KALPATHARU KRANTHI

ತಿಪಟೂರು ಕಲ್ಪತರು ಕ್ರೀಡಾಂಗಣದಲ್ಲಿ ಸಂಭ್ರದಿಂದ ನಡೆದ 76ನೇ ಗಣರಾಜ್ಯೋತ್ಸವ

Spread the love

ತುಮಕೂರು ಜಿಲ್ಲೆ ತಿಪಟೂರು ನಗರದ ಕಲ್ಪತರು ಕ್ರೀಡಾಂಗಣದಲ್ಲಿ ಸಂಭ್ರಮ ಸಡಗರದಿಂದ 76ನೇ ಗಣರಾಜ್ಯೋತ್ಸವವನ್ನ ಆಚರಿಸಲಾಯಿತು.ತಿಪಟೂರು ಉಪವಿಭಾಗಾಧಿಕಾರಿ ಶ್ರೀಮತಿ ಸಪ್ತಶ್ರೀ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಪೊಲೀಸ್,ಗೃಹರಕ್ಷಕದಳ,ಎನ್ ಸಿ.ಸಿ ಸ್ಕೌಡ್ಸ್ ,ಗೈಡ್ಸ್ .ಸೇರಿದಂತೆ ಸುಮಾರು 40 ಕ್ಕೂ ಹೆಚ್ಚು ವಿವಿಧ ತುಕ್ಕಡಿಗಳಿಂದ ಗೌರವವಂದನೆ ಸ್ವೀಕರಿಸಿದರು

ರಾಷ್ಟ್ರ ಧ್ವಜಾರೋಹಣ ನೆರವೇರಿಸಿದ ತಿಪಟೂರು ಉಪವಿಭಾಗಾಧಿಕಾರಿ ಶ್ರೀಮತಿ ಸಪ್ತಶ್ರೀ ರವರು ಮಾತನಾಡಿ
ನಮ್ಮ ದೇಶಕ್ಕೆ ಸ್ವಾಂತತ್ರ್ಯ ತಂದು ಕೊಟ್ಟವರು ಮಹಾತ್ಮಗಾಂಧಿ ಜೀ ಹಾಗೂಸ್ವಾತಂತ್ರ್ಯ ಹೋರಾಟಗಾರರು, ಪ್ರಜಾಪ್ರಭುತ್ವ ಮಾದರಿಯಆಡಳಿತಾತ್ಮಕವಾದ ನೀತಿ ನಿಯಮಗಳನ್ನು ರೂಪಿಸಿ ಒಂದು ಶ್ರೇಷ್ಟವಾದ ಗ್ರಂಥದ ರೂಪದಲ್ಲಿಸಂವಿಧಾನವನ್ನುರಚಿಸಿಕೊಟ್ಟವರು,ಡಾ//.ಬಿ.ಆರ್.ಅಂಬೇಡ್ಕರ್ ರವರು.ರಚಿಸಿದ ಮಹಾನ್ ಸಂವಿಧಾನವು 1949 ನವೆಂಬರ್ 26 ರಂದುಅಂಗೀಕಾರವಾಯಿತು. ಎಲ್ಲರೂ ಒಪ್ಪಿ 1950ನೇ ಜನವರಿ 26 ರಂದು ಜಾರಿಗೆತರಲಾಯಿತು. ಈ ದಿನದ ಗೌರವಾರ್ಥವಾಗಿ ಪ್ರತಿ ವರ್ಷ ಜನವರಿ 26 ರಂದು ಭಾರತದಲ್ಲಿ ಗಣರಾಜ್ಯೋತ್ಸವ ದಿನವಾಗಿಆಚರಣೆಮಾಡಲಾಗುತ್ತಿದೆ.ಸಂವಿಧಾನವೆಂದರೆ ಭಾರತದ ಎಲ್ಲಾನಾಗರೀಕರುಅನುಸರಿಸ ಬೇಕಾದ ಮೂಲಭೂತ ನಿಯಮ ಮತ್ತು ಹಕ್ಕುಗಳ ರಚನೆಗೆ ರಚಿಸಲಾಗಿರುವ ಕಾಯ್ದೆ. ಭಾರತವು ಸಾರ್ವಭೌನ ಪ್ರಜಾಸತ್ಮಕ ರಾಷ್ಟ್ರವಾಗಿದೆ,ದೇಶದ ನಾಗರೀಕರಿಗೆ ಸುವ್ಯವಸ್ಥಿತ ಕಾನೂನಿನ ರಕ್ಷಣೆ,ಜವಾಬ್ದಾರಿ ಹೊತ್ತಿದ್ದು,,ಸರ್ವರಿಗೂ ಸಮಪಾಲು,ಸರ್ವರಿಗೂ ಸಮಬಾಳುಎನ್ನುವುದು,ನಮ್ಮ ಸಂವಿಧಾನದ ಆಶಯವಾಗಿದ್ದು,.ಸರ್ವರ ಹಿತಕಾಪಾಡುವ ಮಹದಾಸೆಯೊಂದಿಗೆ ರಚಿತವಾದ ನಮ್ಮ ಸಂವಿಧಾನ ನಮ್ಮ ಹೆಮ್ಮೆಯೂ ಹೌದು


ನಮ್ಮ ದೇಶದಲ್ಲಿ ಕಾನೂನುಎಲ್ಲರಿಗೂ ಸಮಾನವಾಗಿದೆ.ಇಂದು ನಮ್ಮ ದೇಶ ಶಿಕ್ಷಣ, ವಿಜ್ಞಾನ, ಮಾಹಿತಿ ತಂತ್ರಜ್ಞಾನ, ಆಧ್ಯಾತ್ಮಯೋಗ, ಸಂಸ್ಕೃತಿ, ಆರೋಗ್ಯ, ಧರ್ಮ, ರಕ್ಷಣೆ, ರಾಜಕೀಯ ಕ್ಷೇತ್ರಗಳಲ್ಲಿ ಅತ್ಯದ್ಭುತ ಸಾಧನೆ ಮಾಡಿದೆ, ಜಗತ್ತೇ ನಮ್ಮ ದೇಶದ ಕಡೆಗೆ ನೋಡುತ್ತಿದೆ. ಭಾರತವುಪ್ರಜಾಪ್ರಭುತ್ವರಾಷ್ಟ್ರವಾಗಿದ್ದು, ಪ್ರಜೆ ಸಾರ್ವಭೌಮರಾಗಿದ್ದು, ಪ್ರಜಾಪ್ರಭುತ್ವದಲ್ಲಿಉತ್ತಮ ನಾಯಕನನ್ನು ಆಯ್ಕೆಮಾಡುವ ಜವಾಬ್ದಾರಿಯು ನಮ್ಮಗಳ ಮೇಲೆ
ಇರುತ್ತದೆ. 18 ವರ್ಷ ತುಂಬಿದ ಅರ್ಹ ಪ್ರತಿಯೊಬ್ಬ ಭಾರತೀಯನು ಸಹಮತದಾರರ ಪಟ್ಟಿಗೆ ತಮ್ಮ ಹೆಸರನ್ನು ನೋಂದಾಯಿಸಿಕೊಂಡು, ನಮ್ಮ ಸಂವಿಧಾನ ನಮಗೆ ನೀಡಿರುವ ಮತದಾನದ ಹಕ್ಕನ್ನು ನಿರ್ಲಕ್ಷಿಸದೇ, ಎಲ್ಲರೂ ತಪ್ಪದೇ
ಮತದಾನವನ್ನು ಮಾಡುವ ಮೂಲಕ ಉತ್ತಮ ನಾಯಕರನ್ನು ಆಯ್ಕೆ ಮಾಡಬೇಕು.
ಜನವರಿ 25 ರಂದು ಮತದಾರರ ದಿನವನ್ನು ಆಚರಣೆ ಮಾಡುವ ಮೂಲಕ ಮತದಾನದ ಹೊಸದಾಗಿ ನೋಂದಣಿಯಾಗಿರುವ ಯುವ ಮತದಾರರಿಗೆ ಗುರುತಿನ ಚೀಟಿಯನ್ನು ನೀಡಿ, ಅವರಿಗೆ ಮತದಾನದ ಬಗ್ಗೆ ಅರಿವನ್ನು ನೀಡಲಾಗಿರುತ್ತದೆ.
ಆದುದರಿಂದ ನಾಗರಿಕ ಬಂಧುಗಳೆ ನಾವೆಲ್ಲ ದೇಶಕ್ಕಾಗಿ ದುಡಿದು
ಹುತಾತ್ಮರಾಗಿರುವವರಿಗೆ ಗೌರವ, ದುಡಿಯುತ್ತಿರುವವರಿಗೆ ಬೆಂಬಲ, ಸಹಕಾರ,ದುಡಿಯುವ ಮನಸ್ಸಿರುವವರಿಗೆ ಪ್ರೋತ್ಸಾಹ ನೀಡುತ್ತಾ ನಮ್ಮಲ್ಲಿನ ಎಲ್ಲಗೊಂದಲ,ತಾರತಮ್ಯ, ಭೇದಭಾವಗಳನ್ನು ಬದಿಗಿಟ್ಟು ಸರ್ಕಾರದ ಜೊತೆಗೆ ಕೈಜೋಡಿಸಿ ನಮ್ಮಮಾಡಬೇಕೆಂದು ತಿಳಿಸಿ ಕವಿ
ದೇಶವನ್ನು ಸುಭದ್ರವನ್ನಾಗಿಸಲು ಸಂಕಲ್ಪಸಾ.ಶಿ.ಮರುಳಯ್ಯ ರವರ ವೇಷ ಬೇರೆ ಭಾಷೆ ಬೇರೆ ದೇಶ ಒಂದೇ ಭಾರತ, ಒಂದೇ ತಾಯ ಮಕ್ಕಳೆಂದು ಘೋಷಿಸೋಣ ಸಂತತ ಎಂಬ ವಾಣಿ ಯಂತೆ ಸಹಭಾಳ್ವೆಯಿಂದಸಾಗೋಣಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶಾಸಕ ಕೆ.ಷಡಕ್ಷರಿ ಮಾತನಾಡಿ
1951 ಜನೆವರಿ 26 ರಂದು ಭಾರತ ಅಧಿಕೃತವಾಗಿ ಪ್ರಜಾಪ್ರಭುತ್ವ ಗಣರಾಜ್ಯವಾಯಿತು. ಅಂದಿನಿಂದ
ಇಲ್ಲಿಯವರೆಗೆ ಪ್ರತಿ ವರ್ಷ ಜನವರಿ 26 ರಂದು ಗಣರಾಜ್ಯೋತ್ಸವವನ್ನು ಆಚರಿಸುತ್ತಾ ಬಂದಿದ್ದು, ಈಸಂಭ್ರಮದ ರಾಷ್ಟ್ರೀಯ ಉತ್ಸವಕ್ಕೆಇಲ್ಲಿಗೆ 75 ವರ್ಷ ಕಳೆದು 76 ನೇ ವರ್ಷಕ್ಕೆ ಕಾಲಿಟ್ಟಿದ್ದೇವೆ.
1930 ರಲ್ಲಿಭಾರತೀಯ,ರಾಷ್ಟ್ರೀಯ ಕಾಂಗ್ರೆಸ್ ಸಂಪೂರ್ಣ ಸ್ವರಾಜ್ ಘೋಷಣೆಯ ನೆನಪಿಗಾಗಿ ಜನವರಿ26 ಅನ್ನು ಆಯ್ಕೆ ಮಾಡಲಾಗಿದೆ. ಈ ಐತಿಹಾಸಿಕಹಿನ್ನೆಲೆಯು ಭಾರತದ ಸ್ವಾತಂತ್ರ ಹೋರಾಟದಲ್ಲಿ ಈದಿನಾಂಕವನ್ನುಪ್ರಮುಖವಾಗಿಸುತ್ತದೆ.ಜನವರಿ 1950, ಭಾರತದ ಸಂವಿಧಾನವು ಅಂತಿಮವಾಗಿ ಆಚರಣೆಗೆ ಬಂದ ವರ್ಷ. ಈ ದೇಶವನ್ನು ಬ್ರಿಟಿಷ್ಆಳ್ವಿಕೆಯ ಸ್ಥಾನಮಾನದಿಂದಮುಕ್ತಗಣರಾಜ್ಯವನ್ನಾಗಿ ಮಾಡಿದ ವರ್ಷ ಇದಾಗಿದೆ. ಡಾ. ಬಿ.ಆರ್. ಅಂಬೇಡ್ಕರ್(Dr. B.R. Ambedkar) ಅವರಮಾರ್ಗದರ್ಶನದಲ್ಲಿ ಮೂರು ವರ್ಷಗಳ ಕಾಲ ರಚಿತವಾದ ಸಂವಿಧಾನವುಭಾರತ ಸರ್ಕಾರದಕಾಯಿದೆ (1935) ಅನ್ನು ಸರ್ವೋಚ್ಚಕಾನೂನಾಗಿಬದಲಾಯಿಸಿತು. ಈ ಡಾಕ್ಯುಮೆಂಟ್ಆಡಳಿತದ ಚೌಕಟ್ಟನ್ನು ಹಾಕಿತು ಮತ್ತು ಎಲ್ಲಾ ನಾಗರಿಕರಿಗೆಮೂಲಭೂತಹಕ್ಕುಗಳನ್ನುಖಾತರಿಪಡಿಸಿತು.ನ್ಯಾಯ, ಸ್ವಾತಂತ್ರ್ಯ,ಸಮಾನತೆಮತ್ತುಭಾತೃತ್ವದ ಆಧಾರದ ಮೇಲೆ ಪುಜಾವುಭುತ್ವ ವ್ಯವಸ್ಥೆಯನ್ನುಸ್ಥಾಪಿಸಿತು.ಗಣರಾಜ್ಯೋತ್ಸವವುಭಾರತಕ್ಕೆತನ್ನಪುಜಾಸತ್ತಾತ್ಮಕ,ಮೌಲ್ಯಗಳು ಮತ್ತು ಸ್ವ-ಆಡಳಿತವನ್ನು ನೆನಪಿಸುತ್ತದೆ


ಇದು ರಾಜಪ್ರಭುತ್ವಅಥವಾ ವಿದೇಶಿ ಅಧಿಕಾರದಿಂದಆಳಲ್ಪಡುವುದಕ್ಕಿಂತ ಹೆಚ್ಚಾಗಿ ತಮ್ಮನ್ನು ಆಳುವ ಜನರಶಕ್ತಿಯನ್ನುಪ್ರತಿನಿಧಿಸುತ್ತದೆ.
ಗಣರಾಜ್ಯೋತ್ಸವದಮಹತ್ವಬಹುಮುಖಿಯಾಗಿದೆ.ಮೊದಲನೆಯ ದಾಗಿ,ಇದುಸಾಂವಿಧಾನಿಕಮೌಲ್ಯಗಳಿಗೆಭಾರತದ ಬದ್ಧತೆಯನ್ನು ಎತ್ತಿ ತೋರಿಸುತ್ತದೆ. ಇದು ನ್ಯಾಯ, ಸ್ವಾತಂತ್ರ್ಯ ಸಮಾನತೆ ಮತ್ತು ಭ್ರಾತೃತ್ವದಪ್ರಜಾಸತ್ತಾತ್ಮಕ ಆದರ್ಶಗಳಿಗೆ ಭಾರತದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಮಾತ್ರವಲ್ಲಗಣರಾಜ್ಯೋತ್ಸವ ಭಾರತದ ಸಾಂಸ್ಕೃತಿಕಪರಂಪರೆಯ ಆಚರಣೆಯೂ ಆಗಿದೆ.ಆಚರಣೆಯ ಸಮಯದಲ್ಲಿಪ್ರಸ್ತುತಪಡಿಸಲಾಗುವ,ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಸ್ತಬ್ಧಚಿತ್ರಗಳು ಭಾರತದ ಶ್ರೀಮಂತ ಸಾಂಸ್ಕೃತಿಕ,ವೈವಿಧ್ಯತೆಯನ್ನು
ಪದರ್ಶಿಸುತ್ತವೆ.ಈದಿನದ ಮತ್ತೊಂದುಪ್ರಮುಖಮುಖ್ಯಾಂಶವೆಂದರೆ ರಾಷ್ಟ್ರೀಯ ಏಕತೆಯನ್ನು ಉತ್ತೇಜಿಸುವುದು. ಏಕೆಂದರೆ
ಆಚರಣೆಗಳು,ವೈವಿಧ್ಯತೆಯಲ್ಲಿಏಕತೆಯನ್ನು ಉತ್ತೇಜಿಸುತ್ತವೆ.ಭಾರತದ ವೈವಿಧ್ಯತೆಯಲ್ಲಿ ಅದರ ಶಕ್ತಿಯನ್ನು ಎತ್ತಿತೋರಿಸುತ್ತವೆ. ಭಾರತ ಸ್ವತಂತ್ರವಾಗಲುಮತ್ತುಗಣರಾಜ್ಯವನ್ನು ನಿರ್ಮಿಸಲು ಸಹಾಯ ಮಾಡಿದ ನಾಯಕರುಮತ್ತು ಸ್ವಾತಂತ್ರ್ಯ ಹೋರಾಟಗಾರರ ಶೌರ್ಯ ಮತ್ತು ತ್ಯಾಗವನ್ನು ಗಣರಾಜ್ಯೋತ್ಸವವು ಗೌರವಿಸುತ್ತದೆ.ಪ್ರತಿ ವರ್ಷ ಭಾರತ ಸರ್ಕಾರವು ಗಣರಾಜ್ಯೋತ್ಸವಕ್ಕಾಗಿ ಒಂದು ವಿಶೇಷನಿರ್ದಿಷ್ಟವಿಷಯನ್ನು ಆಯ್ಕೆ ಮಾಡುತ್ತದೆ.ಕಳೆದ ವರ್ಷ ಭಾರತ ಪ್ರಜಾಪ್ರಭುತ್ವದ ತಾಯಿ ಮತ್ತು ಅಭಿವೃದ್ಧಿ ಹೊಂದಿದ ಭಾರತ ಎಂಬುದಾಗಿತ್ತು.ಅದರಂತೆ ಈವರ್ಷ ರಾಷ್ಟ್ರದ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಮತ್ತು ಅದರ ಬೆಳವಣಿಗೆ
ಮತ್ತು ಅದರ ಪ್ರಯಾಣವನ್ನು ಎತ್ತಿ ತೋರಿಸುವವಿಷಯವನ್ನುಆಯ್ಕೆಮಾಡಿದೆ.
ಈ ವರ್ಷದ ಗಣರಾಜ್ಯೋತ್ಸವದ ಕರ್ತವ್ಯ ಪಥ ಮೆರವಣಿಗೆಯಲ್ಲಿ ಕರ್ನಾಟಕರಾಜ್ಯಸೇರಿದಂತೆ ಸುಮಾರು15ರಾಜ್ಯಗಳಸಾಂಸ್ಕೃತಿಕ ಬಿತ್ತಿ ಚಿತ್ರಗಳು (ಟ್ಯಾಬ್ಲೊಗಳು) ಕಾಣಿಸಿಕೊಳ್ಳಲಿದ್ದುಇದುನಮ್ಮ ರಾಜ್ಯಕ್ಕೆ ಹೆಮ್ಮೆತರುವಂತಹ ಸಂಗತಿ.ಇಂತಹ ಭವ್ಯ ಶುಭ ಸಮಾರಂಭಕ್ಕೆ ಪ್ರತಿ ವರ್ಷ ವಿದೇಶಗಳಿಂದ ರಾಷ್ಟ್ರ ಮಟ್ಟದ ನಾಯಕರುಗಳುಪಾಲ್ಗೊಳ್ಳುವುದು ಭಾರತದ ಪರಂಪರೆಯ ವೈಭವಕ್ಕೆ ಸಾಕ್ಷಿಯಾಗಿದೆ.ನಾವೆಲ್ಲರು ನಮ್ಮ ನಮ್ಮ ಕೆಲಸಇಂತಹ ಪಾರಂಪರಿಕ ದೇಶ, ನಾಡಿನಲ್ಲಿ ವಿವಿಧಕ್ಷೇತ್ರಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ, ಕಾರ್ಯ ಮಾಡೋಣ ಎಂದು ತಿಳಿಸಿದರು.


ಕಾರ್ಯಕ್ರಮದಲ್ಲಿ ವಿವಿಧ ಶಾಲಾಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲಾಯಿತು.
ವಿವಿಧ ಕ್ಷೇತ್ರದಲ್ಲಿ ಸೇವೆಸಲ್ಲಿಸಿದ ಸಾಧಕರಿಗೆ ಸನ್ಮಾನಿಸಲಾಯಿತು.
ತಿಪಟೂರು ಉಪವಿಭಾಗಾಧಿಕಾರಿ ಶ್ರೀಮತಿ ಸಪ್ತಶ್ರೀ ,ತಹಸೀಲ್ದಾರ್ ಪವನ್ ಕುಮಾರ್.ಡಿವೈಎಸ್ಪಿ ವಿನಾಯಕ ಶೆಟ್ಟಿಗೇರಿ,ನಗರಸಭೆ ಅಧ್ಯಕ್ಷರಾದ ಶ್ರೀಮತಿ ಯಮುನಾಧರಣೆಶ್,ಉಪಾಧ್ಯಕ್ಷೆ ಮೇಘನಾ ಭೂಷಣ್,ಇಒ ಸುದರ್ಶನ್,ಗ್ರೇಡ್ 2 ತಹಸಿಲ್ದಾರ್ ಜಗನ್ನಾಥ್,ಪೌರಾಯುಕ್ತ ವಿಶ್ವೇಶ್ವರಯ್ಯ ಬದರಗಡೆ,ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಗಣ್ಯರು ಉಪಸ್ಥಿತರಿದರು

ವರದಿ:ಮಂಜುನಾಥ್ ಹಾಲ್ಕುರಿಕೆ

Exit mobile version