KALPATHARU KRANTHI

ಅದ್ದೂರಿಯಾಗಿ ನಡೆದ ಬಯಲುಸೀಮೆಸಾಮಾಜಿಕ ಸಾಂಸ್ಕೃತಿಕ ಸಂಘದ 24ನೇ ವರ್ಷದ ಸಂಸ್ಥಾಪನ ದಿನ

Spread the love

ತಿಪಟೂರುನಗರದ ಶ್ರೀ ಶಾರದ ಗ್ರಾಫಿಕ್ಸ್ ನ ಸಂಘದ ಕಾರ್ಯಲಯದ ಆವರಣದಲ್ಲಿ ಬಯಲು ಸೀಮೆ ಸಾಮಾಜಿಕ ಸಾಂಸ್ಕೃತಿಕ ಸಂಘದ 24 ನೇ ವರ್ಷದ ಸಂಸ್ಥಾಪನಾ ದಿನವನ್ನ ಅದ್ದೂರಿಯಾಗಿ ಆಚರಿಸಲಾಯಿತು ಮಾಜಿ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು

ಕಾರ್ಯಕ್ರಮ ಉದ್ಘಾಟಿಸಿದ ಮಾಜಿ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಮಾತನಾಡಿ ಸಂಘ ಸಂಸ್ಥೆಗಳು ಸಮಾಜದ ಕಷ್ಟ ಸುಖಗಳನ್ನ ಆಡಳಿತ ವರ್ಗದೊಂದಿಗೆ ಬೆಸೆಯುವ ಕೊಂಡಿಯಾಗಿ ಕೆಲಸವಮಾಡಬೇಕು, ಸಮಾಜದ ಬೆಳವಣಿಗೆಗೆ ಅಗತ್ಯವಾದ ಹಲವಾರು ರಚನಾತ್ಮಕ ಕಾರ್ಯಕ್ರಮಗಳನ್ನ, ಹಮ್ಮಿಕೊಳ್ಳುವ ಮೂಲಕ, ಉತ್ತಮ ಕೆಲಸ ಮಾಡುವುದು ಅತಿಮುಖ್ಯ, ಮೊಬೈಲ್ ಮೋಹಕ್ಕೆ ಬಿದ್ದ ಯುವ ಪೀಳಿಗೆ ಸಾಮಾಜಿಕ ವ್ಯವಸ್ಥೆಯಿಂದ ದೂರ ಉಳಿದಿರುವ ಕಾಲದಲ್ಲಿ ಬಯಲು ಸೀಮೆ ಸಾಮಾಜಿಕ ಸಾಂಸ್ಕೃತಿಕ ಸಂಘ ಸಮಾಜಕ್ಕೆ,ಹಾಗೂ ಯುವ ಪೀಳಿಗೆಗೆ ಅಗತ್ಯವಿರುವ ಕೆಲಸಗಳನ್ನ ಮಾಡುತ್ತಿದೆ, ಮಕ್ಕಳಲ್ಲಿ ಸಾಹಿತ್ಯದ ಜಾಗೃತಿ, ಭಾವಗೀತೆ, ಜಾನಪದ ಗೀತೆ ಕಲಿಕೆ ಹಾಗೂ ಗಾಯನದಂತ ಕಾರ್ಯಕ್ರಮಗಳ ನಡೆಸುತ್ತಿದೆ,ಸಾಹಿತಿಗಳು ಕವಿಗಳು ಹಾಗೂ ಸಮಾಜದ ಸಾಧಕರನ್ನ ಕಾರ್ಯಕ್ರಮಗಳಿಗೆ ಆಹ್ವಾನಿಸಿ, ಅವರಿಂದ ಸ್ಪೂರ್ತಿದಾಯಕ, ಸಂದೇಶವನ್ನ ಯುವಪೀಳಿಗೆಗೆ ನೀಡುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ,ನಮ್ಮಲ್ಲಿ ಹಲವಾರು ಸಂಘ ಸಂಸ್ಥೆಗಳು ಹುಟ್ಟುತ್ತವೆ ಆದರೇ ದೀರ್ಘಕಾಲದವರೆಗೆ ಸಮಾಜಿ ಮುಖಿಯಾಗಿ ಕೆಲಸ ಮಾಡಲು, ಸಾಧ್ಯವಾಗದೇ,ಅಸ್ಥಿತ್ವಕಳೆದುಕೊಳ್ಳುತ್ತಿವೆ, ಇಂತಹ ಬೆಳವಣಿಗೆಗಳ ನಡುವೆ ನಮ್ಮ ತಾಲ್ಲೋಕಿನಲ್ಲಿ ಬಯಲು ಸೀಮೆ ಸಾಮಾಜಿಕ ಸಾಂಸ್ಕೃತಿಕ ಸಂಘ 24 ವರ್ಷಗಳಿಂದ ನಿರಂತರ ಸಮಾಜಮುಖಿ ಕಾರ್ಯಗಳೊಂದಿಗೆ ಸಾಗುತ್ತಿರುವುದು ಉತ್ತಮ ಬೆಳವಣಿಗೆ, ಸಂಘ ಇನ್ನೂ ಹೆಚ್ಚಿನ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಲಿಎಂದು ಆಶಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯಾತಿಥಿಗಳಾಗಿ ಭಾಗವಹಿಸಿದ ತಹಸೀಲ್ದಾರ್ ಪವನ್ ಕುಮಾರ್ ಮಾತನಾಡಿ ತಿಪಟೂರು ತಾಲ್ಲೋಕಿನಲ್ಲಿ ಹಲವಾರು ಸಂಸ್ಕೃತಿಕ ಚಟುವಟಿಕೆಗಳ ನಿರಂತರವಾಗಿ ನಡೆಯುತ್ತಿರುವೆ, ಆದರಿಂದಲ್ಲೆ ಉತ್ತಮ ಶಿಕ್ಷಣ ನೆಲಗಟ್ಟನು ಹೊಂದಿದೆ, ಸಂಸ್ಕೃತಿ ಸಂಸ್ಕಾರ ಬೆಳವಣಿಗೆಗೆ ಸಂಘ ಸಂಸ್ಥೆಗಳ ಪಾತ್ರ ಮುಖ್ಯ, ಕನ್ನಡ ಕಲಿಕೆಯಲ್ಲಿ ಮಕ್ಕಳು ಹಿಂದುಳಿಯುತ್ತಿರು ಸಮಯದಲ್ಲಿ ನಮ್ಮ ಭಾಷೆ ಉಳಿಯಬೇಕು. ನಮ್ಮ ಭಾಷೆಯ ವ್ಯಾಕರಣ ಜ್ಞಾನ ಮಕ್ಕಳಿಗೆ ದೊರೆಯಬೇಕು ಎಂದು, ಸರ್ಕಾರಿ ಶಾಲೆ ಮಕ್ಕಳಿಗೆ ವ್ಯಾಕರಣ ಪುಸ್ತಕ ವಿತರಣೆ ಮಾಡುತ್ತಿರುದು ಉತ್ತಮ ಕೆಲಸ, ಹಲವಾರು ಸಂಸ್ಕೃತಿ ಸಾಹಿತಿಕ ಕಾರ್ಯಕ್ರಮ ಆಯೋಜನೆ ಮಾಡುತ್ತಿರುವ ಸಂಘ ಉತ್ತಮ ದಾರಿಯಲ್ಲಿ ನಡೆಯಲಿ ಎಂದು ತಿಳಿಸಿದರು

ಕಾರ್ಯಕ್ರಮದಲ್ಲಿ ಮುಖ್ಯಾತಿಥಿಗಳಾಗಿ ಭಾಗವಹಿಸಿ ತಾಲ್ಲೋಕು ಪಂಚಾಯ್ತಿ ಕಾರ್ಯನಿರ್ವಾಹಣಾಧಿಕಾರಿ ಸುದರ್ಶನ್ ಮಾತನಾಡಿ ಸಂಸ್ಕೃತಿಕ ವಾಗಿ ಕೆಲಸ ನಿರ್ವಹಿಸುವ ಜೊತೆಗೆ ಸಾಮಾಜಿಕವಾಗಿಯೋ ತೊಡಗಿಸಿಕೊಂಡಿರುವ ಸಂಘ ಕೋವಿಡ್ ಸಮಯದಲ್ಲಿ ಸಂಕಷ್ಟದಲ್ಲಿರುವ ಜನರಿಗೆ ನೆರವು ನೀಡುವ ಮೂಲಕ ಮಾನವೀಯ ಸೇವೆ ಮಾಡಿದೆ ಎಂದರು


ಪೌರಾಯುಕ್ತ ವಿಶ್ವೇಶ್ವರಯ್ಯ ಬದರಗಡೆ ಮಾತನಾಡಿ ಸಮಾಜದಲ್ಲಿ ಸಂಘ ಸಂಸ್ಥೆಗಳು ಹಲವು ಕಾರಣಗಳಿಂದ ಹುಟ್ಟಿಕೊಳ್ಳುತ್ತವೆ.ಕೆಲವು ಸಂಘಗಳುಹಾಗೇಯೆ ಕಣ್ಮರೆಯಾಗುತ್ತವೆ,ತಿಪಟೂರು ಕಲೆ ಸಾಹಿತ್ಯ ಸಂಸ್ಕೃತಿಗೆ ಮೊದಲಿಂದಲ್ಲೂ ಮನ್ನಣೆ ನೀಡುತ್ತಿರುವ ನಾಡು, ಅದೇ ದಾರಿಯಲ್ಲಿ ಬಯಲು ಸೀಮೆ ಸಂಘತನ್ನ 24 ವರ್ಷಗಳ ಸುಧೀರ್ಘ ಸಮಾಜಮುಖಿ ಕಾರ್ಯಶ್ಲಾಘನೀಯ ಎಂದು ತಿಳಿಸಿದರು

ಎಸ್ ವಿಪಿ ಕಾಲೇಜು ಪ್ರಚಾರ್ಯ ರೇಣುಕಯ್ಯ ಮಾತನಾಡಿ ನಮ್ಮ ಸಂಘ ಯಾವುದೇ ನಾಯಕತ್ವದ ಲಾಲಸೆ ಇಲ್ಲದೆ, ಸಮಾಜಸೇವೆಯ ಗುರಿಯೊಂದಿಗೆ ಮುನ್ನಡೆಯುತ್ತಿದ್ದು, ಸಮಾಜ ಮನಸ್ಕರು ಸಮಾನ ಚಿಂತನೆಉಳ್ಳವರು, ಸಾರ್ವಜನಿಕರ ಸಹಕಾರದಿಂದ ಸಂಘ ನಡೆಯುತ್ತಿದೆ ಎಂದು ತಿಳಿಸಿದರು

ತಿಪಟೂರು ಸಹಾಯಕ ಸರ್ಕಾರಿ ಅಭಿಯೋಜಕ ವಸಂತಕುಮಾರ್ ಮಾತನಾಡಿ ಕಲೆ ಸಾಹಿತಿ ಸಂಸ್ಕೃತಿಗಳು ದೇಶದ ಶ್ರೀಮಂತಿಕೆಯ ಪ್ರತೀಕವಾಗಿ, ನಾವೂ ಎಷ್ಟೆ ಆರ್ಥಿಕವಾಗಿ ಶ್ರೀಮಂತರಾದರು ಸಾಂಸ್ಕೃತಿಕ ನೆಲೆಗಟ್ಟಿನ ಬದುಕು ಅತಿಮುಖ್ಯ, ಈ ನಿಟ್ಟಿನಲ್ಲಿ ಬಯಲು ಸೀಮೆ ಸಂಘ ಕಾರ್ಯೋನ್ಮುಖವಾಗಿರುವುದು ನಿಜಕ್ಕೂ ಶ್ಲಾಘನೀಯ ಎಂದರು

ಕಾರ್ಯಕ್ರಮದಲ್ಲಿಮುಖ್ಯಾತಿಥಿಗಳಾಗಿ ಗ್ರೇಡ್ 2 ತಹಸೀಲ್ದಾರ್ ಜಗನ್ನಾಥ್,ಅಧ್ಯಕ್ಷರಾದ ನಾಗರಾಜು ಸಂಸ್ಥಾಪಕರಾದ ಎನ್ ಬಾನುಪ್ರಶಾಂತ್. ಪತ್ರಕರ್ತರ ಸಂಘದ ಅಧ್ಯಕ್ಷ ಪ್ರಶಾಂತ್ ಕರೀಕೆರೆ,ಕವಿ ಸತ್ಯನಾರಾಯಣ್ ಶ್ರೇಷ್ಠಿ,ಮುಂತ್ತಾದವರು ಉಪಸ್ಥಿತರಿದರು

ವರದಿ:ಮಂಜುನಾಥ್ ಹಾಲ್ಕುರಿಕೆ

Exit mobile version