KALPATHARU KRANTHI

ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಕಾರು ಡಿಕ್ಕಿಯಾಗಿ ಪಲ್ಟಿ : ಬೆಸ್ಕಾಂ ನೌಕರರ ಸ್ಥಳದಲ್ಲೇ‌ ಸಾವು

Spread the love

ಕುಣಿಗಲ್ : ಚಾಲಕನ ನಿಯಂತ್ರಣ ತಪ್ಪಿ.ಕಾರು ಮರಕ್ಕೆ ಡಿಕ್ಕಿ ಹೊಡೆದು ಬಳಿಕ ಪಲ್ಟಿಯಾಗಿ ಬೆಸ್ಕಾಂ ನೌಕರರ ಸ್ಥಳದಲ್ಲೇ ಮೃತಪಟ್ಟ ಘಟನೆ ರಾಜ್ಯ ಹೆದ್ದಾರಿ 33 ಟಿ.ಎಂ ರಸ್ತೆ ತಾಲೂಕಿನ ಕುಣಿಗಲ್ ತಾಲ್ಲೋಕಿನ ದೊಡ್ಡಮಾವತ್ತೂರು ಬಳಿ ಶನಿವಾರ ಸಂಬವಿಸಿದೆ,

ತುಮಕೂರು ಜಿಲ್ಲೆ ತಿಪಟೂರು ನಗರ ಸ್ಟೆಲ್ಲಾ ಮೇರಿಸ್ ಸ್ಕೂಲ್ ವಿದ್ಯಾನಗರ ವಾಸಿ ಸಿ.ಎನ್ ಹರೀಶ್ (37) ಮೃತ ಕಾರು ಚಾಲಕ ,
ಬೆಸ್ಕಾಂ ನೌಕರರ ಹರೀಶ್ ಕಾರು ಚಾಲನೆ ಮಾಡಿಕೋಂಡು ತಿಪಟೂರಿನಿಂದ ಕುಣಿಗಲ್ ಮಾರ್ಗವಾಗಿ ಮೈಸೂರು ಕಡೆಗೆ ತೆರಳುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಕಾರು, ರಸ್ತೆ ವಿಭಜಕ್ಕೆ ಡಿಕ್ಕಿ ಹೊಡೆದು ನಂತರ ತೆಂಗಿನ ಮರಕ್ಕೆ ರಸಭವಾಗಿ ಡಿಕ್ಕಿ ಹೊಡೆದ ಪರಿಣಾಮ ಕಾರು ಪಲ್ಟಿಯಾಗಿ ಚಾಲಕ ಹರೀಶ್ ಸ್ಥಳದಲ್ಲೇ‌ ಮೃತಪಟ್ಟಿದ್ದಾನೆ ಘಟನೆ ಸ್ಥಳಕ್ಕೆ ಅಮೃತ್ತೂರು ವೃತ್ತ ನಿರೀಕ್ಷಕ‌ ಮಾದ್ಯಾನಾಯಕ್ ಬೇಟಿ‌ ನೀಡಿ ಪರಿಶೀಲನೆ ನಡೆಸಿದ್ದಾರೆ, ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ವರದಿ:ಮಂಜುನಾಥ್ ಹಾಲ್ಕುರಿಕೆ

ಜಾಹಿರಾತು:

Exit mobile version