ಗುಬ್ಬಿ: ರೈಲ್ವೆ ರಸ್ತೆ ಅಂಡರ್ ಪಾಸ್ ಕಾಮಗಾರಿಗಳಿಗೆ ಇತ್ತೀಚಿಗಷ್ಟೇ ಸಂಪಿಗೆ ರೋಡ್ ರೈಲ್ವೇ ಸ್ಟೇಷನ್ ಕಾರ್ಯಕ್ರಮಕ್ಕೆ ರೈಲ್ವೇ ಸಚಿವ ವಿ ಸೋಮಣ್ಣ ಭೇಟಿ ನೀಡಿ ವೇಗ ತುಂಬಿದ್ದರು ಇದರ ಬೆನ್ನಲ್ಲೇ ತಾಲ್ಲೂಕಿನ ಕಡಬಾ ಹೋಬಳಿಯ ಬಾಡೇನಹಳ್ಳಿ ರೈಲ್ವೆ ಗೇಟ್ 64 ನಲ್ಲಿ ರೈಲ್ವೇ ಅಂಡರ್ ಪಾಸ್ ಕಾಮಗಾರಿ ನಡೆಯುತ್ತಿದ್ದು ಬಾಡೇನಹಳ್ಳಿ ಗ್ರಾಮಸ್ಥರು ಅಂದಿನಿಂದ ಕೆರೆ, ಕಾವಲ್ ಮತ್ತು ಬೀದಿಗಳಿಗೆ ತೆರಳಲು ಬಳಸುತ್ತಿದ್ದ ರಸ್ತೆಗಳನ್ನು ತಡೆಯಲಾಗಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ, ಗ್ರಾಮಸ್ಥರಾದ ಮಂಜುನಾಥ್ ಬಿ.ಡಿ ಮಾತನಾಡಿ ಸದರಿ ಕಾಮಗಾರಿಯ ಎಸ್ಟಿಮೇಟ್ ನಲ್ಲಿ ನಮ್ಮ ಗ್ರಾಮದ ಕೆರೆ, ಕಾವಲ್ ಮತ್ತು ನಮ್ಮ ಛಲವಾದಿ ಕಾಲೋನಿಗಳಿಗೆ ತಿರುಗಾಡಲು ಅಂದಿನಿಂದ ಇದ್ದ ರಸ್ತೆಗಳನ್ನು ಕೈ ಬಿಡಲಾಗಿದೆ ಅಲ್ಲದೆ ಸದರಿ ಕಾಮಗಾರಿಯ ನಿರ್ಧಾರಗಳಿಂದ ನಮ್ಮ ಗ್ರಾಮಸ್ಥರು ರಸ್ತೆಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ ಸಂಬಂಧ ಪಟ್ಟ ರೈಲ್ವೇ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಂಡಿಲ್ಲ ನಮಗೆ ಸೂಕ್ತ ರಸ್ತೆ ಕಲ್ಪಿಸುವವರೆಗೂ ಹೋರಾಟ ಕೈ ಬಿಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು ಮತ್ತೂಬ್ಬ ಗ್ರಾಮಸ್ಥ ಶಶಿಕುಮಾರ್ ಮಾತನಾಡಿ ಅಂದಿನಿಂದ ರಸ್ತೆಗಳು ನಾವು ಬಳಸುತ್ತಿದ್ದೇವೆ ಇದೇ ರಸ್ತೆಗಳನ್ನು ಮುಂದುವರೆಸಬೇಕು ಇಲ್ಲ ಬದಲಿ ಸೂಕ್ತ ರಸ್ತೆ ವ್ಯವಸ್ಥೆ ಮಾಡಲಿ ಆದರೆ ಸಂಬಂಧ ಪಟ್ಟ ಈ ರೈಲ್ವೇ ಅಧಿಕಾರಿಗಳ ಗಮನ ಕಾಮಗಾರಿ ಪೂರ್ಣಗೊಳಿಸಲು ಒತ್ತು ನೀಡುತ್ತಾರೆ ನಮ್ಮ ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಎಂದು ಅಸಮಾದಾನ ವ್ಯಕ್ತಪಡಿಸಿದರು.
ವರದಿ: ಸಂತೋಷ್ ಓಬಳ. ಗುಬ್ಬಿ