KALPATHARU KRANTHI

ತಿಪಟೂರು ನಗರಠಾಣೆ ಪೋಲಿಸರ ಭರ್ಜರಿ ಕಾರ್ಯಚಾರಣೆ,ಲಕ್ಷಾಂತ ಮೌಲ್ಯದ ಮಾಲು ವಶ.

Spread the love

ತಿಪಟೂರು ನಗರದ ಮಂಜುಳಮ್ಮ ಗಾರ್ಡ್ ನಲ್ಲಿ ನಡೆದ ಸರಗಳ್ಳತನ ಪ್ರಕರಣ ಬೇದಿಸಿದ ಪೊಲೀಸರ ತಂಡ, ಮಹಾರಾಷ್ಟ್ರದ ಪೂನಾ ಇರಾನಿ ಗ್ಯಾಂಗ್ ಗೆ ಹೆಡೆಮುರಿಕಟ್ಟಿದ್ದಾರೆ

ದಿನಾಂಕ 17-10-2024 ರಂದು ಸಂಜೆ ತಿಪಟೂರು ಟೌನ್ ಮಂಜುಳಮ್ಮ ಗಾರ್ಡನ್ ಏರಿಯಾ
ವಾಸಿಯಾದ ವೆಂಕಟಮ್ಮ ತಿಪಟೂರು ಇವರು ನೀಡಿದ ದೂರಿನ ಅಂಶವೇನೆಂದರೆ ಇದೇ ದಿನ ಮಧ್ಯಾಹ್ನ ಸುಮಾರು
12-00 ಗಂಟೆ ಸಮಯದಲ್ಲಿ ತನ್ನ ಮನೆ ಕಡೆಗೆ ಹೋಗುತಿದ್ದಾಗ, ಬಜಾಜ್ ಪಲ್ಸರ್ ಬೈಕ್ ನಲ್ಲಿ ಇಬ್ಬರು ಆಸಾಮಿಗಳು
ಹೋಗಿ, ಆಕೆಯ ಕೊರಳಿನಲ್ಲಿದ್ದ ಚಿನ್ನದ ಸರವನ್ನು ಬೈಕ್ ನ ಹಿಂಬದಿ ಸವಾರ ಕಿತ್ತುಕೊಳ್ಳಲು ಹೋದಾಗ ಆಕೆ
ಬಿಗಿಯಾಗಿ ಹಿಡಿದುಕೊಂಡಿದ್ದರಿಂದ ಅರ್ಧ ಚಿನ್ನದ ಸರವನ್ನು ಕಿತ್ತುಕೊಂಡು ಹೋಗಿರುವ ಸಂಬಂದ ತಿಪಟೂರು ನಗರ
ಪೊಲೀಸ್ ಠಾಣೆಯಲ್ಲಿ ಮೊ.ನಂ 184/2024 ಕಲಂ 309(4) ಬಿ ಎನ್ ಎಸ್ ರೀತ್ಯ ಪ್ರಕರಣ ದಾಖಲಿಸಿ ತನಿಖೆ
ಕೈಗೊಂಡಿರುತ್ತೆ.
ಈ ಪ್ರಕರಣದಲ್ಲಿ ಆರೋಪಿಯನ್ನು ಪತ್ತೆ ಮಾಡಲು ವಿಶೇಷ ತಂಡವನ್ನು ರಚಿಸಿ, ಈ ಪತ್ತೆ ತಂಡವು ಅಸ್ಟರ್
ಅಲಿ ಎಂಬುವನನ್ನು ದಸ್ತಗಿರಿ ಮಾಡಿ, ಆರೋಪಿಗಳು ಕೃತ್ಯಕ್ಕೆ ಉಪಯೋಗಿಸಿದ ಬಜಾಜ್ ಪಲ್ಸರ್ ಬೈಕ್
ಅಮಾನತ್ತುಪಡಿಸಿಕೊಂಡು, ಈತನು ನೀಡಿದ ಮಾಹಿತಿ ಮೇರೆಗೆ ಮತ್ತೊಬ್ಬ ಆರೋಪಿ ಮಹಾರಾಷ್ಟ್ರ ರಾಜ್ಯದ ಪೂನಾ
ನಗರದ ಇರಾನಿ ಗಲ್ಲಿಯಲ್ಲಿದ್ದ ಹೈದರ್ ಅಲಿ ಎಂಬಾತನನ್ನು ದಸ್ತಗಿರಿ ಮಾಡಿ ಸದರಿ ಆರೋಪಿಯಿಂದ ತಿಪಟೂರು
ನಗರದಲ್ಲಿ ಹಾಗೂ ಹುಳಿಯಾರು, ಚಿಕ್ಕನಾಯಕನಹಳ್ಳಿ ಮತ್ತು ಚನ್ನಪಟ್ಟಣ ಟೌನ್ ನಲ್ಲಿ ಸರಗಳ್ಳತನ ಮಾಡಿದ್ದ ಒಟ್ಟು
05 ಪ್ರಕರಣಗಳಲ್ಲಿ 7 ಲಕ್ಷ ರೂ ಬೆಲೆ ಬಾಳುವ 100 ಗ್ರಾಂ ತೂಕದ ಚಿನ್ನದ ಒಡವೆಗಳನ್ನು ಹಾಗೂ 1 ಲಕ್ಷ ರೂ
ಬೆಲೆ ಬಾಳುವ ಬಜಾಜ್ ಪಲ್ಸರ್ ಬೈಕ್‌ನ್ನು ಅಮಾನತ್ತು ಪಡಿಸಿಕೊಂಡು, ಆರೋಪಿಗಳನ್ನು ಘನ ನ್ಯಾಯಾಲಯದ
ಮುಂದೆ ಹಾಜರುಪಡಿಸಿದ್ದು, ಆರೋಪಿಗಳು ನ್ಯಾಯಾಂಗ ಬಂಧನದಲ್ಲಿ ಇರುತ್ತಾರೆ.
ಈ ಪ್ರಕರಣಗಳ ಆರೋಪಿ ಮತ್ತು ಮಾಲನ್ನು ಪತ್ತೆ ಹಚ್ಚಲು ಹೆಚ್ಚುವರಿ ಪೊಲೀಸ್ ಅಧೀಕ್ಷಕರುಗಳಾದ ವಿ
ಮರಿಯಪ್ಪ, ಅಬ್ದುಲ್ ಖಾದರ್ ರವರ ಮಾರ್ಗದರ್ಶನದಲ್ಲಿ ವಿಶೇಷ ತಂಡವನ್ನು ರಚನೆ ಮಾಡಿದ್ದು ತಂಡದಲ್ಲಿ
ತಿಪಟೂರು ಉಪ ವಿಭಾಗದ ವಿನಾಯಕ ಎನ್ ಶೆಟಗೆರಿ ರವರ ನೇತೃತ್ವದಲ್ಲಿ, ತಿಪಟೂರು ನಗರ ಪೊಲೀಸ್ ಠಾಣೆಯ
ಪಿ ಐ ಸಿ ವೆಂಕಟೇಶ್ ರವರು ಪಿ ಎಸ್ ಐ ಕೃಷ್ಣಪ್ಪ ಹಾಗೂ ಎ ಎಸ್ ಐ ರವರುಗಳಾದ ಚಿಕ್ಕಲಕ್ಕೇಗೌಡ, ಉಸ್ಮಾನ್
ಸಾಬ್ ಸಿಬ್ಬಂದಿಗಳಾದ ಮೋಹನ್ ಕುಮಾರ್, ಲೋಕೇಶ್, ಯತೀಶ್, ಮಂಜುನಾಥ್, ಸಾಗರ್, ಚಿರಂಜೀವಿ,
ವಸೀಂ ಜಛೇ, ಕಿರಣ್ ಮಹಿಳಾ ಸಿಬ್ಬಂದಿಗಳಾದ ಪಲ್ಲವಿ, ಸುಮಾ, ತನಿಖಾ ಸಹಾಯಕರಾಗಿ ಬೋರಲಿಂಗಯ್ಯ,
ಹಾಗೂ ಚಾಲಕರುಗಳಾದ ಸಂತೋಷ್, ಮನೋಜ್ ರವರುಗಳನ್ನು ತುಮಕೂರು ಜಿಲ್ಲಾ ಪೊಲೀಸ್ ಅಧೀಕ್ಷಕರಾದ
ಅಶೋಕ್ ಕೆ ವಿ ಐ.ಪಿ.ಎಸ್ ರವರು ಶ್ಲಾಘಿಸಿದ್ದಾರೆ.

ವರದಿ:ಮಂಜುನಾಥ್ ಹಾಲ್ಕುರಿಕೆ

Exit mobile version