
ತಿಪಟೂರು ತಾಲ್ಲೋಕಿನ ಹಾಲ್ಕುರಿಕೆ ತರಳಬಾಳು ಶಾಖಾಮಠದ ಆವರಣದಲ್ಲಿ ತರಳಬಾಳು ಇಂಟರ್ ನ್ಯಾಷನಲ್ ಸ್ಕೂಲ್.ತರಳಬಾಳು ಕಲಾಸೌರಭ 2025 ಜಾನಪದ ಸಿರಿ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು ತಿಪಟೂರು ಕ್ಷೇತ್ರಶಿಕ್ಷಣಾಧಿಕಾರಿ ಚಂದ್ರಯ್ಯ, ಉದ್ಘಾಟಿಸಿದರು
ತಿಪಟೂರು ತಾಲ್ಲೋಕಿನ ಹಾಲ್ಕುರಿಕೆ ತರಳಬಾಳು ಇಂಟರ್ ನ್ಯಾಷನಲ್ ಸ್ಕೂಲ್ ಆವರಣಲ್ಲಿ ಆಯೋಜಿಸಿದ ತರಳಬಾಳು ಇಂಟರ್ ನ್ಯಾಷನಲ್ ಸ್ಕೂಲ್, ತರಳಬಾಳು ಕಲಾಸೌರಭ 2025 ಜಾನಪದ ಸಿರಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಮಕ್ಕಳಿಗೆ ಬಾಲ್ಯದಲ್ಲಿ ಸಂಸ್ಕಾರಯುತ ಶಿಕ್ಷಣ ಅಗತ್ಯ ನಾವು ಉತ್ತಮ ಶಿಕ್ಷಣ ನೀಡಿ ಸಮಾಜದ ಆಸ್ತಿಯಾಗಿ ರೂಪಿಸಬೇಕು, ಮಕ್ಕಳು ಇತ್ತಿಚಿನ ದಿನಗಳಲ್ಲಿ ಮೊಬೈಲ್ ವ್ಯಾಮೋಹಕ ಒಳಗಾಗಿ ದೈಹಿಕ ಚಟುವಟಿಕೆಗಳಿಂದ ಹಿಂದುಳಿಯುತ್ತಿದ್ದಾರೆ, ಪೋಷಕರು ಮಕ್ಕಳ ಚಟುವಟಿಕೆಗಳ ಮೇಲೆ ನಿಗವಿಡಬೇಕು, ಪಠ್ಯ ಹಾಗೂ ಪಠ್ಯೇತರ ಚಟುವಟಿಗೆಗಳಲ್ಲಿ ತೊಡಗಿಕೊಳ್ಳಲು ಪ್ರೋತ್ಸಾಹ ನೀಡಬೇಕು, ಶಾಲೆಯ ಒಳಗಡೆ ಕಲಿಯುವ ಶಿಕ್ಷಣದಷ್ಟೆ ಮಹತ್ವವನ್ನ ದೈಹಿಕ ಚಟುವಟಿಕೆಗಳಿಗೂ ನೀಡಿ, ಮಕ್ಕಳ ಆಸಕ್ತಿ ಹಾಗೂ ಪ್ರತಿಭೆಗೆ ತಕ್ಕಂತೆ ವೇದಿಕೆ ನೀಡಿದರೆ, ಸಮಾಜದ ಆಸಕ್ತಿಯಾಗಿ ಬೆಳೆಯುತ್ತಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ತರಳಬಾಳು ಜಗದ್ಗುರು ಶ್ರೀ ಶಿವಕುಮಾರ ಮಹಾಸ್ವಾಮಿಗಳ ಸ್ಮಾರ ಸ್ಮಾರಣಾರ್ಥ ನೀಡುವ ವೀರಯೋಧ ಸೈನಿಕ ಲೇಪಾಕ್ಷ ರವರಿಗೆ ನೀಡಲಾಯಿತು ವೀರಯೋಧ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಲೇಪಾಕ್ಷ ರವರು,ಮಕ್ಕಳಿಗೆ ಶಿಕ್ಷಣ ಜೊತೆಗೆ ಸಂಸ್ಕಾರ ದೇಶಾಭಿಮಾನ ಬೆಳಸಬೇಕು, ನಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿದರೆ ಅವರು ಸಮಾಜದ ಸ್ವತ್ತಾಗಿ ರೂಪುಗೊಳ್ಳುತ್ತಾರೆ, ಮಕ್ಕಳ ಶಿಕ್ಷಣ ಕೇವಲ ಶಿಕ್ಷಕರ ಜವಾಬ್ದಾರಿ ಎಂದು ಪೋಷಕರು ಸುಮ್ಮನಿರದೆ ಅವರ ವಿದ್ಯಾಭ್ಯಾಸ ಹಾಗೂ ಚಟುವಟಿಕೆಗಳ ಬಗ್ಗೆ ಹೆಚ್ಚುಗಮನ ಹರಿಸಬೇಕು. ನಮ್ಮ ದೇಶ ಹಲವಾರು ವಿದೇಶಿ ದಾಳಿಗಳಿಗೆ ಒಳಗಾದರು, ಸ್ವತಂತ್ರ್ಯ ಭಾರತದಲ್ಲಿ ಸ್ವಾಯುಕ್ತ ಭಾರತವಾಗುವತ್ತ ದಾಪುಗಾಲುವಿಡುತ್ತಿದೆ, ನಾವು ಇಂದು ಎಲ್ಲಾಕ್ಷೇತ್ರದಲ್ಲೂ ಸಧೃಡತೆ ಕಂಡುಕೊಳ್ಳುತ್ತಿದ್ದೇವೆ ಎಂದು ತಿಳಿಸಿದರು
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸ್ಥಳೀಯ ಸಲಹಾ ಸಮಿತಿ ಅಧ್ಯಕ್ಷ ಹೆಚ್.ವಿ ನಾಗರಾಜು ತರಳಬಾಳು ಜಗದ್ಗುರು ಶ್ರೀ ಶಿವಕುಮಾರ ಮಹಾಸ್ವಾಮಿಜಿಗಳ ಪರಿಶ್ರಮದ ಫಲವಾಗಿ ಗ್ರಾಮೀಣ ಭಾಗದಲ್ಲಿ ಮಕ್ಕಳಿಗೆ ಶಿಕ್ಷಣ ದೊರೆಯುವಂತ್ತಾಗಿದೆ,ಶ್ರೀಗಳ ಆಶಯದಂತೆ ಹಾಲ್ಕುರಿಕೆ ತರಳಬಾಳು ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ ಉತ್ತನ ಶಿಕ್ಷಣ ನೀಡುವ ಕೆಲಸವನ್ನ ಶ್ರೀಮಠದ ಸದ್ಬಕ್ತರ ಸಲಹೆ ಸಹಕಾರದೊಂದಿಗೆ ಮಾಡಲಾಗುವುದು ಎಂದು ತಿಳಿಸಿದರು,
ಕಾರ್ಯಕ್ರಮದಲ್ಲಿ ಪ್ರತಿವರ್ಷ ಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮಿಗಳ ಸ್ಮಾರಣಾರ್ಥ ನೀಡುವ ಕಾಯಕ ಯೋಗಿ ರೈತಪ್ರಶಸ್ತಿಯನ್ನ ಪಟ್ರೆಹಳ್ಳಿ ಗ್ರಾಮದ ರೈತ.ಪಿ.ಸಿ ಭರತ್ ಕುಮಾರ್ ರವರಿಗೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ಸಾಧುವೀರಶೈವ ಸಮಾಜದ ಅಧ್ಯಕ್ಷ ನಂಜುಂಡಪ್ಪ.ತರಳಬಾಳು ಇಂಟರ್ ನ್ಯಾಷನಲ್ ಸ್ಕೂಲ್ ಮುಖ್ಯೋಪಧ್ಯಾಯ ವಿಜಯ್. ಸ್ಥಳೀಯ ಸಲಹ ಸಮಿತಿ ಮುಖಂಡರಾದ ಘನಾನಂದಮೂರ್ತಿ,ಜಾನಪದ ಕಲಾವಿದ ತಿಮ್ಮಯ್ಯ,ಶಿಕ್ಷಣ ಸಂಯೋಜಕರಾದ ಮಂಜುನಾಥ್,ಶ್ಯಾಮ್ ಸುಂದರ್ ಉಪಸ್ಥಿತರಿದರು. ಶಾಲಾಮಕ್ಕಳಿಂದ ವಿವಿದ ಸಂಸ್ಕೃತಿಕ ಕಾರ್ಯಕ್ರಮಗಳನ್ನ ನಡೆಸಲಾಯಿತು.
ವರದಿ :ಮಂಜುನಾಥ್ ಹಾಲ್ಕುರಿಕೆ