ತಿಪಟೂರು: ಕಾಂಗ್ರೇಸ್ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳ ಜನವಿರೋಧಿ ಆಡಳಿತ ಭ್ರಷ್ಟಚಾರ ,ಸ್ವಜನ ಪಕ್ಷಪಾತ ಹಾಗೂ ಕೋಮುಮನಸ್ಥಿತಿಯಿಂದ ದೇಶ ಹಾಗೂ ರಾಜ್ಯದಲ್ಲಿ ಜನ ಬೇಸತ್ತಿದ್ದಾರೆ,ದೇಶಕ್ಕೆ ತೃತೀಯ ಶಕ್ತಿಯ ಅವಶ್ಯವಿದ್ದು, ಪರ್ಯಾಯ ರಾಜಕೀಯ ಪಕ್ಷ ಸ್ಥಾಪನೆಗೆ ,ಬಹುಜನ ಚಳುವಳಿ ,ದಲಿತಚಳುವಳಿರೈತ ಚಳುವಳಿ ಹಾಗೂ ಸಮಾನಮನಸ್ಕ ರಾಜಕೀಯ ಮುಖಂಡರು ಪರ್ಯಾಯ ಪಕ್ಷ ಸಂಘಟನೆಗೆ ಮುಂದಾಗಿದ್ದು ಸದ್ಯದಲ್ಲಿಯೇ ಹೊಸ ಪಕ್ಷ ಉದಯವಾಗಲಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಹಾಗೂ ರಿಪಬ್ಲಕ್ ಪಾರ್ಟಿ ಅಫ್ ಇಂಡಿಯಾ(ಬಿ)ಅಧ್ಯಕ್ಷ ಡಾ//ಎನ್ ಮೂರ್ತಿ ತಿಳಿಸಿದರು.
ತುಮಕೂರು ಜಿಲ್ಲೆ ತಿಪಟೂರು ನಗರದ ಕಲ್ಪತರುಗ್ರಾಂಡ್ ಹೋಟೆಲ್ ಸಭಾಂಗಣದಲ್ಲಿ ಆಯೋಜಿಸಿದ ಕರ್ನಾಟಕ ದಲಿತ ಸಂಘರ್ಷ ಸಮಿತಿ (ದಾದಾ ಸಾಹೇಬ್ ಎನ್.ಮೂರ್ತಿ ಸ್ಥಾಪಿತ ) ಹಾಗೂ ರಿಪಬ್ಲಿಕನ್ ಪಾರ್ಟಿ ಅಫ್ ಇಂಡಿಯಾ ವತಿಯಿಂದ ಆಯೋಜಿಸಿದ ಬಹುಜನರ ಸಮಸ್ಯೆಗಳ ನಿಷ್ಕರ್ಷೆ ಹಾಗೂ ಪುನಶ್ಚೇತನ ಹಾಗೂ ಜಿಲ್ಲಾಕಾರ್ಯಕಾರಿಣಿ ಸಭೆ ನಡೆಸಿ ನಂತರ ಪತ್ರಿಕಾ ಘೋಷ್ಠಿಯಲ್ಲಿ ಮಾತನಾಡಿದ ಡಾ//ಎನ್ .ಮೂರ್ತಿ ದೇಶದಲ್ಲಿ ನೈತಿಕ ರಾಜಕಾರಣ ನಾಶವಾಗಿದೆ, ಭ್ರಷ್ಟ ಹಾಗೂ ಕೋಮುವಾದಿ ರಾಜಕಾರಣ ಮೇಳೈದುತ್ತಿದ್ದು, ದೇಶದ ಜನ ಭ್ರಮನಿರಸಗೊಂಡಿದ್ದಾರೆ, ದೇಶದಲ್ಲಿ ನಡೆಯುತ್ತಿರುವ ಭ್ರಷ್ಟಚಾರ,ಕೋಮುವಾದಿ,ಮನಸ್ಥಿತಿ ಹಾಗೂ ಜಾತಿರಾಜಕಾರಣಕಂಡು ಮುಂದಿನ ದಿನಗಳಲ್ಲಿ ದೇಶಕ್ಕೆ ಉತ್ತಮ ಭವಿಷ್ಯ ಸಿಗಬೇಕೆಂದರೆ, ಪರ್ಯಾರ ರಾಜಕೀಯ ಚಿಂತನೆ ಅಗತ್ಯವಿದೆ.ಬಹುಜನ ಚಳುವಳಿ ಮುಖಂಡರು, ದಲಿತಪರ ಚಳುವಳಿ ಮುಖಂಡರು, ರೈತ ಚಳುವಳಿ ಮುಖಂಡರು,ಹಾಗೂ ಕನ್ನಡಪರ ಸಂಘಟನೆಗಳು ಹಾಗೂ ಪ್ರಗತಿಪರ ಚಿಂತನೆಯುಳ್ಳ ರಾಜಕೀಯ ಮುಖಂಡರು ಸೇರಿ ಹೊಸ ರಾಜಕೀಯ ಪಕ್ಷ ಸ್ಥಾಪನೆಗೆ ಮುಂದಾಗಿದ್ದೇವೆ, ರಾಜ್ಯದ ಎಲ್ಲಾ ವಿಧಾನಸಭಾಕ್ಷೇತ್ರಗಳಲ್ಲೂ ಪ್ರವಾಸ ಮಾಡಿ ಪಕ್ಷ ಸಂಘಟನೆ ಮಾಡುತ್ತೇವೆ,ಮುಂದಿನ 2028ರ ವಿಧಾನ ಸಭೆ ಚುನಾವಣೆ ಒಳಗೆ ಸರ್ವಜನರ ಹಿತಬಯಸುವ ಹೊಸ ಪಕ್ಷ ಸ್ಥಾಪನೆಯಾಗಲಿದೆ.ಈಗಾಗಲೇ ಹೊಸ ಪಕ್ಷದ ಪ್ರನಾಳಿಕೆಗಳು ಸಿದ್ದಗೊಂಡಿದ್ದು, ಸರ್ವಜನರ ಹಿತಬಯಸುವ ಹೊಸ ಪಕ್ಷ ಸ್ಥಾಪನೆಯಾಗುತ್ತದೆ, ಎಂದ ಅವರು
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ,ಜನರಲ್ಲಿ ಭಿತ್ತಿದ ಬರವಣೆಗಳು ಹುಸಿಯಾಗಿವೆ, ಕೇಂದ್ರ ಸರ್ಕಾರ ಭ್ರಷ್ಟಚಾರ ಕೋಮುವಾದಲ್ಲಿ ಮುಳುಗಿದೆ,ಚುನಾವಣಾ ಬಾಂಡ್ ಗಳ ಮೂಲಕ ನೂರಾರು ಕೋಟಿ ಹಣವನ್ನ ಭ್ರಷ್ಟಚಾರದ ಮೂಲಕ ಸಂಗ್ರಹಿಸಿದ್ದು, ಮೋದಿ ಸರ್ಕಾರದ ಪಾಪದ ಫಲವನ್ನ, ಸಾಮಾನ್ಯ,ಅನುಭವಿಸುವಂತ್ತಾಗಿದೆ,ಚುನಾವಣಾ ಬಂಡ್ ಮೂಲಕ ಹಣಪಡೆದ ಕೇಂದ್ರ ಸರ್ಕಾರ ಕಳಪೆ ಔಷಧಿ ಕಂಪನಿಗಳಿಗೆ ತಮ್ಮ ಬಳಿ ಇರುವ ಕಳಪೆ ಔಷದಿ ಮಾರಾಟಕ್ಕೆ ಅವಕಾಶ ಮಾಡಿಕೊಟ್ಟ, ಪರಿಣಾಮ ಬಳ್ಳಾರಿ ಬಾಣಂತಿಯರ ಹಾಗೂ ಸೇರಿದಂತೆ ಅನೇಕ ಔಷಧಿಗಳು ಆಸ್ಪತ್ರೆಗಳ ಮೂಲಕ ಜನರ ಜೀವ ಹಿಂಡುತ್ತಿದೆ, ಅದೇ ರೀತಿ ಪಿಎಂ ಕೇರ್ ಫಂಡ್ ಸೇರಿದಂತೆ ಹಲವಾರು ಭ್ರಷ್ಟಚಾರಮಾಡುತ್ತಿದ್ದಾರೆ,ದೇಶದಲ್ಲಿ ಇಟ್ಟಿರುವ ಕಪ್ಪುಹಣ ವಾಪಾಸ್ ತರುವುದಾಗಿ ಹೇಳಿದ ಸರ್ಕಾರ, ನಯಾಫೈಸೆ ಕಪ್ಪುಹಣ ತಂದಿಲ್ಲ,ನಮ್ಮ ದೇಶದ ರಾಜಕಾರಣಿಗಳು,ಉದ್ಯಮಿಗಳ ಕಪ್ಪುಗಳ ಹೊರತಂದರೆ.ನಮ್ಮ ದೇಶ ಅಮೇರಿಕಾದ ನಾಲ್ಕುಪಟ್ಟು ಶ್ರೀಮಂತ ದೇಶವಾಗುತ್ತದೆ.ಬಿಜೆಪಿ ಕೋಮುವಾದಿ ಭ್ರಷ್ಟಚಾರ ಕಂಡು ಸಮಾಜವಾದಿ ಹಿನ್ನೆಲೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಲಿ,ಕಾಂಗ್ರೇಸ್ ಸರ್ಕಾರ ಅಧಿಕಾರಕ್ಕೆ ಬರಲಿ ಎಂದು, ಎಲ್ಲಾ ಸಮಾನಮನಸ್ಕರು ಹೋರಾಟ ಮಾಡಿದೆವು, ಆದರೆ ರಾಜ್ಯದಲ್ಲಿಯೋ ಸಹ ನೈತಿಕ ರಾಜಕಾರಣ ನಾಶವಾಗಿದ್ದು,ಮುಖ್ಯಮಂತ್ರಿ ಸಿದ್ದರಾಮಯ್ಯ ಅಹಿಂದ ಗೋವಿಂದ ಮಾಡಿದ್ದಾರೆ,ಗ್ಯಾರಂಟಿ ಹೆಸರಿನಲ್ಲಿ ದಲಿತ ಹಿಂದುಳಿದವರ ಅಭಿವೃದ್ದಿಗೆ ಮೀಸಲಿಟ್ಟಿದ ಸಾವಿರಾರು ಕೋಟಿ ಹಣ ಬೇರೆ ಬೇರೆ ಅಭಿವೃದ್ದಿಗಳಿಗೆ ಬಳಸಿಕೊಂಡು,ದಲಿತರು ಹಿಂದುಳಿದವರನ್ನ ಬೀದಿಗೆ ತಳಿದ್ದಾರೆ.ಎಸ್ಸಿಪಿ,ಟಿಎಸ್ಪಿ ಹಣ ರಾಜ್ಯಸರ್ಕಾರ ಗುಳಂ ಮಾಡಿದೆ,ರಾಜ್ಯದಲ್ಲಿ ಬಿಜೆಪಿ ಕೋಮುವಾದಿ, ಕಾಂಗ್ರೇಸ್ ಮೃದುಕೋಮುವಾದಿ ,ಜೆಡಿಎಸ್ ಜಾತಿವಾದಿ ಇವುಗಳಿಗೆ ಪರ್ಯಾಯ ರಾಜಕೀಯಪಕ್ಷ ಅನಿವಾರ್ಯವಾಗಿದ್ದು ಹೊಸ ಪಕ್ಷ ಸ್ಥಾಪನೆ ಮಾಡುತ್ತೇವೆ ಎಂದ ಅವರು ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಆದೇಶದಂತೆ ಒಳಮೀಸಲಾತಿ ಜಾರಿಗೊಳಿಸುವ ನಾಟಕವಾದಿ ನ್ಯಾಯಮೂರ್ತಿ ನಾಗಮೋಹನ್ ನೇತೃತ್ವದಲ್ಲಿ ಸಮಿತಿ ರಚನೆ ಮಾಡಿ,2 ತಿಂಗಳಲ್ಲಿ ವರದಿಪಡೆದು ಒಳಮೀಸಲಾತಿ ಜಾರಿಮಾಡುವುದ್ದಾಗಿ ಹೇಳಿತ್ತು, ಆದರೆ,ಈಗ ಜಾತಿಗಣತಿ ದತ್ತಾಂಶ ಲಭ್ಯವಿಲ್ಲ ಎನ್ನುವ ಸಭೂಬುಹೇಳುತ್ತಿದೆ, ಸರ್ಕಾರ ಕೂಡಲೇ ನ್ಯಾಯಮೂರ್ತಿ ಎಜೆ ಸದಾಶಿವ ಆಯೋಗದ ವರದಿ ಪಡೆದು, ಆಯೋಗದ ವರದಿಯಲ್ಲಿರುವ ದತ್ತಾಂಶವನ್ನ ನಾಗಮೋಹನ್ ದಾಸ್ ಆಯೋಗಕ್ಕೆ ನೀಡಿ, ನಾಗಮೋಹನ್ ದಾಸ್ ಆಯೋಗ ಪರಿಶೀಲನೆ ಮಾಡಿದ ನಂತರ ಶೀಘ್ರವಾಗಿ ಒಳಮೀಸಲಾತಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು
ಪತ್ರಿಕಾಘೋಷ್ಠಿಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಅಧ್ಯಕ್ಷ ಪಿ.ಎನ್ ರಾಮಯ್ಯ,ಜಿಲ್ಲಾ ಸಂಘಟನಾ ಸಂಚಾಲಕ ನಾಗ್ತಿಹಳ್ಳಿ ಕೃಷ್ಣಮೂರ್ತಿ,ಲಾಯರ್ ವೆಂಕಟೇಶ್,ಡಿಎಸ್ಎಸ್ ತಾಲ್ಲೋಕು ಅಧ್ಯಕ್ಷ ರಾಜು ಬೆಣ್ಣೆನಹಳ್ಳಿ, ಮಾಜಿ ಜಿಲ್ಲಾಪಂಚಾಯ್ತಿ ಸದಸ್ಯ ಕೊಪ್ಪ ಶಾಂತಪ್ಪ, ಡಿಎಸ್ಎಸ್ ಮುಖಂಡರಾದ ಕುಪ್ಪಾಳು ರಂಗಸ್ವಾಮಿ.ಚಿಗ್ಗಾವಿ ಪುಟ್ಟಸ್ವಾಮಿ,ಅಟ್ಟಯ್ಯ,ಮುಂತ್ತಾದವರು ಉಪಸ್ಥಿತರಿದರು.
ವರದಿ:ಮಂಜುನಾಥ್ ಹಾಲ್ಕುರಿಕೆ