KALPATHARU KRANTHI

ತುರುವೇಕೆರೆಯಲ್ಲಿ ದಲಿತಪರ ಸಂಘಟನೆಗಳಿಂದ ಭೀಮಾಕೋರೆಗಾವ್ ವಿಜಯೋತ್ಸವದ ಸಂಭ್ರಮಾಚರಣೆ

Spread the love

ತುಮಕೂರು ಜಿಲ್ಲೆ ತುರುವೇಕೆರೆ ನಗರದ ಡಾ//ಬಿ.ಆರ್ ಅಂಬೇಡ್ಕರ್ ಭವನದ ಮುಂಭಾಗ ಭೀಮಾಕೋರೆಗಾವ್ ವಿಜಯ ಸ್ಮಾರಕದ ಪ್ರತಿಕೃತಿ ರಚಿಸಿದ ದಲಿತ ಸಂಘಟನೆಗಳ ಮುಖಂಡರು ಸಂವಿಧಾನ ಶಿಲ್ಪಿ ಡಾ//ಬಿ.ಆರ್ ಅಂಬೇಡ್ಕರ್ ಹಾಗೂ ಭೀಮಾಕೋರೆಗಾವ್ ವಿಜಯಸ್ಮಾರಕಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಮೊಹರ್ ಸೈನಿಕರಿಗೆ ನಮನ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ ಕರ್ನಾಟಕ ದಲಿತ ಸಂಘರ್ಷ ಸಮಿತಿ, ಅಂಬೇಡ್ಕರ್ ವಾದ ತಾಲೂಕು ಸಂಚಾಲಕ ಕೃಷ್ಣ ಮಾದರ್, ಮಾತನಾಡಿ ಭೀಮಾಕೋರೆಗಾವ್ ಭಾರತದಲ್ಲಿ ದಲಿತರು ಶೋಷಿತರು ಆತ್ಮಾಭಿಮಾನದ ಯುದ್ದ, ಸಾವಿರಾರು ವರ್ಷಗಳ ಅಸ್ಪೃಷ್ಯತೆಯ ಜ್ವಾಲೆಯ ಪ್ರತಿಕಾರವಾಗಿ ಹೊರಹೊಮ್ಮಿದ ಮಹರ್ ಸೈನಿಕರು, ತಮಗೆ ಆಗುತ್ತಿರುವ ಅನ್ಯಾಯದ ವಿರುದ್ದಿ ಹೋರಾಡಿ ಮನುವಾದಿಗಳಿಗೆ ದಿಟ್ಟ ಉತ್ತರ ನೀಡಿದ್ದಾರೆ, ಅವರ ಜೀವದಾನದ ಫಲ ಇಂದು ಕೋಟ್ಯಾನು ಕೋಟಿ ದಲಿತ ಬಂಧುಗಳಿಗೆ ಸಾಮಾಜಿಕ ನ್ಯಾಯಕ್ಕೆ ಮುನ್ನಡಿ ನೀಡಿದೆ ಎಂದು ತಿಳಿಸಿದರು.
ಚಲವಾದಿ ಮಹಾಸಭಾ ಅಧ್ಯಕ್ಷ ಕುಣಿಕೇನಹಳ್ಳಿ ಜಗದೀಶ್ ಮಾತನಾಡಿ ಭೀಮಾಕೋರೆಗಾವ್ ಯುದ್ದ ಸ್ಮಾರಕ ದಲಿತರ ಸ್ವಾಭಿಮಾನದ ಸಂಕೇತ ಸಾವಿರಾರು ವರ್ಷಗಳಿಂದ ಅಟ್ಟಹಾಸ ಮೆರಯುತ್ತಿದ ಮನುವಾದಿ ಪೇಶ್ವೆಗಳ ದುಷ್ಟತನದ ವಿರುದ್ದ ಮಹರ್ ಸೈನಿಕರು ಆತ್ಮಾಭಿಮಾನದಿಂದ ಹೋರಾಟ ಮಾಡಿ ಜಯಗಳಿಸಿದ ವಿಜಯದಿನ ಡಾ//ಬಿ.ಆರ್ ಅಂಬೇಡ್ಕರ್ ರವರಿಗೆ ಸ್ಪುರ್ತಿಯ ಸ್ಥಳವಾಗಿತ್ತು, ಪ್ರತಿವರ್ಷ ಜನವರಿ ಒಂದನೇ ತಾರೀಕು ,ಬಾಬಾ ಸಾಹೇಬರ್ ಭೀಮಾಕೋರೆಗಾವ್ ಗೆ ಭೇಟಿನೀಡಿ ನಮನ ಸಲ್ಲಿಸುತ್ತಿದರು. ಸರ್ಕಾರ ಪ್ರತಿ ವರ್ಷ ವಿಜಯೋತ್ಸವ ಆಚರಿಸಬೇಕು, ಹಾಗೂ ಪಠ್ಯಪುಸ್ತಕಗಳಲ್ಲಿ ಭೀಮಾಕೋರೆಗಾವ್ ಇತಿಹಾಸ ಅಳವಡಿಸಬೇಕು ಎಂದು ತಿಳಿಸಿದರು

ಸಮಾಜ ಸೇವಕ ರಾಘು ಮಾತನಾಡಿ , ಭೀಮಾ ಕೋರೇಗಾoವ್ ಒಂದು ನೆನಪು ಬಾಬಾ ಸಾಹೇಬರು ಪ್ರತಿಬಾರಿ ಭೇಟಿ ನೀಡುತ್ತಿದ್ದ ಸ್ಥಳಗಳ ಪೈಕಿ ಕೋರೇಗಾoವ್ ಕೂಡಾ ಒಂದು.ದಾಸ್ಯದ ವಿರುದ್ಧ ಹಾಗೂ ಮನುವಾದಿಗಳ ಅಮಾನವೀಯ ಶೋಷಣೆಯ ವಿರುದ್ಧ ಮೊಟ್ಟ ಮೊದಲ ಬಾರಿಗೆ ಸ್ಪೋಟಗೊಂಡ ಈ ಹೋರಾಟವು ಭಾರತದ ಪಾಲಿಗೆ ಮೊದಲನೇ ಸಾಮಾಜಿಕ ಸ್ವಾತಂತ್ರ್ಯ ಸಂಗ್ರಾಮವೆಂದೇ ಹೆಸರಾಗಿದೆ ಎಂದರು,

ನಿವೃತ್ತ ಶಿಕ್ಷಕ ನೀರಗುಂದ ಮಹೇಶ್ ಮಾತನಾಡಿ ಇತಿಹಾಸದಲ್ಲಿ ಮುಚ್ಚಿಹೋದ ಸಾಹಸದ ಘಟನೆ 28,000 ಸೈನಿಕರನ್ನು ಕೇವಲ ಐದುನೂರು ಜನ ಸೈನಿಕರು ಸೋಲಿಸಿದ ಕದನ .ಪೇಶ್ವೆಗಳ ಆಡಳಿತದಲ್ಲಿದ್ದ ಜಾತಿ ಅಸ್ಪೃಶ್ಯತೆ ಮೇಲು ಕೀಳುಗಳ ವಿರುದ್ಧ ಸೆಟೆದು ನಿಂತು ಮಾನವೀಯ ಮೌಲ್ಯಗಳನ್ನು ಪಡೆದುಕೊಳ್ಳಲು ಹಂಬಲಿಸಿದ,ಮಹರ್ ಸೈನಿಕರ ಧೈರ್ಯ, ಸಾಹಸ, ಕೆಚ್ಚೆದೆಯ ಹೋರಾಟದಿಂದ ಗೆಲುವನ್ನು ಸಾಧಿಸಲಾಯಿತು ಈ ಯುದ್ಧ ಭೀಮಾತೀರದಲ್ಲಿ ನಡೆದಿದ್ದರಿಂದ ಇತಿಹಾಸದಲ್ಲಿ ಭೀಮ ಕೋರೆಗಾoವ್ ಯುದ್ಧವೆಂದೆ ಪ್ರಸಿದ್ಧವಾಗಿತ್ತು ಎಂದು ವಿವರಿಸಿದರು.
ಈ ಕಾರ್ಯಕ್ರಮದಲ್ಲಿ ಸೋಮೇನಹಳ್ಳಿ ಜಗದೀಶ್, ಸೋಮಣ್ಣ ಮಾರಪ್ಪನಹಳ್ಳಿ , ಅನ್ನಪೂರ್ಣಮ್ಮ ಜಗದೀಶ್ ಡಿಎಸ್ಎಸ್ ಮಹಿಳಾ ಸಂಘಟನೆಯ ಸಂಚಾಲಕರು, ಸಮಾಜ ಸೇವಕರು ಜಗದೀಶ್ ಸೋಮನಹಳ್ಳಿ, ಮಹಾದೇವಯ್ಯ ಬೀಚನಹಳ್ಳಿ ಶಿವಣ್ಣ, ಟೌನ್ ಬ್ಯಾಂಕ್ ನಿರ್ದೇಶಕರು ,
ಸೋಮಶೇಖರಯ್ಯ ಬಾಳೆಕಾಯಿ ಪುಟ್ಟರಾಜು ಬಿಗ್ಗೆನಹಳ್ಳಿ,
ಕುಮಾರ್ ಕಡಬ, ರಾಮಚಂದ್ರಯ್ಯ, ವಿಜಯ್ ಕುಮಾರ್ ರೈತ ಸಂಘಟನೆ,
ಶೇಖರ್ ಅರಳಿಕೆರೆ,ರಾಯಣ್ಣತುರುವೇಕೆರೆ, ನರಸಿಂಹಯ್ಯ,ತಿಮ್ಮಯ್ಯ,
ಶಿವಶೇಖರ್,ಪ್ರಸನ್ನಕುಮಾರ್,
ಲೋಕೇಶ್(ರಂಗನಾಥ ಪುರ)
ಲೋಕೇಶ್(ಅಜ್ಜನಹಳ್ಳಿ)
ಲೋಕೇಶ್(ಗೋವಿಂದಘಟ್ಟ)
ಆಕಾಶ್, ಶಶಿಧರ್, ಸತೀಶ್ ಕಾರ್ಮಿಕ ಮುಖಂಡರು ಮಾರುತಿ ತುರುವೇಕೆರೆ, ಕೇಶವ ಕೋಲಘಟ್ಟ ,
ಪುಟ್ಟರಾಜು,ದೇವರಾಜು,
ಸಾವಿತ್ರಮ್ಮ,ನಂದಿನಿ, ಇನ್ನು ಅನೇಕ ದಲಿತ ಪರ ರೈತಪರ ಮುಖಂಡರುಗಳು ಉಪಸ್ಥಿತರಿದ್ದರು,

ವರದಿ, ಮಂಜುನಾಥ್ ಕೆ ಎ ತುರುವೇಕೆರೆ.

Exit mobile version