KALPATHARU KRANTHI

ತಿಪಟೂರುನಗರದಲ್ಲಿ ಕುಡಿಯುವ ನೀರಿನ ಅಭಾವ ಹಿನ್ನೆಲೆ ನೊಣವಿನಕೆರೆಕೆರೆಯಿಂದ ನಗರಕ್ಕೆ ನೀರುಪೂರೈಸುವ ಯೋಜನೆಗೆ ಶೀಘ್ರಕ್ರಮ :ಶಾಸಕ ಕೆ.ಷಡಕ್ಷರಿ

Spread the love

ತಿಪಟೂರು ನಗರಕ್ಕೆ ನೀರುಪೂರೈಸುವ ಈಚನೂರು ಕೆರೆಗೆ ಕಲೂಷಿತ ನೀರು ಸೇರಿರುವ ಪರಿಣಾಮ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಿದೆ, ನಗರಕ್ಕೆ ಕುಡಿಯುವ ನೀರು ಪೂರೈಕೆ ಬಗ್ಗೆ ನಗರಸಭೆ ಸದಸ್ಯ ಜೊತೆ ಚರ್ಚಿಸಲು ನಗರಸಭೆ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ವಿಶೇಷ ಸಾಮಾನ್ಯ ಸಭೆ ಕರೆಯಲಾಗಿತ್ತು, ಆದರೆ ವಿರೋದ ಪಕ್ಷದ ಸದಸ್ಯರು ಸಭೆಯಲ್ಲಿ ಗದ್ದಲ ಉಂಟುಮಾಡಿದ ಕಾರಣ,ಸಭೆಯಲ್ಲಿ ಸೂಕ್ತವಾಗಿ ಚರ್ಚೆ ಮಾಡಲು ಸಾಧ್ಯವಾಗಿಲ್ಲ,ಸಧ್ಯಕ್ಕೆ ನಗರದಲ್ಲಿ ನೀರಿನ ಅಭಾವ ಆಗದಂತೆ ಸೂಚನೆ ನೀಡಿದೇನೆ ಎಂದರು

ನಗರದ ನಗರಸಭೆ ಸಭಾಂಗಣದಲ್ಲಿ ಆಯೋಜಿಸಿದ ಪತ್ರಿಕಾ ಘೋಷ್ಟಿಯಲ್ಲಿ ಮಾತನಾಡಿದ ಶಾಸಕ ಕೆ.ಷಡಕ್ಷರಿ ಯವರು

ತಿಪಟೂರು ನಗರಕ್ಕೆ ಕುಡಿಯುವ ನೀರು ಪೂರೈಸುತ್ತಿದ್ದ ಈಚನೂರು ಕೆರೆಯಲ್ಲಿ ತಾಲ್ಲೋಕಿನಲ್ಲಿ ಸುರಿದ ಭಾರೀ ಮಳೆಯಿಂದ ಮಳೆನೀರಿನೊಂದಿಗೆ ಯುಜಿಡಿ ನೀರು ಸೇರಿ,ಕೆರೆನೀರು ಕಲೂಷಿತವಾಗಿದೆ,ತಿಪಟೂರು ನಗರದಲ್ಲಿ ಜನಸಂಖ್ಯೆ ದಿನೆದಿನೆ ಜಾಸ್ತಿಯಾಗುತ್ತಿದ್ದು,ನಗರ ಬೆಳೆಯುತ್ತಿರುವ ಕಾರಣ ಹೆಚ್ಚು ನೀರಿನ ಅಗತ್ಯವಿದ್ದು,ಈಚನೂರು ಕೆರೆ ನೀರು ಶೇಖರಣ ಸಾಮರ್ಥ್ಯ ಕಡಿಮೆ ಇದ್ದು, ಮುಂದಿನ ದಿನಗಳಲ್ಲಿ ನೀರಿನ ಅಭಾವ ಎದುರಾಗಲಿದೆ.ಎನ್ನುವುದನ್ನ ಅರಿತು, ತಾಲ್ಲೋಕಿಗೆ ನೈಸರ್ಗಿಕವಾಗಿ ನೀರು ಹರಿಯುವ ನೊಣವಿನಕೆರೆ ಕೆರೆಯಿಂದ ನೀರು ತರುವ ಯೋಜನೆ ರೂಪಿಸಲಾಗಿತ್ತು,ಅಚ್ಚುಕಟ್ಟು ಪ್ರದೇಶದ ರೈತರಿಗೆ ತೊಂದರೆಯಾಗದಂತೆ ಹೆಚ್ಚುವರಿ ಹಂಚಿಕೆ ಮಾಡಲಾಗಿತ್ತು,ಆದರೆ ನೊಣವಿನಕೆರೆ ಭಾಗದ ರೈತರು ಹಾಗೂ ಅಚ್ಚುಕಟ್ಟುದಾರರಿಗೆ ಸುಳ್ಳುವದಂತಿ ಹಬ್ಬಿದ ಕಾರಣ, ಮಠಾಧೀಶರು ಸೇರಿದಂತೆ ಈ ಭಾಗದ ಕೆಲ ನಾಯಕರು,ಯೋಜನೆ ವಿರುದ್ದ ಹೋರಾಟನಡೆಸಿದರು,ನ್ಯಾಯಾಲಯದಲ್ಲಿ ಮೊಕದ್ದಮೆ ಕೂಡ ದಾಖಲು ಸಹ ಮಾಡಲಾಗಿತ್ತು.ಆದರೆ ಸುಪ್ರೀಂಕೋರ್ಟ್ ನಿರ್ದೇಶನದಂತೆ ಕುಡಿಯುವ ನೀರಿಗೆ ತೊಂದರೆ ಮಾಡುವಂತ್ತಿಲ್ಲ,ನೊಣವಿನಕೆರೆ ಅಚ್ಚುಕಟ್ಟುದಾರರಿಗೆ ತೊಂದರೆಯಾಗದಂತೆ ನೀರು ನಿಗದಿ ಮಾಡಲಾಗಿದೆ ಎಂದು ನ್ಯಾಯಾದೀಶರು ತಿಳಿಸಿದ ಪರಿಣಾಮ ನ್ಯಾಯಾಲಯದಲ್ಲಿ ಇದ್ದ ಪ್ರಕರಣ ವಾಪಾಸ್ ಪಡೆಯಲಾಗಿದ್ದು,ನ್ಯಾಯಾಲಯದ ಪ್ರಕರಣ ಸಹ ವಜಾವಾಗಿದೆ,ಆದರಿಂದ ಜಿಲ್ಲಾಡಳಿತ .ನೀರಾವರಿ ಇಲಾಖೆ ಮುಖ್ಯ ಇಂಜಿನಿಯರ್ ಜನವರಿ 15ರ ನಂತರ ಸೂಕ್ತ ಕ್ರಮವಹಿಸಲು ಚರ್ಚೆ ನಡೆಸಿದ್ದೇನೆ ನಗರದ ಜನರಿಗೆ ತೊಂದರೆಯಾಗದಂತೆ ಕ್ರಮವಹಿಸಲು ಸೂಚಿಸಿದ್ದೇನೆ ಎಂದರು

ವರದಿ: ಮಂಜುನಾಥ್ ಹಾಲ್ಕುರಿಕೆ

Exit mobile version