KALPATHARU KRANTHI

ಕೇಂದ್ರ ಸರ್ಕಾರದ ರೈತವಿರೋದಿ ನೀತಿ ಖಂಡಿಸಿ ಹಾಗೂ ರೈತರ ನಾಯಕ ಜಗಜೀತ್ ಸಿಂಗ್ ದಾಲೇವಾಲ್ ರವರ ಹೋರಾಟ ಬೆಂಬಲಿಸಿ ಜನವರಿ 23 ರಂದು ರೈತಪರ ಸಂಘಟನೆಗಳಿಂದ ಉಪವಾಸ ಸತ್ಯಾಗ್ರಹ

Spread the love

ಕೇಂದ್ರಸರ್ಕಾರ ಉಂಡೆ ಕೊಬ್ಬರಿಗೆ ವೈಜ್ಞಾನಿಕ ಬೆಲೆ ನಿಗಧಿಗೊಳ್ಳಿಸಬೇಕು, ಹಾಗೂ ರೈತರ ಬೆಲೆಗಳಿಗೆ ಸ್ವಾಮಿನಾಥನ್ ವರದಿ ಆಧಾರದಲ್ಲಿ ಎಲ್ಲಾ ಬೆಳೆಗಳಿಗೂವೈಜ್ಞಾನಿಕ ಬೆಲೆ ನಿಗದಿಗೊಳಿಸಬೇಕು,ಎಂದು ಒತ್ತಾಯಿಸಿ ಹಾಗೂ ಎಂಎಸ್ಪಿ ಜಾರಿಗೊಳಿಸಲು ಒತ್ತಾಯಿಸಿ ಅಖಿಲ ಭಾರತೀಯ ರೈತ ಸಂಯುಕ್ತ ಹೋರಾಟ ನಾಯಕ ಜಗಜೀತ್ ಸಿಂಗ್ ದಾಲೈವಾಲ ಹಾಗೂ ರೈತರ ಮುಖಂಡರುಗಳು ನಡೆಸುತ್ತಿರುವ ಹೋರಾಟ ಬೆಂಬಲಿಸಿ ಜನವರಿ 23 ರಂದು ತಿಪಟೂರು ನಗರದ ಆಡಳಿತ ಸೌಧದ ಮುಂಭಾಗ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತಪರ ಸಂಘಟನೆಗಳಿಂದ ಉಪವಾಸ ಸತ್ಯಾಗ್ರಹ ಹಾಗೂ ಪ್ರತಿಭಟನೆ ಹಮ್ಮಿಕೊಳ್ಳಾಗಿದೆ.

ನಗರದ ಕೌಸ್ತುಭ ಹೋಟೆಲ್ ಸಭಾಂಗಣದಲ್ಲಿ ಆಯೋಜಿಸಿದ ಪತ್ರಿಕಾ ಘೋಷ್ಠಿಯಲ್ಲಿ ಮಾತನಾಡಿದ ರೈತ ಮುಖಂಡ ಜಯಾನಂದಯ್ಯ
ರಾಜ್ಯ ಸರ್ಕಾರ ಉಂಡೆ ಕೊಬ್ಬರಿಯ ಉತ್ಪಾದನಾ ವೆಚ್ಚವನ್ನು ಕ್ವಿಂಟಾಲಿಗೆ 18,638 ರೂಪಾಯಿಗಳೆಂದು ಲೆಕ್ಕಹಾಕಿ
ಇದನ್ನು ಆದರಿಸಿ ಕನಿಷ್ಟ ಬೆಂಬಲ ಬೆಲೆಯನ್ನು ನಿಗದಿಪಡಿಸಬೇಕೆಂದು ಕೇಂದ್ರ ಸರ್ಕಾರಕ್ಕೆ ಕಳುಹಿಸಿದ್ದರೂ, ಅದ್ಯಾವುದನ್ನೂ
ಪರಿಗಣಿಸದೆ ಕೇಂದ್ರ ಸರ್ಕಾರ 2024-25 ನೇ ಸಾಲಿಗೆ ಉಂಡೆ ಕೊಬ್ಬರಿಯ ಬೆಂಬಲ ಬೆಲೆಯನ್ನು 1 ಕೆಜಿಗೆ ಕೇವಲ 1 ರೂ
ಹೆಚ್ಚಿಸಿ (ಕ್ವಿಂಟಾಅಗೆ 12,000 ರಿಂದ 12.100) ಇಡೀ ರೈತ ಸಮುದಾಯವನ್ನೇ ಅವಮಾನಿಸಿದೆ. ಚುನಾವಣಾ ಸಮಯದಲ್ಲಿ
ರೈತರನ್ನು, ದುಡಿಯುವವರನ್ನು ಬಾಯ್ತುಂಬ ಹೊಗಳುವ ಶಾಸಕರು, ಸಂಸದರು, ಸಚಿವರು ರೂ 1 ಹೆಚ್ಚಿಸಿರುವ ಬಗ್ಗೆ
ಯಾವುದೇ ಪ್ರತಿಕ್ರಿಯೆಯನ್ನು ನೀಡದಷ್ಟು ನಿಷ್ಕ್ರಿಯರಾಗಿದ್ದಾರೆ. ಹಾಗೂ ಬೆಂಬಲ ಬೆಲೆಯನ್ನು ನಿರ್ಧರಿಸುವಲ್ಲಿ ಸಮಾನ
ಜವಾಬ್ದಾರಿಯನ್ನು ಹೊತ್ತಿರುವ ಕೇಂದ್ರದ ವಿರೋಧ ಪಕ್ಷವು ಈ ವಿಚಾರದಲ್ಲಿ ಪ್ರತಿಕ್ರಿಯಿಸದೆ ಮೌನ ವಹಿಸಿರುವುದು
ವಿಷಾದನೀಯ. ಸ್ವಾಭಿಮಾನಿಗಳಾದ ನಾವೆಲ್ಲಾ ನಮ್ಮ ಬೆವರಿನ ದುಡಿಮೆಯಲ್ಲಿ ಪ್ರತಿಯೊಬ್ಬ ರೈತರೂ ರೂ 1 (ನಾಣ್ಯ) ರಂತೆ
ಕೇಂದ್ರ ಸರ್ಕಾರಕ್ಕೆ ಹಾಗೂ ವಿರೋಧ ಪಕ್ಷಕ್ಕೆ ಹಿಂದಿರುಗಿಸಿ ನಮ್ಮ ಸ್ವಾಭಿಮಾನವನ್ನು ಎತ್ತಿಹಿಡಿಯೋಣ,ರೈತರನ್ನು ಮುಗಿಸುವ ಹುನ್ನಾರದಿಂದ ಕೃಷಿಗೆ ಮಾರಕವಾದ 3 ಕರಾಳ
ಕಾನೂನುಗಳನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿತ್ತು. ದೇಶದ ಎಲ್ಲಾ ರೈತರು ಒಂದಾಗಿ ಸತತ 1 ವರ್ಷ ಹೋರಾಟ ಮಾಡಿ
ಆ ಕರಾಳ ಕಾನೂನುಗಳನ್ನು ಹಿಂಪಡೆಯುವಂತೆ ಮಾಡಿದ್ದರು. ಆಗ ಆದ ಒಪ್ಪಂದದಂತೆ ಕನಿಷ್ಠ ಬೆಂಬಲ ಬೆಲೆಯನ್ನು
ಶಾಸನಬದ್ಧಗೊಳಸಬೇಕಾಗಿತ್ತು. ಆದರೆ ಕೇಂದ್ರ ಸರ್ಕಾರ ಮಾತು ತಪ್ಪಿದಾಗ ಹಲವು ತಿಂಗಳುಗಳಿಂದ ಮತ್ತೆ ದೆಹಲಿಯ
ಗಡಿಗಳಲ್ಲಿ ರೈತರು ಚಳಿ ಹಾಗೂ ಬಿಸಿಲನ್ನು ಲೆಕ್ಕಿಸದೆ ಹೋರಾಡುತ್ತಿದ್ದಾರೆ. ನಮ್ಮ ಒಡನಾಡಿಗಳಿಗೆ ಬೆಂಬಲ ಸೂಚಿಸಲು
ನಿಮ್ಮೊಂದಿಗೆ ನಾವಿದ್ದೇವೆ ಎಂದು ತೋರಿಸಲು 1 ದಿನದ ಉಪವಾಸ ಸತ್ಯಾಗ್ರಹವನ್ನು 23.01.2025 ನೇ ಗುರುವಾರದಂದು
ತಿಪಟೂರಿನ ಆಡಳಿತ ಕಚೇರಿಯ ಎದುರು ಹಮ್ಮಿಕೊಳ್ಳಲಾಗಿದೆ. ಈ ಉಪವಾಸದ ಪ್ರತಿಭಟನೆಯಲ್ಲಿ ಸ್ವಾಭಿಮಾನಿಗಳಾದ
ನಾವೆಲ್ಲ ಭಾಗವಹಿಸಿ ನಮ್ಮ ಶಕ್ತಿಯನ್ನು ಸರ್ಕಾರಕ್ಕೆ ತೋರಿಸೋಣ. ರೈತರ ಬಗ್ಗೆ ಯಾವುದೇ ನಿರ್ಧಾರಗಳನ್ನು
ತೆಗೆದುಕೊಳ್ಳುವ ಮುಂಚೆ ಸೂಕ್ತವಾಗಿ ಆಲೋಚಿಸಬೇಕೆಂದು ಎಚ್ಚರಿಸುವ ಜವಾಬ್ದಾರಿ ಪ್ರತಿ ರೈತರದ್ದಾಗಿದೆ, ಎಂದು ತಿಳಿಸಿದರು
ರೈತಮುಖಂಡ ತಿಮ್ಲಾಪುರ ದೇವರಾಜು ಮಾತನಾಡಿ ಇತ್ತಿಚಿನ ದಿನಗಳಲ್ಲಿ ರೈತರ ಬೆಳೆಗಳ ಉತ್ಪಾದನ ವೆಚ್ಚ ಜಾಸ್ತಿಯಾಗುತ್ತಿದೆ, ಸರ್ಕಾರ ಬಹುಸಂಖ್ಯಾತ ರೈತರ ಹಿತಮರೆತು, ಕಾರ್ಪೋರೇ ಪರವಾಗಿ ಕೆಲಸ ಮಾಡುತ್ತಿದೆ, ಉಂಡೆ ಕೊಬ್ಬರಿ ಉತ್ಪಾದನಾ ವೆಚ್ಚ ಜಾಸ್ತಿಯಾಗಿದ್ದು ಕನಿಷ್ಠ ಬೆಂಬಲ ಬೆಲೆ ನೀಡದೆ ಕೇವಲ 1ರೂಪಾಯಿ ಹೆಚ್ಚಳ ಮಾಡಿ ರೈತರನ್ನ ಅಣಕಿಸುವ ಕೆಲಸ ಮಾಡಿರುವುದು ಖಂಡನೀಯ, ಕೇಂದ್ರ ಸರ್ಕಾರದ ಕೊಬ್ಬರಿ ಬೆಳಗಾರರ ವಿರೋಧಿ ಧೋರಣೆ ಖಂಡಿಸಿ ಹಾಗೂ ವಿರೋದ ಪಕ್ಷಗಳ ವೈಪಲ್ಯ ಖಂಡಿಸಿ ತಾಲ್ಲೋಕಿನ ಪ್ರತಿ ರೈತರು ಪ್ರತಿಭಟನಾರ್ಥವಾಗಿ ತಾವು ದುಡಿಮೆ ಮಾಡಿದ ಒಂದು ರೂಪಾಯಿ ದುಡ್ಡನ್ನು ಕೇಂದ್ರ ಸರ್ಕಾರ ಹಾಗೂ ಕೇಂದ್ರ ವಿರೋಧ ಪಕ್ಷಗಳಿಗೆ ಕಳಿಸುವ ಮೂಲಕ ನಮ್ಮ ನೈತಿಕ ಆಕ್ರೋಶ ವ್ಯಕ್ತಪಡಿಸಿ ನಮ್ಮಗೆ ಆಗುತ್ತಿರುವ ಅನ್ಯಾಯವನ್ನ ಸರ್ಕಾರಕ್ಕೆ ಮನವರಿಕೆ ಮಾಡಬೇಕಾಗಿದ್ದು ಎಲ್ಲಾ ರೈತರು ಪ್ರತಿಭಟನೆಯಲ್ಲಿ ಭಾಗವಹಿಸಬೇಕು ಎಂದು ತಿಳಿಸಿದರು

ಬೆಳೆಕಾವಲು ಸಮಿತಿ ಮುಖಂಡ ಬಿಳಿಗೆರೆ ಪಾಳ್ಯ ನಾಗೇಶ್ ಮಾತನಾಡಿ ದೇಶದಲ್ಲಿ ರೈತರು ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿಗೊಳಿಸಬೇಕು ಹಾಗೂ ಸ್ವಾಮಿನಾಥನ್ ವರದಿ ಜಾರಿಗೆ ಒತ್ತಾಯಿಸಿ ಅಖಿಲಭಾರತ ರೈತ ಸಂಯುಕ್ತ ಹೋರಾಟ ನಾಯಕ ಜಗಜೀತ್ ಸಿಂಗ್ ದಲೈವಾಲ ಹಾಗೈ ರೈತ ಮುಖಂಡರು ನಡೆಸುತ್ತಿರುವ ಹೋರಾಟಕ್ಕೆ ನಾವೆಲ್ಲ ಬೆಂಬಲಿಸುವ ದೃಷ್ಠಿಯಿಂದ ತಿಪಟೂರು ಆಡಳಿತ ಸೌಧದ ಮುಂಭಾಗ ಜನವರಿ 23 ರಂದು ಉಪವಾಸ ಸತ್ಯಾಗ್ರಹ ಹಮ್ಮಿಕೊಂಡಿದ್ದು ಹೆಚ್ಚಿನ ಸಂಖ್ಯೆಯಲ್ಲಿ ರೈತರು ಹಾಗೂ ತಾಲ್ಲೋಕಿನ ರೈತಪರಸಂಘಟನೆಗಳು ಭಾಗವಹಿಸಬೇಕು ನಮ್ಮ ಹೋರಾಟಕ್ಕೆ,ಬೆಲೆ ಕಾವಲು ಸಮಿತಿ, ವಕೀಲರ ಸಂಘ, ರವಾನೆದಾರರ ಸಂಘ, ವರ್ತಕರ ಸಂಘ
ಬಗರ್ ಹುಕುಂ ಹೋರಾಟ ಸಮಿತಿ, ಭಾರತೀಯ ವೈದ್ಯಕೀಯ ಸಂಘ,
ಕಲ್ಪತರು ವಿದ್ಯಾ ಸಂಸ್ಥೆ ಆಡಳಿತ ಮಂಡಳಿ, ನಾಗರೀಕ ಜಾಗೃತಿ ಹಾಗೂ ಹಿತರಕ್ಷಣಾ ಸಮಿತಿ,
ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ (ರಿ)
ಕರ್ನಾಟಕ ರಾಜ್ಯ ನಿವೃತ್ತ ಸರ್ಕಾರಿ ನೌಕರರ ಸಂಘ,
ಜೀವವಿಮಾ ಪ್ರತಿನಿಧಿಗಳ ಸಂಘ ಸೇರಿದಂತೆ ಹಲವು ಸಂಘ ಸಂಸ್ಥೆಗಳು ಭಾಗವಹಿಸುತ್ತಿವೆ ಎಲ್ಲಾರೈತರು ಭಾಗವಹಿಸಿ ಹೋರಾಟ ಬೆಂಬಲಿಸಿದೆ ಎಂದು ತಿಳಿಸಿದರು

ಪತ್ರಿಕಾ ಘೋಷ್ಠಿಯಲ್ಲಿ ಸೌಹಾರ್ದ ತಿಪಟೂರು ಮುಖಂಡ,ಅಲ್ಲಾ ಭಕ್ಷು,ರೈತಮುಖಂಡ ಸಿದ್ದಪ್ಪ ಬಳುವನೇರಲು,ರೈತ ಮುಖಂಡ ಯೋಗನಂದಸ್ವಾಮಿ. ,ಜಯನಂದಯ್ಯ,ತಿಮ್ಲಪುರದೇವರಾಜು,ರಂಗಾಪುರ ಚನ್ನಬಸವಣ್ಣ,ನಾಗೇಶ್ ಬಿಳಿಗೆರೆಪಾಳ್ಯ, ತಡಸೂರು ನಾಗರಾಜು‌ ಬೆಳೂರನಹಳ್ಳಿ ಚನ್ನಬಸವಯ್ಯ,ರವೀಂದ್ರ ಕುಮಾರ್,ದೇವಾನಂದ್ ,ರಾಜಮ್ಮ ,ಸತೀಶ್ ಎಸ್.ಎಫ್ ಐ ,ಶ್ರೀಕಾಂತ್ ಬೆಳೆಕಾವಲು ಸಮಿತಿ. ಮುಂತ್ತಾದವರು ಉಪಸ್ಥಿತರಿದರು.

ವರದಿ:ಮಂಜುನಾಥ್ ಹಾಲ್ಕುರಿಕೆ

Exit mobile version