ತಿಪಟೂರು:ತಾಲ್ಲೋಕಿನ ಹೊನ್ನವಳ್ಳಿ ಹೋಬಳಿ ಮೀಸೆತಿಮ್ಮನಹಳ್ಳಿ ಬಳಿ ಇರುವ ಮಾನ್ಯ ಶ್ರೀ ಕೋಕನೆಟ್ ಫ್ಯಾಕ್ಟರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಬಿಹಾರ ಮೂಲದ ಕಾರ್ಮಿಕರ ಮಗು ಫ್ಯಾಕ್ಟರಿಯ ಸಮೀಪ ಇರುವ ಕಾಯಿನೀರಿನ ಗುಂಡಿಗೆ ಬಿದ್ದು ಎರಡು ವರ್ಷದ ಮಗು ದುರ್ಮರಣ.ಹೊಂದಿರುವ ಘಟನೆ ನಡೆದಿದೆ.

ಮದ್ಯಾಹ್ನ 2=00ರ ಸಮಯದಲ್ಲಿ ಕುಸುಮಕುಮಾರಿ (2). ಎಂಬ ಹೆಣ್ಣು ಮಗು ಕಾಯಿ ನೀರಿನಗುಂಡಿಗೆ ಬಿದ್ದು ಸಾವನಪ್ಪಿರುವ ದುರ್ದೈವಿ.
ಮಾನ್ಯಶ್ರೀ ಕೋಕೋನೆಟ್ ಫ್ಯಾಕ್ಟರಿಯಲ್ಲಿ ತಂದೆ ತಾಯಿ ತೆಂಗಿನ ಕಾಯಿಹೊಡೆಯುವಾಗ,ಪಕ್ಕದಲ್ಲೇ
ಆಟವಾಡುತ್ತಿದ್ದ ಮಗು ಕಾಣದೇ ಇದ್ದಾಗ ಪೋಷಕರು ಹುಡುಕಾಟ ಪ್ರಾರಂಭಿಸಿದಾಗ ಗುಂಡಿ ಒಳಗೆ ಬಿದ್ದಿರುವುದನ್ನು ಗಮನಿಸಿ ಮಗುವನ್ನು ಮೇಲೆ ಎತ್ತಲಾಗಿದೆ.
ನಂತರ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಧ್ಯದಲ್ಲೇ ಸಾವನಪ್ಪಿರುತ್ತದೆ ಎಂದು ತಿಳಿದು ಬಂದಿದೆ.ಸ್ಥಳಕ್ಕೆ ಹೊನ್ನವಳ್ಳಿ ಪೊಲೀಸರು ಭೇಟಿ ನೀಡಿದ್ದು. ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಕೈಗೊಳ್ಳಲಾಗಿದೆ.