
ತಿಪಟೂರಿನಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ ) ಮಹಿಳಾ ಘಟಕ ಹಾಗೂ ದಲಿತಪರ ಸಂಘಟನೆಗಳಿಂದ ಅಕ್ಷರ ಮಾತೆ ಸಾವಿತ್ರಿ ಬಾ ಪುಲೆಯವರ ಜನ್ಮಜಯಂತಿ ಆಚರಿಸಲಾಯಿತು, ಸಾವಿತ್ರಿ ಬಾ ಪುಲೆ ಜನ್ಮ ಜಯಂತಿ ಅಂಗವಾಗಿ ತಿಪಟೂರು ನಗರ ಠಾಣೆಗೆ ತೆರಳಿದ ದಲಿತಪರ ಸಂಘಟನೆಗಳ ಮುಖಂಡರು ನಗರಠಾಣೆ ವೃತ್ತ ನಿರೀಕ್ಷಕರಾದ ವೆಂಕಟೇಶ್ ಹಾಗೂ ಸಬ್ ಇನ್ಪೆಕ್ಟರ್ ಕೃಷ್ಣಪ್ಪ ಹಾಗೂ ಮಹಿಳಾ ಪೊಲೀಸ್ ಸಿಬ್ಬಂದಿಯನ್ನ ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ನಗರಠಾಣೆ ವೃತ್ತನಿರೀಕ್ಷಕ ವೆಂಕಟೇಶ್, ಭಾರತದ ಮೊದಲ ಶಿಕ್ಷಕಿ ಸಾವಿತ್ರಿ ಬಾ ಪುಲೆಯವರು ಮಹಿಳೆಯರು ಶಿಕ್ಷಣಪಡೆಯಲು ಅರ್ಹರಲ್ಲ ಎನ್ನುವ ಕಾಲಘಟ್ಟದಲ್ಲಿ ದಿಟ್ಟತನದಿಂದ ಶಿಕ್ಷಣ ಕಲಿತ ಪುಲೆ ಯವರು, ಹೆಣ್ಣು ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸುವ ಮೂಲಕ ದೇಶದಲ್ಲಿ ಅಕ್ಷರ ಜ್ಯೋತಿಯನ್ನ ಹಂಚಿದರು,ಅವರ ನಿರಂತರ ಹೋರಾಟದ ಪರಿಣಾಮ ಇಂದು ಮಹಿಳೆಯರು ಶಿಕ್ಷಣ ಪಡೆಯುವಂತ್ತಾಗಿದೆ ಎಂದು ತಿಳಿಸಿದರು
ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕ ಹರೀಶ್ ಗೌಡ ಮಾತನಾಡಿ ಮಾತೆ ಸಾವಿತ್ರಿ ಬಾ ಪುಲೆ ಭಾರತ ಅಕ್ಷರ ಮಾತೆ ಮನುವಾದದ ಕಟ್ಟುಪಾಡುಗಳನ್ನ ಮೆಟ್ಟಿನಿಂತು ಶಿಕ್ಷಣ ಪಡೆದರು, ಮಹಿಳೆಯರಿಗೂ ಶಿಕ್ಷಣ ಪಡೆಯುವ ಶಕ್ತಿಯಿದೆ ಎಂದು ಶಾಲೆಯಲ್ಲಿ ಮಕ್ಕಳಿಗೆ ಶಿಕ್ಷಣ ಬೋದಿಸಿದರು, ಜಾತಿವಾದಿಗಳು,ಎಷ್ಟೆ ಕಿರುಕುಳ ನೀಡಿದರು ಮೆಟ್ಟಿನಿಂತರು, ಶಾಲೆಗೆ ತೆರಳುವಾಗ, ಸಗಣಿ ನೀರು ಹಾಕಿದರು ಎದೆಗುಂದದೆ, ಶಿಕ್ಷಣ ನೀಡಿದ ಮಹಾಮತೆ ಸಾವಿತ್ರಿ ಬಾ ಪುಲೆ ರವರು ಎಂದು ತಿಳಿಸಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿ ಮಹಿಳಾ ಘಟಕದ ಜಿಲ್ಲಾ ಸಂಘಟನಾ ಸಂಚಾಲಕಿ ನಂದಿನಿ ಮಾತನಾಡಿ ಸಾವಿತ್ರ ಬಾ ಪುಲೆ ರವರು ಭಾರತದ ಮೊದಲ ಶಿಕ್ಷಕಿ,ಒಬ್ಬಗಂಡಿನ ಸಾಧನೆಗೆ ಹೆಣ್ಣಿನ ಬೆಂಬಲ ಎಷ್ಟು ಮುಖ್ಯವೂ ಹೆಣ್ಣಿನ ಸಾಧನೆಗೆ ಗಂಡನ ಪ್ರೋತ್ಸಹವೂ ಅಷ್ಟೆ ಮುಖ್ಯ ಎಂಬುದಕ್ಕೆ ಪುಲೆ ದಂಪತಿಗಳೆ ಸಾಕ್ಷಿ,ಮನುವಾದದ ಕಂದಾಚಾರಗಳೆ ತುಂಬಿದ ಸಮಾಜದಲ್ಲಿ ,ದಿಟ್ಟತನದಿಂದ ಶಿಕ್ಷಣಪಡೆದು ಶಾಲೆಗಳನ್ನ ಆರಂಭಿಸಿ ದೇಶದಲ್ಲಿ ಅಕ್ಷರಜ್ಯೋತಿ ಹಚ್ಚಿದ ದಂಪತಿಗಳು, ಸರ್ವಕಾಲಕ್ಕೂ ಅವಿಸ್ಮರಣೀಯರು,ದೇಶದ ಪ್ರತಿಯೊಬ್ಬರು ಸಾವಿತ್ರಿ ಬಾ ಪುಲೆ ಹಾಗೂ ಜ್ಯೋತಿ ಬಾ ಪುಲೆ ರವರ ಆದರ್ಶಗಳನ್ನ ಮೈಗೂಡಿಸಿಕೊಳ್ಳ ಬೇಕು ಎಂದು ತಿಳಿಸಿದರು
ಸಾವಿತ್ರಿ ಬಾ ಪುಲೆ ಜಯಂತಿ ಅಂಗವಾಗಿ ದಲಿತಪರ ಸಂಘಟನೆಗಳ ಮುಖಂಡರು ತಿಪಟೂರು ಉಪವಿಭಾಗಾಧಿಕಾರಿ ಶ್ರೀಮತಿ ಸಪ್ತಶ್ರೀ ಯವರನ್ನ ಸನ್ಮಾನಿಸಿದರು
ಕಾರ್ಯಕ್ತಮದಲ್ಲಿ ಡಾ//ಬಿ.ಆರ್ ಅಂಬೇಡ್ಕರ್ ಸ್ವಾಭಿಮಾನಿ ಸಮಿತಿ ಅಧ್ಯಕ್ಷ ಮತ್ತಿಘಟ್ಟ ಶಿವಕುಮಾರ್. ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ತಿಪಟೂರು ಸಂಚಾಲಕ ಮೋಹನ್ ಜಕ್ಕನಹಳ್ಳಿ, ಕೊರಚ ಮಹಾಸಭಾ ಅಧ್ಯಕ್ಷ ಸತೀಶ್, ತಿಪಟೂರು ಡಿಎಸ್ಎಸ್ ಮಹಿಳಾ ಘಟಕದ ಮುಖಂಡರಾದ ಕವಿತಾ . ಭಾಗ್ಯ, ಮುಂತ್ತಾದವರು ಉಪಸ್ಥಿತರಿದರು
ವರದಿ:ಮಂಜುನಾಥ್ ಹಾಲ್ಕುರಿಕೆ.