
ಕರ್ನಾಟಕ ಸಂಪಾದಕರು ಹಾಗೂ ವರದಿಗಾರರ ಸಂಘ ತಿಪಟೂರು ವತಿಯಿಂದ ನೂತನ ವರ್ಷ 2025ನೇ ಸಾಲಿನ ಕ್ಯಾಲೆಂಡರ್ ಬಿಡುಗಡೆಗೊಳಿಸಲಾಯಿತು.
ತಿಪಟೂರು ನಗರದ ಕಲ್ಪತರು ಗ್ರ್ಯಾಂಡ್ ಹೋಟೆಲ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ಖ್ಯಾತ ಸಾಹಿತಿ ಡಾ//ಎಸ್.ಕೆ ಮಂಜುನಾಥ್ ಉದ್ಘಾಟಿಸಿದರು
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಪತ್ರಿಕಾ ವೃತ್ತಿ ಪವಿತ್ರವಾದ ವೃತ್ತಿ, ಸಮಾಜದ ಅಂಕುಡೊಂಕುಗಳನ್ನ ತಿದ್ದಿ ಸರಿದಾರಿಗೆ ತರುವ ಕೆಲಸ ಪತ್ರಕರ್ತರದು, ಸಮಾಜದ ಕಟ್ಟಕಡೆಯ ವ್ಯಕ್ತಿಯ ಸಮಸ್ಯೆಯನ್ನ ಗುರ್ತಿಸಿ ಆಳುವ ವರ್ಗದ ಗಮನಕ್ಕೆ ತಂದು ನೆರವು ನೀಡುವಂತಹ ಶಕ್ತಿ ಪತ್ರಿಕಾ ಮಾಧ್ಯಮಕ್ಕಿದೆ,ಪತ್ರಿಕಾ ವೃತ್ತಿಯ ಗೌರವ ಉಳಿಸಿ, ಬೆಳಸುವ ಕೆಲಸವನ್ನ ವೃತ್ತಿ ನಿರತಪತ್ರಕರ್ತರು ಮಾಡಬೇಕು ಎಂದು ತಿಳಿಸಿದರು
ಕಾರ್ಯಕ್ರಮದಲ್ಲಿ ಉಪಸ್ಥಿತರಿದ ಉಪನ್ಯಾಸಕರಾದ ಡಾ//ಎಲ್ ಎಂ ವೆಂಕಟೇಶ್ ಮಾತನಾಡಿ ಪತ್ರಿಕಾ ವೃತ್ತಿ ಪವಿತ್ರವಾದ ವೃತ್ತಿ ಸಮಾಜದ ,ಓರೆಕೋರೆಗಳ ತಿದ್ದಿತೀಡುವ ಕ್ಷೇತ್ರದ ಮೇಲೂ ಅಪಾದನೆಗಳು ತಪ್ಪಿದಲ್ಲ,ಪತ್ರಕರ್ತರದವರು ಆತ್ಮ ಸಾಕ್ಷಿಗೆ ಅನುಗುಣವಾಗಿ ಕೆಲಸ ಮಾಡಬೇಕು,ಪತ್ರಿಕಾ ರಂಗ ಬದಲಾವಣೆಯ ಕಾಲಘಟ್ಟದ ಸುಳಿಯಲ್ಲಿ ಸಿಲುಕಿ, ಉದ್ಯಮವಾಗಿ ಬದಲಾದ ಪರಿಣಾಮ, ಹಲವು ಏರಿಳಿತಗಳನ್ನ ಕಾಣುತ್ತಿದ್ದೇವೆ,ಪತ್ರಿಕಾ ರಂಗ ಉದ್ಯಮವಾಗಿ ಬದಲಾದ ಕಾರಣ ಪತ್ರಕರ್ತರ ವೃತ್ತಿ ಬದುಕಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದ್ದು,ವೃತ್ತಿ ಅಭದ್ರತೆ ಎದುರಿಸುವಂತ್ತಾಗಿದೆ, ಪತ್ರಕರ್ತರು ವೃತ್ತಿ ಮೌಲ್ಯವನ್ನ ಯಾವದೇ ಕಾರಣಕ್ಕೂ ಕಳೆದುಕೊಳ್ಳ ಬಾರದುಎಂದು ತಿಳಿಸಿದರು
ಪತ್ರಕರ್ತರ ನವೀನ್ ಕುಮಾರ್ ಮಾತನಾಡಿ ಸಮಾಜದಲ್ಲಿ ಬದಲಾವಣೆ ಜಗದ ನಿಯಮ, ಬದಲಾವಣೆ ಕಾರಣದಿಂದ ಪತ್ರಿಕಾ ರಂಗದಲ್ಲೂ ಬದಲಾವಣೆ ಆರಂಭವಾಗಿದ್ದು, ಶಕ್ತಿಯುತವಾದ ಮುದ್ರಣ ಮಾಧ್ಯಮಕ್ಕೆ ಪೈಪೋಟಿಯಾಗಿ ಇಂದು ಡಿಜಿಟಲ್ ಮಾಧ್ಯಮ ವೇಗವಾಗಿ ಬೆಳೆಯುತ್ತಿದೆ,ಮನುಷ್ಯನ ತಂತ್ರಜ್ಞಾನದ ನಾಗಲೋಟದಲ್ಲಿ ಮಾಧ್ಯಮಕ್ಷೇತ್ರವೂ ಹೊಸ ಹೊಸ ಸೃಜನಾತ್ಮಕ ಕ್ಷೇತ್ರವಾಗುತ್ತಿರುವುದು ಉತ್ತಮ ಬೆಳವಣಿಗೆ ಎಂದು ತಿಳಿಸಿದರು
ಕಾರ್ಯಕ್ರಮದಲ್ಲಿ ಮಾಜಿ ನಗರಸಭಾ ಸದಸ್ಯ ನಿಜಗುಣ.ಶ್ರೀ ಚೌಡೇಶ್ವರಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಎಸ್ ಸೋಮಶೇಖರ್ , ನಿವೃತ್ತ ಶಿಕ್ಷಕ ಸೋಮಶೇಖರ್.ಪುಟ್ಟರಾಜು. ನಾಗ್ತಿಹಳ್ಳಿ ಕೃಷ್ಣಮೂರ್ತಿ.ಸಂಘದ ಗೌರಾವಾಧ್ಯಕ್ಷ ಭಾಸ್ಕರಾ ಚಾರ್. ಅಧ್ಯಕ್ಷ ಗಣೇಶ್ ಪ್ರಧಾನ ಕಾರ್ಯದರ್ಶಿ ಧರಣೇಶ್ ಕುಪ್ಪಾಳು.ಉಪಾಧ್ಯಕ್ಷ ಶಂಕರಪ್ಪ ಬಳ್ಳೆಕಟ್ಟೆ, ಮುಂತ್ತಾದವರು ಉಪಸ್ಥಿತರಿದರು
ವರದಿ:ಧರಣೀಶ್ ಕುಪ್ಪಾಳು
ಜಾಹಿರಾತು: