KALPATHARU KRANTHI

ತಿಪಟೂರಿನಲ್ಲಿ ಫೆಬ್ರವರಿ2 ರಂದು ಶೇಖರ್ ರಕ್ತ ನಿಧಿ ಕೇಂದ್ರ ಪ್ರಾರಂಭೋತ್ಸವ:ಡಾ//ಸೋಮಶೇಖರ್

Spread the love

ತಿಪಟೂರು ನಗರದ ನಗರಸಭೆಪಕ್ಕ ಅತ್ಯಾಧುನಿಕ ಸೌಲಭ್ಯ ಉಳ್ಳ ಶೇಖರ್ ರಕ್ತ ನಿಧಿ ಕೇಂದ್ರ ಫೆಬ್ರವರಿ 02ರಂದು ಪ್ರಾರಂಭಗೊಳ್ಳಲಿದೆ

ನಗರದ ಶೇಖರ್ ಬ್ಲಡ್ ಬ್ಯಾಂಕ್ ಆವರಣದಲ್ಲಿ ನಡೆದ ಸುದ್ದಿ ಘೋಷ್ಠಿ ಉದೇಶಿಸಿ, ಶೇಖರ್ ಬ್ಲಡ್ ಬ್ಯಾಂಕ್ ಮುಖ್ಯಸ್ಥರಾದ ಡಾ//ಸೋಮಶೇಖರ್ ಮಾತನಾಡಿ ಕಲ್ಪತರು ನಾಡಿನ ಜನರ ಬಹುದಿನಗಳ ಬೇಡಿಕೆಯಾಗಿದ ಬ್ಲಡ್ ಬ್ಯಾಂಕ್ ಫೆಬ್ರವರಿ 2ರಂದು ಪ್ರಾರಂಭೋತ್ಸವ ನಡೆಯಲಿದೆ. ಅತಿಥಿಗಳಾಗಿ ಕೇಂದ್ರ ರೈಲ್ವೆ ಹಾಗೂ ಜಲ ಶಕ್ತಿ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಉದ್ಘಾಟಿಸಲಿದ್ದಾರೆ ಮುಖ್ಯ ಅತಿಥಿಗಳಾಗಿ ಶಾಸಕರಾದ ಕೆ.ಷಡಕ್ಷರಿ ಮಾಜಿ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಹಾಗೂ ನಿವೃತ್ತ ಎಸಿಪಿ ಲೋಕೇಶ್ವರ್ ಸೇರಿದಂತೆಅನೇಕ ಗಣ್ಯರು ಭಾಗವಹಿಸಲಿದ್ದಾರೆ.ಕಾರ್ಯಕ್ರಮದಲ್ಲಿ ಕೆರಗೋಡಿ ರಂಗಾಪುರ ಭೂಸುಕ್ಷೇತ್ರ ಅಧ್ಯಕ್ಷರಾದ ಶ್ರೀ ಶ್ರೀ ಗುರು ಪರದೇಶಿಕೇಂದ್ರ ಮಹಾಸ್ವಾಮೀಜಿಗಳು, ನೊಣವಿನಕೆರೆ ಸೋಮೆಕಟ್ಟೆ ಕಾಡಸಿದ್ದೇಶ್ವರ ಮಠದ ಪೀಠಾಧ್ಯಕ್ಷರಾದ ಶ್ರೀ ಶ್ರೀ ಕರಿಋಷಭ ದೇಶೀಕೇಂದ್ರ ಶಿವಯೋಗಿಶ್ವರ ಮಹಾಸ್ವಾಮಿಜಿಗಳು, ತಿಪಟೂರು ಗುರುಕುಲಾನಂದಾಶ್ರಮದ ಪೀಠಾಧ್ಯಕ್ಷರಾದ ಶ್ರೀ ಶ್ರೀ ಕರಿಬಸವ ದೇಶಿ ಕೇಂದ್ರ ಮಹಾಸ್ವಾಮಿಜಿಗಳು, ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ಅರಸೀಕೆರೆ ಶಾಸಕ ಕೆ.ಎಂ ಶಿವಲಿಂಗೆಗೌಡ, ಚಿ.ನಾ ಹಳ್ಳಿ ಶಾಸಕ ಸಿ.ಬಿ ಸುರೇಶ್ ಭಾಬು. ತುರುವೇಕೆರೆ ಶಾಸಕ ಎಂ.ಟಿ ಕೃಷ್ಣಪ್ಪ,ಮುಖಂಟರಾದ ಲೋಕೇಶ್ವರ್ ಸೇರಿದಂತೆ ಅನೇಕ ಮುಖಂಡರು ಭಾಗವಹಿಸುವರು.

ತಿಪಟೂರು ಸೇರಿದಂತೆ ಸುತ್ತಮುತ್ತಲ ತಾಲೂಕು ಜನರಿಗೆ ತುರ್ತು ಅಗತ್ಯವಾಗಿದ್ದ ಬ್ಲಡ್ ಬ್ಯಾಂಕ್ ಸೌಲಭ್ಯ ತರಲು ಸತತ ನಾಲ್ಕು ವರ್ಷಗಳಿಂದ ಪ್ರಯತ್ನಿಸಿದ್ದು ನಿವೃತ್ತ ಎಸಿಪಿ ಹಾಗೂ ಮುಖಂಡರಾದ ಲೋಕೇಶ್ವರ್ ರವರ ಸಹಕಾರದಿಂದ ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ಸಚಿವರಾದ ವಿ.ಸೋಮಣ್ಣ ನವರು ಹೆಚ್ಚಿನ ಆಸಕ್ತಿ ತೋರಿ ಬ್ಲಡ್ ಬ್ಯಾಂಕ್ ಗೆ ಅನುಮತಿ ನೀಡಲು ನೆರವಾದರು, ಅವರ ಸಹಕಾರಕ್ಕೆ ತಾಲ್ಲೋಕಿನ ಜನತೆಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ, ನಮ್ಮ ಶೇಖರ್ ಬ್ಲಡ್ ಬ್ಯಾಂಕ್ ನಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಉಳ್ಳ ಯಂತ್ರೋಪಕರಣಗಳು, ನುರಿತ ತಂತ್ರಜ್ಞರು ಹಾಗೂ ವೈದ್ಯರು ಲಭ್ಯವಿರುತ್ತಾರೆ. ತಿಪಟೂರು ಸೇರಿದಂತೆ ಸುತ್ತಮುತ್ತಲ ಅನೇಕ ಕಡೆ ಅಪಘಾತಗಳು ಸೇರಿದಂತೆ, ತುರ್ತು ಸಂದರ್ಭಗಳಲ್ಲಿ ಬ್ಲಡ್ ಕೊರತೆಯಿಂದ ಜೀವನ್ಮರಣ ಅನುಭವಿಸಿದ ಸಂದರ್ಭಗಳು ಉಂಟು, ಜನರ ಸಮಸ್ಯೆಗಳನ್ನ ಅರಿತು, ತಿಪಟೂರಿನಲ್ಲಿ ಶೇಖರ್ ರಕ್ತನಿಧಿ ಸೆಂಟರ್ ಪ್ರಾರಂಭವಾಗುವುದರಿಂದ,ತಿಪಟೂರು ತುರುವೇಕೆರೆ ಚಿಕ್ಕನಾಯಕನಹಳ್ಳಿ, ಅರಸೀಕೆರೆ, ಶ್ರೀರಾಂಪುರ ಸೇರಿದಂತೆ ಸುಮಾರು 70 ಕಿಲೋ ಮೀಟರ್ ವ್ಯಾಪ್ತಿಯಲ್ಲಿ, ಬರುವಂತಹ ಗ್ರಾಮೀಣ ಭಾಗದ ಜನರಿಗೆ ಅನುಕೂಲ ಆಗಲಿದೆ, ತುರ್ತು ಅಪಘಾತಗಳು ಸೇರಿದಂತೆ ಚಿಕಿತ್ಸೆಯ ಸಂದರ್ಭದಲ್ಲಿ, ರಕ್ತದ ಅಗತ್ಯಕ್ಕಾಗಿ, ಸುಮಾರು 70 ಕಿಲೋಮೀಟರ್ ದೂರದಿಂದ ರಕ್ತ ತರಬೇಕಿತ್ತು,ತಿಪಟೂರಿನಲ್ಲಿ ಬ್ಲಡ್ ಬ್ಯಾಂಕ್ ಪ್ರಾರಂಭಗೊಳ್ಳುತ್ತಿರುವುದು, ತುರ್ತು ಸಂದರ್ಭಗಳಲ್ಲಿ ಸಂಕಷ್ಟದಲ್ಲಿ ಇರುವವರಿಗೆನೆರವಾಗಲಿದೆ, ರೀತಿ ಉತ್ತಮವಾದ ಸೇವೆಯನ್ನು ನಮ್ಮ ಬ್ಲಡ್ ಬ್ಯಾಂಕ್ ನಿಂದ ನೀಡಲಾಗುವುದು.
ಬ್ಲಡ್ ಬ್ಯಾಕ್ ನಲ್ಲಿ ರಕ್ತದಾನಿಗಳು ನೀಡುವ ರಕ್ತವನ್ನು ಪರೀಕ್ಷೆ ಮಾಡಿ ಹಲವಾರು ವಿಭಾಗಗಳಲ್ಲಿ ವಿಂಗಡಿಸಿ ಅಗತ್ಯವಿರುವಂತಹ ರೋಗಿಗಳಿಗೆ ನೀಡಲಾಗುವುದು ಪರೀಕ್ಷಾ ಶುಲ್ಕ ಹಾಗೂ ಕೇಂದ್ರದ ನಿರ್ವಹಣೆ ಶುಲ್ಕಗಳನ್ನ ಮಾತ್ರ ವಿಧಿಸಲಾಗುವುದು, ಕೇಂದ್ರ ಸರ್ಕಾರದ ನಿಯಮಗಳಂತೆ, ಕೇಂದ್ರ ಸರ್ಕಾರ ನಿಗದಿಪಡಿಸಿರುವ ದರಕ್ಕೆ ರಕ್ತವನ್ನು ನೀಡಲಾಗುವುದು ಎಂದು ತಿಳಿಸಿದರು
ಪತ್ರಿಕಾ ಘೋಷ್ಠಿಯಲ್ಲಿ ಬ್ಲಡ್ ಬ್ಯಾಂಕ್ ತಂತ್ರಜ್ಞರಾದ ನಾಗೇಶ್ ಅದಂ.ಉಪಸ್ಥಿತರಿದರು

ವರದಿ:ಮಂಜುನಾಥ್ ಹಾಲ್ಕುರಿಕೆ

Exit mobile version