KALPATHARU KRANTHI

ಭೂ ಸುರಕ್ಷ ಯೋಜನೆಗೆ ತಿಪಟೂರು ಶಾಸಕ .ಕೆ ಷಡಕ್ಷರಿ ಚಾಲನೆ

Spread the love

ರಾಜ್ಯಸರ್ಕಾರದ ಜಾರಿಗೆ ತಂದಿರುವ ಮಹತ್ವಾಕಾಂಕ್ಷೆಯ ಭೂ ಸುರಕ್ಷ ಯೋಜನೆಗೆ ತಿಪಟೂರು ಶಾಸಕ ಕೆ.ಷಡಕ್ಷರಿ ಪೂಜೆಸಲ್ಲಿಸುವ ಮೂಲಕ ಚಾಲನೆ ನೀಡಿದರು.

ತಿಪಟೂರು ಆಡಳಿತ ಸೌಧದ ಅಭಿಲೇಖನಾಲಯದಲ್ಲಿ ಕಂದಾಯ ಇಲಾಖೆ ಹಾಗೂ ಸರ್ವೆ ಇಲಾಖೆ ಭೂ ದಾಖಲೆಗಳ ಡಿಜಿಟಲಿಕರಣ ಪ್ರಕ್ರಿಯೆಗೆ ಪೂಜೆಸಲ್ಲಿ ಚಾಲನೆ ನೀಡಿದರು.

ತಾಲ್ಲೋಕು ಆಡಳಿತ ಸೌಧದ ಆವರಣದಲ್ಲಿ ಆಯೋಜಿಸಿದ ಕಾರ್ಯಕ್ರಮವನ್ನ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದ ಶಾಸಕರು ಮಾತನಾಡಿ ರಾಜ್ಯಸರ್ಕಾರ ಕಂದಾಯ ಇಲಾಖೆಯ ಭೂ ದಾಖಲೆಗಳನ್ನ ಸ್ಕ್ಯಾನಿಂಗ್ ಮಾಡಿ ಡಿಜಿಟಲಿಕರಣಗೊಳಿಸುತ್ತಿರುವುದು,ಅತ್ಯತ್ತಮ ಕಾರ್ಯಕ್ರಮವಾಗಿದೆ.ನೂರಾರು ವರ್ಷಗಳ,ಭೂದಾಖಲೆಗಳು ಕಂದಾಯ ಇಲಾಖೆಯ ಅಭಿಲೇಖನಾಲಯದಲ್ಲಿ ಅಡಕವಾಗಿವೆ.ಕಾಲಾಂತರದಲ್ಲಿ ಶಿಥಿಲವಾಗುವ ಅಪಾಯವೇ ಹೆಚ್ಚು,ಇನ್ನೂ ಸರ್ಕಾರದ ಭೂ ದಾಖಲೆಗಳು ರೈತರಿಗೆ, ಸುಲಭವಾಗಿ ದೊರೆಯದ ಕಾರಣ,ಸಾವಿರಾರು ರೈತರು ಭೂ ಒಡೆತನ ಹೊಂದುವುದು ಕಷ್ಟವಾಗಿದ್ದು, ರೈತರ ಸಂಕಷ್ಟ ಅರಿತ ಸರ್ಕಾರ ಬಗರ್ ಹುಕ್ಕು ಸಾಗುವಳಿ ಚೀಟಿ ನೀಡಿ ತಾವು ಉಳಿಮೆ ಮಾಡುತ್ತಿರುವ ಭೂಮಿಗೆ ಮಾಲೀಕನನ್ನಾಗಿ ಮಾಡಿದೆ,ತಿಪಟೂರು ತಾಲ್ಲೋಕಿನಲ್ಲಿ ನಾನು ಮೊದಲ ಭಾರೀ ಶಾಸಕನಾಗಿದ್ದ ಅವಧಿಯಲ್ಲಿ ಸುಮಾರುಎಂಟುಸಾವಿರ ರೈತರಿಗೆ ಸಾಗುವಳಿ ಚೀಟಿ ನೀಡಿದ ಆತ್ಮತೃಪ್ತಿಇದೆ.ರೈತ ತಾನು ಸಾಗುವಳಿ ಮಾಡುವ ಜಮೀನಿಗೆ ಮಾಲಿಕತ್ವ ಹೊಂದುವುದು ಅತಿಮುಖ್ಯ ಆದರೆ ದಾಖಲೆಗಳು ಸುಲಭವಾಗಿ ಲಭ್ಯವಾಗದ ಕಾರಣ,ಎಷ್ಟೋ ರೈತರು ಮಾಲೀಕತ್ವವನ್ನೇ ಹೊಂದಲು ಸಾಧ್ಯವಾಗಿಲ್ಲ,ರಾಜ್ಯಸರ್ಕಾರ ನೂರಾರು ವರ್ಷಗಳ ರೈತರ ಸಮಸ್ಯೆಗಳಿಗೆ ಮುಕ್ತಿನೀಡಲು ಮುಂದಾಗಿದ್ದು,ತಾಲ್ಲೋಕು ಅಭಿಲೇಖನಾಲಯದಲ್ಲಿ ಇರುವ ಇರುವ ದಾಖಲೆಗಳನ್ನ ಸ್ಕ್ಯಾನಿಂಗ್ ಮಾಡಿ ಡಿಜಿಟಲೀಕರಣಗೊಳಿಸುತ್ತಿದ್ದು.ಡಿಜಿಟಲ್ ಪ್ರಕ್ರಿಯೆಯಿಂದ,ರೈತರಿಗೆ ಸುಲಭ ಹಾಗೂ ತ್ವರಿತವಾಗಿ ದಾಖಲೆಗಳು ದೊರೆಯುತ್ತವೆ,ಹಾಗೂ ದಾಖಲೆಗಳನ್ನ ಕಳ್ಳವು ಮಾಡಲು,ನಾಶಗೊಳಿಸಲು ಸಾಧ್ಯವಾಗುದಿಲ್ಲ.ಆದರಿಂದ ಉತ್ತಮ ಯೋಜನೆಗೆ ಜನರು ಸಹಕಾರ ನೀಡಬೇಕು ಎಂದು ತಿಳಿಸಿದರು

ಕಾರ್ಯಕ್ರಮದಲ್ಲಿ ಉಪಸ್ಥಿತರಿದ ತಿಪಟೂರು ಉಪವಿಭಾಗಾಧಿಕಾರಿ ಶ್ರೀಮತಿ ಸಪ್ತಶ್ರೀ ಮಾತನಾಡಿ ಭೂ ದಾಖಲೆಗಳ ಡಿಜಿಲಿಕರಣದಿಂದ ಸಾರ್ವಜನಿಕರಿಗೆ ಉತ್ತಮ ಹಾಗೂ ತ್ವರಿತಗತಿ ಸೇವೆ ನೀಡಲು ಸಾಧ್ಯವಾಗುತ್ತದೆ,ಸರ್ಕಾರದ ಆದೇಶದಂತೆ ತಾಲ್ಲೋಕು ಕಚೇರಿಯ ಭೂ ದಾಖಲೆಗಳನ್ನ ವರ್ಗೀಕರಿಸಿ,ಸ್ಕ್ಯಾನಿಂಗ್ ಪ್ರಕ್ರಿಯೆ ಮಾಡಲಾಗುತ್ತಿದೆ,ಹೋಬಳಿವಾರು ಸ್ಕ್ಯಾನಿಂಗ್ ಮಾಡುವಾಗ ಸಾರ್ವಜನಿಕರಿಗೆ ಸ್ಪಲ್ಪ ತೊಂದರೆಯಾಗಬಹುದು,ಸ್ಕ್ಯಾನಿಂಗ್ ನಡೆಯುವ ದಾಖಲೆಗಳನ್ನ, ಸಾರ್ವಜನಿಕರಿಗೆ ಕೊಡಲು ಸಾಧ್ಯವಾಗುವುದಿಲ್ಲ,ಅಂತಹ ಸಂದರ್ಭದಲ್ಲಿ ಸಾರ್ವಜನಿಕರು ಸಹಕರಿಸಬೇಕು,ಸರ್ಕಾರದ ನಿರ್ದೇಶನದಂತೆ ಶೀಘ್ರವಾಗಿ ಸ್ಕ್ಯಾನಿಂಗ್ ಪ್ರಕ್ರಿಯೆಗೆ ಪೂರ್ಣಗೊಂಡು ಸಾರ್ವಜನಿಕರಿಗೆ ಭೂ ದಾಖಲೆಗಳನ್ನ ಕೈಗೆಟ್ಟಕುತ್ತವೆ ಎಂದು ತಿಳಿಸಿದರು
ತಹಸೀಲ್ದಾರ್ ಪವನ್ ಕುಮಾರ್ ಮಾತನಾಡಿ ರಾಜ್ಯ ಸರ್ಕಾರದ ಭೂ ಸುರಕ್ಷ ಯೋಜನೆ ಉತ್ತಮ ಯೋಜನೆಯಾಗಿದ್ದು ಈ ಯೋಜನೆಯಿಂದ ಆಡಳಿತ ವರ್ಗದ ಮೇಲಿನ ಒತ್ತಡ ಕಡಿಮೆಯಾಗುವ ಜೊತೆಗೆ, ನಿಮ್ಮ ಜಮೀನುಗಳು ಸುರಕ್ಷ ಹಾಗೂ ಸುಭದ್ರವಾಗುತ್ತವೆ ಶಿಥಿಲವಾಗುವ ಹಾಗೂ ಕಳ್ಳತನವಾಗುವ ಅತಂಕವಿರುವುದಿಲ್ಲ, ತಮ್ಮ ತಾಲ್ಲೋಕು ಕಚೇರಿಯಲ್ಲಿ 1894 ರಿಂದಲ್ಲೂ ಭೂ ದಾಖಲೆಗಳು ಲಭ್ಯವಿದೆ. ಅವುಗಳನ್ನ ಎಬಿಸಿಡಿ ಎಂಬುದಾಗಿ ವರ್ಗೀಕರಿಸಿದ್ದು,ಸ್ಕ್ಯಾನಿಂಗ್ ಮಾಡಿ ಸುರಕ್ಷವಗಿಡಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಗ್ರೇಡ್ 2 ತಹಸೀಲ್ದಾರ್ ಜಗನ್ನಾಥ್,ಶೀರಸ್ತೆದಾರ್ ರವಿಕುಮಾರ್ ಅಶೋಕ್ , ಆಹಾರ ನಿರೀಕ್ಷಕ ರೇಣುಕಪ್ರಸಾದ್ ಮುಂತ್ತಾದವರು ಉಪಸ್ಥಿತರಿದರು.

ವರದಿ : ಮಂಜುನಾಥ್ ಹಾಲ್ಕುರಿಕೆ

Exit mobile version