ವಿದ್ಯರ‍್ಥಿಗಳಲ್ಲಿ ಶಿಸ್ತು, ಶ್ರದ್ಧೆ, ಆತ್ಮವಿಶ್ವಾಸ, ಪ್ರಾಮಾಣಿಕತೆ, ಕ್ರಿಯಾಶೀಲತೆಯ ಜೊತೆಗೆ ನೈತಿಕ ತಳಹದಿಯ ಮೇಲೆ ಮುಕ್ತ ವಾತಾವರಣ ಕಲ್ಪಿಸಿ ಕೊಡುವುದು, ಶಾಲಾ ವಿದ್ಯರ‍್ಥಿಗಳಲ್ಲಿ ದೇಶಾಭಿಮಾನ, ಸಮಯಪ್ರಜ್ಞೆ ಸ್ವಯಂ ಪ್ರೇರಿತ ಗುಣಗಳನ್ನು ಬೆಳೆಸುವಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಮುಖ್ಯ ಉದ್ದೇಶವಾಗಿದೆ. ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ವತಿಯಿಂದ ಪ್ರತಿ ರ‍್ಷವೂ ವಿದ್ಯರ‍್ಥಿಗಳಿಗಾಗಿ ವಿವಿಧ ಶಾಲಾ ಹಂತದಿಂದ ರಾಷ್ಟ್ರಮಟ್ಟದ ವರೆಗಿನ ಹಂತಗಳಲ್ಲಿ ತರಬೇತಿಗಳನ್ನು ಆಯೋಜಿಸಲಾಗುತ್ತದೆ. ನಮ್ಮ ಶಾಲೆಯ ತಂಡಗಳು ವಿವಿಧ ಹಂತಗಳಲ್ಲಿ ತರಬೇತಿಗಳನ್ನು ಯಶಸ್ವಿಯಾಗಿ ಮುಗಿಸಿ ರಾಷ್ಟ್ರಮಟ್ಟದ ೭೫ನೇ ಡೈಮಂಡ್ ಜುಬಿಲಿ ಜಾಂಬೂರಿಗೆ ದಿನಾಂಕ ೨೭.೦೧.೨೦೨೫ ರಿಂದ ೦೩.೦೨.೨೫ ರವರೆಗೆ ನಡೆಯುವ ತಮಿಳುನಾಡಿನ ತಿರಿಚಿರಪಲ್ಲಿ ಜಿಲ್ಲೆ, ಸಿಪ್ ಕಾಟ್ ಇಂಡಸ್ಟ್ರಿಯಲ್ ಪರ‍್ಕ್, ಮನಪ್ಪ ರೈ ಇಲ್ಲಿಗೆ ತೆರಳುತ್ತಿರುವುದು ಶಾಲೆಗೆ, ತಾಲೂಕು, ಜಿಲ್ಲೆ ಹಾಗೂ ರಾಜ್ಯಕ್ಕೆ ಹೆಮ್ಮೆಯ ವಿಷಯವಾಗಿದೆ. ಸ್ಕೌಟ್ಸ್ ಮತ್ತು ಗೈಡ್ ಸಂಸ್ಥೆಯು ವಿದ್ಯರ‍್ಥಿಗಳಿಗೆ ಶಿಸ್ತು, ಸಂಯಮ, ಸಮಯ ಪ್ರಜ್ಞೆ, ಸ್ವಯಂ ಪ್ರೇರಿತ ಸೇವಾ ಮನೋಭಾವನೆಯನ್ನು ರೂಪಿಸುವಲ್ಲಿ ಪ್ರಮುಖ ಸಂಸ್ಥೆಯಾಗಿದೆ. ಈ ನಿಟ್ಟಿನಲ್ಲಿ ನಮ್ಮ ಶಾಲೆಯ ವಿದ್ಯರ‍್ಥಿ ಗಳಲ್ಲಿ ಈ ಎಲ್ಲಾ ವ್ಯಕ್ತಿತ್ವ ವಿಕಸನಗೊಳಿಸುವ ಮಾನವೀಯ ಮೌಲ್ಯಗಳನ್ನು,, ಸಹ ಬಾಳ್ವೆಯಿಂದ ಬದುಕುವ ಗುಣಗಳನ್ನು ರೂಢಿಸುವಲ್ಲಿ ಹೆಚ್ಚಿನ ಆದ್ಯತೆ ನೀಡಲಾಗಿದೆ. ವಿವಿಧ ಹಂತದ ತರಬೇತಿ ಚಟುವಟಿಕೆಗಳಲ್ಲಿ ಆಸಕ್ತಿಯುಕ್ತವಾಗಿ ಭಾಗವಹಿಸಿ ಅದರ ಪ್ರಯೋಜನವನ್ನು ಪಡೆಯಲಿ ಎಂಬ ಸದುದ್ದೇಶದಿಂದ ಶಾಲೆಯಿಂದ ರಾಷ್ಟ್ರಮಟ್ಟದವರೆಗಿನ ಎಲ್ಲಾ ಚಟುವಟಿಕೆ ತರಬೇತಿಗಳಲ್ಲಿ ಭಾಗವಹಿಸುವ ಮುಕ್ತ ಅವಕಾಶವನ್ನು ಕಲ್ಪಿಸಿಕೊಡಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷರಾದ ಶ್ರೀ ಸಿ.ಹನುಮರಂಗಯ್ಯನವರು ತಿಳಿಸಿದರು. ಮಕ್ಕಳು ನಾಲ್ಕು ಗೋಡೆಗಳ ನಡುವೆ ಕಲಿಯುವ ಓದು ಬರಹದ ಜೊತೆಗೆ ಪ್ರಕೃತಿಯ ಮಡಿಲಲ್ಲಿ ಸಹ ಬಾಳ್ವೆ, ಸಮಾನತೆ, ಸಮಯಪ್ರಜ್ಞೆ, ಪರಿಸರ ಪ್ರಜ್ಞೆ,ನಮ್ಮ ಸಂಸ್ಕೃತಿಯ ಅರಿವನ್ನು ಮೂಡಿಸುವ ಹಾಗೂ ವಿದ್ಯರ‍್ಥಿಗಳು ವ್ಯಕ್ತಿತ್ವ ವಿಕಸನದ ಜೊತೆಗೆ ಕಲಿಕೆಗೆ ಪೂರಕವಾದ ತರಬೇತಿ ನೀಡುವುದು ಅತ್ಯಮೂಲ್ಯವಾದದು, ಇಂತಹ ತರಬೇತಿ ಚಟುವಟಿಕೆಗಳಲ್ಲಿ ನಮ್ಮ ಶಾಲೆಯ ವಿದ್ಯರ‍್ಥಿಗಳು ಶಾಲಾ ಹಂತದಿಂದ ರಾಷ್ಟ್ರಮಟ್ಟದ ಜಾಂಬೂರಿಯವರೆಗೆ ಭಾಗವಹಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಸಂಸ್ಥೆಯ ಕಾರ್ಯದರ್ಶಿ ನವೀನ್ ಬಿ. ಹೆಚ್ ತಿಳಿಸಿದರು. ರಾಷ್ಟ್ರಮಟ್ಟದ ಡೈಮಂಡ್ ಜುಬಿಲಿ ಜಾಂಬೂರಿಗೆ ಭಾಗವಹಿಸುತ್ತಿರುವ ಸ್ಕೌಟ್ಸ್ ವಿದ್ಯರ‍್ಥಿಗಳಾದ ಅಕ್ಷಯ್ ಎಂ ವೈ, ಅಮೃತ್ ಸಿ ಎಂ, ಗೌರವ್, ಗೌರವ್ ಭೂಷಣ್, ಹರಿಪ್ರೀತ್ ಯು, ಹಿತೇಶ್ ವಿ, ಲೋಹಿತ್ ಜಿ, ಮನ್ವಿತ್ ಡಿ ಎಂ, ಉಲ್ಲಾಸ್ ಆರ್ ಡಿ, ಸ್ಕೌಟ್ ಮಾಸ್ಟರ್ ಪ್ರವೀಣ್ ಎಚ್.ಎಸ್, ಮತ್ತು ಗೈಡ್ಸ್ ವಿದ್ಯರ‍್ಥಿಗಳಾದ ಲಿಖಿತ ಎನ್ ಎಸ್, ಸಿಂಚನ ಎಸ್ ಜೆ ಭೂಷಣ್, ಲಾಲಿತ್ಯ ಎ ಎಂ, ದೀಪ್ತಿ ಎಲ್, ಮಾನ್ಯ ಡಿ, ಪ್ರಣತಿ ಕೆ ಎಚ್, ಪ್ರಿಯಾಂಕ ಎಂ, ಪುಣ್ಯಶ್ರೀ ಜಿ ಎನ್, ಗೈಡ್ ಕ್ಯಾಪ್ಟನ್ ಸಂಧ್ಯಾ ಎಂ ಜಿ. ರವರಿಗೆ ಶಾಲೆಯ ಅಧ್ಯಕ್ಷರು, ಕಾರ್ಯದರ್ಶಿಗಳು, ಪ್ರಾಂಶುಪಾಲರಾದ ಶ್ರೀಮತಿ ಗೀತಾ ಆರ್.ಎಸ್, ಶಿಕ್ಷಕರು ಹಾಗೂ ಎಲ್ಲಾ ಸಿಬ್ಬಂದಿವರ್ಗದವರು ಶುಭ ಹಾರೈಸಿದ್ದಾರೆ.ನಮ್ಮ ದೇಹ ಅಥವಾ ಮನಸ್ಸಿಗೆ ದೊರಕುವ ಉತ್ತಮ ತರಬೇತಿ ನಿಜವಾದ ಯಶಸ್ಸಿನ ಕಡೆಗೆ ಏಕೈಕ ಮರ‍್ಗವಾಗುತ್ತದೆ. ಶಿಕ್ಷಣ ಜ್ಞಾನ ಎನಿಸಿದರೆ ತರಬೇತಿ ವಿಶೇಷ ಜ್ಞಾನವಾಗುತ್ತದೆ, ಈ ನಿಟ್ಟಿನಲ್ಲಿ ನಮ್ಮ ಶಾಲೆಯಲ್ಲಿ ಸ್ಕೌಟ್ಸ್, ಗೈಡ್ಸ್, ಕಬ್ಸ್, ಮತ್ತು ಬುಲ್ ಬುಲ್ ಘಟಕಗಳನ್ನು ಸ್ಥಾಪಿಸಲಾಗಿದೆ.
ವರದಿ: ಸಂತೋಷ್ ಓಬಳ. ಗುಬ್ಬಿ
