೂರು ನಗರಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು,ತನಿಖೆ ಕೈಗೊಳ್ಳಲಾಗಿದೆ.
ವರದಿ:ಮಂಜುನಾಥ್ ಹಾಲ್ಕುರಿಕೆ