KALPATHARU KRANTHI

ಕೇಂದ್ರ ರೈಲ್ವೆ ಸಚಿವ ವಿ.ಸೋಮಣ್ಣ ನವರಿಂದ ಜನಸಂಪರ್ಕಸಭೆ,ಸಾರ್ವಜನಿಕರ ಅಹವಾಲು ಸ್ವೀಕಾರ

Spread the love

ತುಮಕೂರು ಜಿಲ್ಲೆ ತಿಪಟೂರು ತಾಲ್ಲೋಕಿನ ನೊಣವಿನಕೆರೆ ಹಾಗೂ ಬಿಳಿಗೆರೆ ಗ್ರಾಮಪಂಚಾಯ್ತಿ ವ್ಯಕ್ತಿಯ ಕಿಬ್ಬನಹಳ್ಳಿ ಗ್ರಾಮದಲ್ಲಿ ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ಸಚಿವ ವಿ.ಸೋಮಣ್ಣ ಜನ ಸಂಪರ್ಕ ಸಭೆ ನಡೆಸಿದರು.

ನೊಣವಿನಕೆರೆ ಗ್ರಾಮದ ಗ್ರಾಮಪಂಚಾಯ್ತಿ ಬಯಲು ರಂಗಮಂದಿರದ ಆವರಣದಲ್ಲಿ ನಡೆದ ಕಾರ್ಯಕ್ರಮವನ್ನು,ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ರಾಜ್ಯ ಸಚಿವ ವಿ.ಸೋಮಣ್ಣ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ವಿ.ಸೋಮಣ್ಣ ನಾನು ಸಾಮಾನ್ಯ ಹಳ್ಳಿಯಲ್ಲಿ ಹುಟ್ಟಿದ ರೈತರ ಮಗ, ಗ್ರಾಮೀಣ ಜನರ ಕಷ್ಟ ಸುಖಗಳ ಅರಿವು, ನನಗೆ ಇದೆ, ಜನರ ಕಷ್ಟಗಳನ್ನ ಹತ್ತಿರದಿಂದ ಅರಿತ್ತಿದ್ದೇನೆ,ಪಕ್ಷದ ವರಿಷ್ಠರು ನೀಡಿದ ಜವಾಬ್ದಾರಿಯಂತೆ ಕಡಿಮೆ ಅವಧಿಯಲ್ಲಿ ತುಮಕೂರು ಲೋಕಸಭಾ ಅಭ್ಯಾರ್ಥಿಯಾಗಿ ಸ್ವರ್ಥಿಸಿದೆ,.ನನ್ನ ಮೇಲೆ ಹಾಗೂ ನಮ್ಮ ಪಕ್ಷ ಹಾಗೂ ದೇಶಕಂಡ ಪ್ರಾಮಾಣಿಕ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ. ಮೇಲೆ ಬರವಸೆ ಇಟ್ಟು ತುಮಕೂರು ಕ್ಷೇತ್ರದ ಜನ ಚುನಾಯಿಸಿ ಕಳಿಸಿದ್ದೀರಿ. ನಿಮ್ಮ ಋಣ ನನ್ನ ಮೇಲೆದೆ,ನನ್ನ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಪ್ರತಿಯೊಬ್ಬಂದು, ಕೆಲಸಕ್ಕು ಗಮನಹರಿಸುತ್ತೇನೆ, ನೀವು ನೀಡಿರುವ ಜವಾಬ್ದಾರಿಯನ್ನ ಪ್ರಾಮಾಣಿಕವಾಗಿ ನಿಬಾಯಿಸಿ, ನಿಮ್ಮ ಋಣ ತೀರಿಸುತ್ತೇನೆ.ನೀವು ಕೊಟ್ಟ ಜವಾಬ್ದಾರಿಯಿಂದ ತಿಪಟೂರು ಜನರ ಬಹುದಿನಗಳ ಬೇಡಿಕೆಯಾದ ಜನಶತಾಬ್ದಿ ಎಕ್ಸ್ ಪ್ರೆಸ್ ನಿಲುಗಡೆಮಾಡಲಾಗಿದೆ.ಅರಳಗುಪ್ಪೆಯಲ್ಲಿ ಚಿಕ್ಕಮಂಗಳೂರು ಎಕ್ಸ್‌ಪ್ರೆಸ್‌ ನಿಲುಗಡೆ ಮಾಡಲಾಗುತ್ತಿದೆ, ನಿಧಾನಗತಿಯಲ್ಲಿ ಸಾಗುತ್ತಿದ್ದ,ರಾಷ್ಟ್ರೀಯ ಹೆದ್ದಾರಿ 206 ಕಾಮಗಾರಿ ವೇಗದಲ್ಲಿ ನಡೆಯುತ್ತಿದ್ದು,ಶೀಘ್ರವಾಗಿ ಲೋಕಾರ್ಪಣೆಗೊಳ್ಳಲಿದೆ ಎಂದ ಅವರು ಸಾರ್ವಜನಿಕರ ಸಮಸ್ಯೆಗಳಿಗೆ ಅಧಿಕಾರಿಗಳು ಸೂಕ್ತವಾಗಿ ಸ್ಪಂದಿಸಬೇಕು,ನೀವು ಜನರ ಸೇವಕರು ಎನ್ನುವುದನ್ನ ಮರೆಯಬಾರದು,ಗ್ರಾಮಪಂಚಾಯ್ತಿ ಅಧಿಕಾರಿಗಳು ಜನರಿಗೆ ಸೂಕ್ತವಾಗಿ ಸ್ಪಂದಿಸಿ, ಕಾನೂನು ವ್ಯಾಪ್ತಿಯಲ್ಲಿರುವ ಸಮಸ್ಯೆಗಳನ್ನ ಪರಿಹಾರಮಾಡಿದರೆ ಎಷ್ಟೋ ಜನ ಬಡವರಿಗೆ ಸಹಾಯ ಮಾಡಿದಂತ್ತಾಗುತ್ತದೆ,ನಮ್ಮ ಬಳಿಗೆ ದೂರುಬರದಂತೆ ಕೆಲಸ ಮಾಡಿ.ಜನರ ಕಷ್ಟಗಳಿಗೆ ಸ್ಪಂದಿಸದೆ ನಿರ್ಲಕ್ಷ್ಯವಹಿಸಿದ ದೂರುಗಳುಬಂದರೆ ಯಾವುದೇ ಕಾರಣಕ್ಕೂ ಸುಮ್ಮನಿರುವುದಿಲ್ಲ ಎಂದು ತಿಳಿಸಿದರು


ಸಭೆಯಲ್ಲಿ ತಿಪಟೂರು ತಹಸೀಲ್ದಾರ್ ಪವನ್ ಕುಮಾರ್.ಇಒ ಸುದರ್ಶನ್.ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದರು
ನೊಣವಿನಕೆರೆ ಹೋಬಳಿ ವ್ಯಾಪ್ತಿಯ ನೊಣವಿನಕೆರೆ, ಗುಂಗರಮಳೆ,ಬಜಗೂರು,ಮಸಣಘಟ್ಟ,ಹುಣಸೇಘಟ್ಟ,ನಾಗರಘಟ್ಟ,ನೆಲ್ಲೀಕೆರೆ ಗ್ರಾಮಪಂಚಾಯ್ತಿಗಳಿಂದ ಸುಮಾರು 67 ಅರ್ಜಿಗಳನ್ನ ಸಾರ್ವಜನಿಕರು ಸಚಿವರಿಗೆ ಸಲ್ಲಿಸಿದರು. ಕಿಬ್ಬನಹಳ್ಳಿ ಹೋಬಳಿ ವ್ಯಾಪ್ತಿಯಬಿಳಿಗೆರೆ,ಹಿಂಡಿಸ್ಕೆರೆ,ಕರಡಿ,ಕುಪ್ಪಾಳು, ಅರಳಗುಪ್ಪೆ ಗ್ರಾಮಪಂಚಾಯ್ತಿಗಳಿಂದ ಸುಮಾರು 40ಕ್ಕೂ ಹೆಚ್ಚು ಅರ್ಜಿಗಳನ್ನ ಸಚಿವರಿಗೆ ಸಲ್ಲಿಸಿದರು

ವರದಿ:ಮಂಜುನಾಥ್ ಹಾಲ್ಕುರಿಕೆ

Exit mobile version