
ತುಮಕೂರು ಜಿಲ್ಲೆ ಕಲ್ಪತರು ನಾಡಿ ಶಕ್ತಿಪೀಠ ತಿಪಟೂರು ತಾಲ್ಲೋಕಿನ ದಸರೀಘಟ್ಟ ಶ್ರೀ ಚೌಡೇಶ್ವರ ದೇವಾಲಯದಲ್ಲಿ ಮಕರ ಸಂಕ್ರಾಂತಿ ಹಬ್ಬವನ್ನ ಸಂಭ್ರಮ ಸಡಗರದಿಂದ ಆಚರಿಸಲಾಯಿತು.
ಸಂಕ್ರಾಂತಿ ಅಂಗವಾಗಿ ಶ್ರೀ ಚೌಡೇಶ್ವರಿ ದೇವಿ ಹಾಗೂ ಶ್ರೀ ಕರಿಯಮ್ಮ ದೇವಿಯವರಿಗೆ ವಿಶೇಷ ಅಲಂಕಾರ ಹಾಗೂ ಪೂಜೆ ನೆರವೇರಿಸಲಾಯಿತು.ಆದಿಚುಂಚನಗಿರಿ ದಸರೀಘಟ್ಟ ಶಾಖಾಮಠದ ಶ್ರೀ ಶ್ರೀ ಚಂದ್ರಶೇಖರ ನಾಥ ಮಹಾಸ್ವಾಮಿಗಳು ಶ್ರೀ ಚೌಡೇಶ್ವರಿ ಹಾಗೂ ಶ್ರೀಕರಿಯಮ್ಮ ದೇವಿಯವರಿಗೆ ವಿಶೇಷ ಪೂಜೆಸಲ್ಲಿಸಿ ನಂತರ ಮಠದ ಆವರಣದಲ್ಲಿ ಹೊಸ ಸುಗ್ಗಿಯ ಧಾನ್ಯಗಳನ್ನ ರಾಶಿಹಾಕಿ,ರಾಶಿಪೂಜೆ ನೆರವೇರಿಸಿದರು.ನಂತರ ಗೋವುಗಳಿಗೆ ಪೂಜೆಸಲ್ಲಿಸಿ ಕಿಚ್ಚು ಆಯಿಸಲಾಯಿತು.
ರಾಶಿಪೂಜೆ ನೆರವೇರಿಸಿ ಮಾತನಾಡಿದ ಶ್ರೀ ಚಂದ್ರಶೇಖರನಾಥ ಮಹಾಸ್ವಾಮೀಜಿಗಳು ಸಂಕ್ರಾಂತಿ ಹಬ್ಬ ನಮ್ಮ ಗ್ರಾಮೀಣ ಸೊಗಡಿನ ಪ್ರತೀಕ ವರ್ಷವಿಡಿ,ದುಡಿದ ರೈತ ತಾವುಬೆಳೆದ ದವಸ ಧಾನ್ಯಗಳಿಗೆ ಪೂಜೆಸಲ್ಲಿಸುವ ಸಂಪ್ರದಾಯಿಕ ಹಬ್ಬ,ಜನಪದ ಸಂಪ್ರದಾಯಗಳ ಜೊತೆ, ಧಾರ್ಮಿಕವಾಗಿ ಮಕರ ಸಂಕ್ರಾಂತಿ ವಿಶೇಷತೆ ಪಡೆದಿದ್ದು, ಸೂರ್ಯ ತನ್ನ ಪಥಬದಲಿಸುವ ಕಾರಣ, ಈ ಹಬ್ಬಕ್ಕೆ ಮಹತ್ವ ಜಾಸ್ತಿ, ನಮ್ಮ ಸಂಪ್ರದಾಯ ಆಚರಣೆಗಳು ಮನುಷ್ಯನ ಶಾಂತಿ ನೆಮ್ಮದಿಗೆ,ಮಾಡಿಕೊಂಡ ಆಚರಣೆಗಳು, ಎಂದು ತಿಳಿಸಿದರು
ಕಾರ್ಯಕ್ರಮದಲ್ಲಿ ಶ್ರೀಚೌಡೇಶ್ವರಿ ದೇವಾಲಯದ ಧರ್ಮದರ್ಶಿಗಳು ನೂರಾರು ಸಂಖ್ಯೆಯಲ್ಲಿ ಗ್ರಾಮಸ್ಥರು ಉಪಸ್ಥಿತರಿದರು.
ವರದಿ :ಮಂಜುನಾಥ್ ಹಾಲ್ಕುರಿಕೆ