
ಅಧ್ಯಕ್ಷರು ಎಂ.ಎಸ್ ಯೋಗೇಶ್.ಉಪಾಧ್ಯಕ್ಷರುಮೋಹನ್ ಕಲ್ಲೇಗೌಡನಪಾಳ್ಯ,ಪ್ರಧಾನ ಕಾರ್ಯದರ್ಶಿ ಎಂ.ಜಿಯೋಗಾನಂದಸ್ವಾಮಿ ಮೂಗ್ತಿಹಳ್ಳಿ,ಖಜಾಂಚಿ: ವಿಜಯ್ ಕುಮಾರ್ ಅನಗೊಂಡನಹಳ್ಳಿ ಜಿಲ್ಲಾ ಪ್ರತಿನಿಧಿ ಎಂ.ಸಿ ನಟರಾಜ್
ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಎಂಎಸ್ ಯೋಗೇಶ್ ಮಾತನಾಡಿ ತಾಲ್ಲೋಕಿನ ಕೃಷಿಕ ಸಮಾಜದ ಬಂಧುಗಳು ಹಾಗೂ ತಿಪಟೂರು ಕೃಷಿಕ ಸಮಾಜದ ಅಧ್ಯಕ್ಷನನ್ನಾಗಿ ಆಯ್ಕೆಮಾಡಿರುವುದಕ್ಕೆ ಅಭಿನಂದಿಸುತ್ತೇವೆ.ತಾಲ್ಲೋಕಿನ ಸಮಸ್ತ ಕೃಷಿಕ ಸಮಾಜ ಹಾಗೂ ಕೃಷಿಕ ಸಮಾಜ ಆಶೋತ್ತರಗಳಿಗೆ ತಕ್ಕಂತೆ ಕೆಲಸ ಮಾಡುತ್ತೇನೆ. ಸರ್ಕಾರ ಹಾಗೂ ಕೃಷಿ ಇಲಾಖೆಯಿಂದ ಕೃಷಿಕ ಸಮಾಜಕ್ಕೆ ದೊರೆಯುವ ಸವಲತ್ತುಗಳನ್ನ ಪ್ರಮಾಣಿಕವಾಗಿ ತಲುಪಿಸುವ ಕೆಲಸ ಮಾಡುತ್ತೇನೆ, ಎಂದು ತಿಳಿಸಿದರು
ಕೃಷಿಕ ಸಮಾಜದ ಜಿಲ್ಲಾಪ್ರತಿನಿಧಿಯಾಗಿ ಆಯ್ಕೆಯಾದ ಎಂ.ಸಿ ನಟರಾಜ್ ಮಾತನಾಡಿ ತಿಪಟೂರು ಶಾಸಕರಾದ ಕೆ.ಷಡಕ್ಷರಿಯವರ ಮಾರ್ಗದರ್ಶನ ಹಾಗೂ ಕೃಷಿಕ ಸಮಾಜದ ನೆರವಿನಿಂದ ನೂತನ ಕಮಿಟಿ ಆಯ್ಕೆಯಾಗಿದ್ದು ಜಿಲ್ಲಾ ಪ್ರತಿನಿಧಿಯಾಗಿ ಆಯ್ಕೆಗೆ ಸಹಕರಿಸಿದ ಎಲ್ಲರಿಗೂ ಅಭಾರಿಯಾಗಿರುತ್ತೇವೆ.ತಾಲ್ಲೋಕಿನ ರೈತರು ಹಾಗೂ ಕೃಷಿಕ ಸಮಾಜದ ಸದಸ್ಯರಿಗೆ ಸರ್ಕಾರದಿಂದ ದೊರೆಯುವ ಸಮಲತ್ತುಗಳನ್ನ ನೇರವಾಗಿ ದೊರೆಯುವಂತ್ತೇ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ.ನಮ್ಮ ಸಮಿತಿಯ ಎಲ್ಲರೂ ರೈತರ ಸೇವೆಮಾಡುತ್ತೇವೆ ಹಿರಿಯ ಸದಸ್ಯರ ಮಾರ್ಗದರ್ಶನದಂತೆ,ಕಿರಿಯರ ಸಲಹೆಯಂತೆ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು
ಉಪಾಧ್ಯಕ್ಷರಾದ ಮೋಹನ್ ಕಲ್ಲೇಗೌಡನಪಾಳ್ಯ ಮತನಾಡಿ ಕೃಷಿಕ ಸಮಾಜ ತಾಲ್ಲೋಕಿನ ರೈತರು ಹಾಗೂ ಕೃಷಿ ಇಲಾಖೆಯ ನಡುವೆ ಕೊಂಡಿಯಂತೆ ಕೆಲಸ ಮಾಡುತ್ತದೆ, ನಾವು ಕೃಷಿಕ ಸಮಾಜದಿಂದ ಸರ್ಕಾರದಿಂದ ದೊರೆಯುವ ಸಮಲತ್ತುಗಳನ್ನ ರೈತರಿಗೆ ಪ್ರಾಮಾಣಿಕವಾಗಿ ದೊರೆಯುವಂತ್ತೆ ಮಾಡುತ್ತೇವೆ ಎಂದು ತಿಳಿಸಿದರು
ಕಾರ್ಯಕ್ರಮದಲ್ಲಿ ಸದಸ್ಯರಾದ ಮತ್ತಿಹಳ್ಳಿ ಗಂಗಾಧರ್ .ವಗನಘಟ್ಟ ಯೋಗಾನಂದ್ ಮಾಜಿ ತಾಲ್ಲೋಕು ಪಂಚಾಯ್ತಿ ಅಧ್ಯಕ್ಷ ನ್ಯಾಕೇನಹಳ್ಳಿ ಸುರೇಶ್. ಎಂಬಿ ಪರಮಶಿವಯ್ಯ, ಕೃಷಿಕ ಸಮಾಜದ ಮಾಜಿ ಅಧ್ಯಕ್ಷ ಕೆರಗೋಡಿ ದೇವರಾಜು,ಮಾಜಿ ಜಿಲ್ಲಾಪ್ರತಿನಿಧಿ ಸದಾಶಿವಯ್ಯ,ಕಾಂಗ್ರೇಸ್ ನಗರಾಧ್ಯಕ್ಷ ತರಕಾರಿ ಪ್ರಕಾಶ್.ವಿನಾಯಕ್.ಶಿವರನಾಗರಾಜು.ಮುಂತ್ತಾದವರು ಉಪಸ್ಥಿತರಿದರು
ವರದಿ:ಮಂಜುನಾಥ್ ಹಾಲ್ಕುರಿಕೆ