KALPATHARU KRANTHI

ಅಂಬೇಡ್ಕರ್ ಭವನದ ಜಾಗ ಒತ್ತುವರಿ ತೆರವಿಗೆ ಆಗ್ರಹ, ಪಟ್ಟಣಪಂಚಾಯ್ತಿಗೆ ದೂರು ನೀಡಿದ ದಲಿತ ಮುಖಂಡರು

Spread the love

ತುರುವೇಕೆರೆ:ಪಟ್ಟಣದ ಮಾಯಸಂದ್ರ ರಸ್ತೆ ಮತ್ತು ತುರುವೇಕೆರೆ ಪೊಲೀಸ್ ಠಾಣೆ ಎದುರು ಇರುವ ಅಂಬೇಡ್ಕರ್ ಭವನದ ಜಾಗವನ್ನ ಪ್ರಭಾವಿ ವ್ಯಕ್ತಿಯೊಬ್ಬರು ಅತಿಕ್ರಮಿಸಿದ್ದು,ಅಂಬೇಡ್ಕರ್ ಭವನದ ಜಾಗವನ್ನ ಅಳತೆಮಾಡಿ ತೆರವುಗೊಳಿಸಬೇಕು ಎಂದು ಎಂದು ತುರುವೇಕೆರೆ ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿಗಳಿಗೆ ಕರ್ನಾಟಕ ದಲಿತ ಸಂಘರ್ಷ, ಸಮಿತಿ ಹಾಗೂ ಚಲವಾದಿ ಮಹಾಸಭಾ ಸೇರಿದಂತೆ ದಲಿತಪರಸಂಘಟನೆಗಳ ಮುಖಂಡರು ಮನವಿ ಪತ್ರಸಲ್ಲಿಸಿದರು.

ಚಲವಾದಿ ಮಹಾಸಭಾ ಕುಣಿಕೇನಹಳ್ಳಿ ಜಗದೀಶ್ ಮಾತನಾಡಿ, ಅಂಬೇಡ್ಕರ್ ಭವನದ ಜಾಗವನ್ನ ಒತ್ತುವರಿ ಮಾಡಿರುವ ಬಗ್ಗೆ ಪಟ್ಟಣ ಪಂಚಾಯಿತಿಗೆ ಹಲವರು ದೂರು ಕೊಟ್ಟರು ಏನು ಪ್ರಯೋಜವಾಗಿಲ್ಲ, ಪಟ್ಟಣಪಂಚಾಯ್ತಿಗೆ ಸೇರಿದ ಸ್ವತ್ತನ್ನ ರಕ್ಷಣೆ ಮಾಡಲು ಪಟ್ಟಣ ಪಂಚಾಯ್ತಿ ವಿಫಲವಾಗಿದೆ.ಸಾರ್ವಜನಿಕರಿಗೆ ಸೇರಿದ ಸ್ಥಳವನ್ನ ಅತಿಕ್ರಮಿಸಿದ್ದರೂ,ಪಟ್ಟಣಪಂಚಾಯ್ತಿ ಅಧಿಕಾರಿಗಳು ಪ್ರಬಾವಿಗಳ ಒತ್ತಡಕ್ಕೆ ಮಣಿದು ಕೈಕಟ್ಟಿಕುಳಿತ್ತಿದ್ದಾರೆ.ದಲಿತಪರ ಸಂಘಟನೆಗಳ ಮುಖಂಡರು ಅನೇಕಬಾರಿ ಅಧಿಕಾರಿಗಳ ಗಮನಕ್ಕೆ ತಂದರು ಯಾವುದೇ ಪ್ರಯೋಜನವಾಗಿಲ್ಲ, ಅಂಬೇಡ್ಕರ್ ಭವನದ ಜಾಗ ಅತಿಕ್ರಮಿಸಿ ಅನಾಧೀಕೃತ ಕಟ್ಟಡ ನಿರ್ಮಿಸಲಾಗಿದೆ‌. ನಿರ್ಮಾಣವಾಗಿದೆ.ಅಂಬೇಡ್ಕರ್ ಭವನಕ್ಕೆ ಸಂಬಂದಿಸಿದ ಎಲ್ಲಾ ದಾಖಲೆಗಳೊಂದಿಗೆ ಮೇಲಧಿಕಾರಿಗಳಿಗೂ ದೂರು ನೀಡಲಾಗಿದೆ. ಅಂಬೇಡ್ಕರ್ ಭವನದ ಜಾಗ ಒತ್ತುವರಿಯಾಗಿದ್ದು ತೆರವು ಮಾಡುವಂತೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ, ಪಟ್ಟಣ ಪಂಚಾಯ್ತಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದರೆ ಪಟ್ಟಣಪಂಚಾಯ್ತಿ ಮುಂದೆ ಉಗ್ರಹೋರಾಟ ಮಾಡಲಾಗುವುದು ಎಂದು ತಿಳಿಸಿದರು.

ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ತಾಲೂಕು ಸಂಚಾಲಕರಾದ ಕೃಷ್ಣ ಮಾದರ್ ಮಾತನಾಡಿ ಸುಮಾರು ನಾಲ್ಕೈದು ವರ್ಷಗಳಿಂದಲೂ ಇದರ ಬಗ್ಗೆ ಹಲವು ಬಾರಿ ಪಟ್ಟಣ ಪಂಚಾಯಿತಿಗೆ ದೂರು ಕೊಟ್ಟರು ಏನು ಪ್ರಯೋಜನವಾಗಿಲ್ಲ ಜೊತೆಗೆ ಉಪ ವಿಭಾಗಾಧಿಕಾರಿ(a c) , ಸಿಇಓ, ತಾಲೂಕಿನ ತಹಶೀಲ್ದಾರ್ ಜಿಲ್ಲಾಧಿಕಾರಿಗಳ ಜನಸ್ಪಂದನ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳು ಸಹ ಜಾಗ ಒತ್ತೂವರಿಯಾಗಿರುವ ಬಗ್ಗೆ ಮಾಹಿತಿ ಪಡೆದುಕೊಂಡು ಅಧಿಕಾರಿಗಳಿಗೆ ಕೂಡಲೇ ಈ ಜಾಗವನ್ನು ತೆರೆವು ಗೊಳಿಸಬೇಕೆಂದು ಸೂಚನೆ ಸಹ ನೀಡಿದ್ದಾರೆ, ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿ ನಿರ್ಲಕ್ಷ್ಯ ಹೊಂದಿದ್ದಾರೆ.ಮೇಲಾಧಿಕಾರಿಗಳ, ಆದೇಶಕ್ಕೂ ತಲೆಕೆಡಿಸಿಕೊಳ್ಳದೆ.ಕೈಕಟ್ಟಿಕುಳಿತ್ತಿದ್ದಾರೆ, ಸರ್ಕಾರ ಕೂಡಲೆ ಒತ್ತುವರಿ ತೆರವು ಮಾಡದೆ, ನಿರ್ಲಕ್ಷ್ಯ ಮಾಡಿರುವ ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿಯನ್ನ ಅಮಾನತ್ತುಗೊಳಿಸಬೇಕು ಹಾಗೂಅಂಬೇಡ್ಕರ್ ಭವನದ ಜಾಗದ ಒತ್ತುವರಿ ತೆರವುಮಾಡಬೇಕು ಎಂದು ಒತ್ತಾಯಿಸಿದರು.
ಟೌನ್ ಬ್ಯಾಂಕ್ ನಿರ್ದೇಶಕ ಬಡಾವಣೆ ಶಿವರಾಜ್, ಸುನಿಲ್, ಪ್ರಸಾದ್, ಇನ್ನೂ ಮುಂತ್ತಾದವರು ಉಪಸ್ಥಿತರಿದ್ದರು.

ವರದಿ:ಮಂಜುನಾಥ್ ಕೆ.ಎ ತುರುವೇಕೆರೆ

Exit mobile version