
ತಿಪಟೂರು.ತಾಲ್ಲೂಕು ಕಾನೂನು ಸೇವಾ ಸಮಿತಿ, ತಾಲ್ಲೂಕು ವಕೀಲರ ಸಂಘ, ತಾಲ್ಲೂಕು ವಿಶೇಷ ಚೇತನರ ವೇದಿಕೆ ಮತ್ತು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ತಿಪಟೂರು ರವರ ವತಿಯಿಂದ “ಅಂತರ ರಾಷ್ಟ್ರೀಯ ವಿಶೇಷ ಚೇತನರ ದಿನಾಚರಣೆ” “ವಿಶ್ವ ಮಾನವ ಹಕ್ಕುಗಳ ದಿನಾಚರಣೆ” ಮತ್ತು”ರಾಷ್ಟ್ರೀಯ ಗ್ರಾಹಕರ ದಿನಾಚರಣೆ” ಕಾರ್ಯಕ್ರಮ ನಡೆಸಲಾಯಿತು.
ತಾಲ್ಲೋಕಿನ ಹಾವೇನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಆವರಣದಲ್ಲಿ ನಡೆದ ಕಾರ್ಯಕ್ರಮ ಉದ್ಘಾಟಿಸಿದ ತಿಪಟೂರು ಅಧಿಕ ಸಿವಿಲ್ ಹಾಗೂ ಜೆಎಂಎಫ್ ಸಿ ನ್ಯಾಯಾಧೀಶರಾದ ಕುಮಾರಿ ಮಧು ಶ್ರೀ ಜಿ.ಎಸ್., ಮಾತನಾಡಿ ಪ್ರತಿಯೊಬ್ಬ ಪ್ರಜೆಯು ಮೂಲ ಕಾನೂನುಗಳ ಅರಿವನ್ನು ಹೊಂದಬೇಕಾಗಿರುವುದು,ಪ್ರಮುಖ ಕರ್ತವ್ಯ, ಕಾರಣ ಗ್ರಾಹಕರು ಮೊದಲು ಸಾಮಾನ್ಯ ತಿಳುವಳಿಕೆಯನ್ನು ಹೊಂದಿದವರಾಗಿ ಸಗಟುಗಳ ಉತ್ಪಾದನೆ, ಉತ್ಪಾದನಾ ದಿನಾಂಕ ಉತ್ಪಾದನೆಯ ಉಪಯೋಗಿಸುವ ಕಡೆಯ ದಿನಾಂಕವನ್ನು ಅರಿಯುವಷ್ಟು ಜ್ಞಾನವನ್ನು ಹೊಂದಿರಬೇಕು. ಇದರಿಂದ ಮುಂದಾಗಬಹುದಾದ ಅವಘಡಗಳನ್ನು ತಪ್ಪಿಸಬಹುದು ವಿವಿಧ ಕ್ಷೇತ್ರಗಳಲ್ಲಿ ಯಾವುದೇ ರೀತಿಯ ತೊಂದರೆಗಳು ಉಂಟಾದಲ್ಲಿ ಸಂಬಂಧಪಟ್ಟ ಇಲಾಖೆಗೆ ದೂರನ್ನು ನೀಡುವುದರ ಮೂಲಕ ನ್ಯಾಯವನ್ನು ಪಡೆಯಬಹುದು, ಸದರಿ ಗ್ರಾಹಕರ ವೇದಿಕೆಯು ಜಿಲ್ಲಾ, ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಇದ್ದು ಇವುಗಳಿಗೆ ಅರ್ಜಿ ಸಲ್ಲಿಸಿ ಅನ್ಯಾಯಕ್ಕೆ ಒಳಗಾದ ವ್ಯಕ್ತಿ ಪರಿಹಾರ ಕಂಡುಕೊಳ್ಳಬಹುದು ಎಂದ ಅವರು ವಿಶೇಷ ಚೇತನರು ದೈವದತ್ತವಾಗಿ ವಿಶೇಷ ಗುಣಲಕ್ಷಣಗಳನ್ನು ಹೊಂದಿದ್ದು, ಇವರು ಕೂಡ ಎಲ್ಲರಂತೆಯೇ ಸರ್ವ ಕ್ಷೇತ್ರಗಳಲ್ಲಿ ಸಾಧನೆಯನ್ನು ಮಾಡಬಲ್ಲರು ಆತ್ಮಭಿಮಾನ ಹೊಂದಿದ್ದರೆ ಜಗತ್ತನ್ನೇ ಗೆಲ್ಲಬಹುದು, ಅನೇಕ ಮಹನೀಯರು ಅಂಗ ವೈಕಲ್ಯದ್ದರೂ ಸಹ ವಿವಿಧ ರೀತಿಯ ಸಾಮಾಜಿಕ ಮಜಲುಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸಾಧನೆಗೈದಿರುವುದು ಜನಜನಿತವಾಗಿದೆ. ಪ್ರಮುಖವಾಗಿ ಸರ್ಕಾರದ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ತಮ್ಮಲ್ಲಿರುವ ಅಧಮ್ಯ ಪ್ರತಿಭೆಯನ್ನು ಹೊರ ಹಾಕಬೇಕು, ಅಂಗವಿಕಲರು ಎಂಬ ಕಾರಣದಿಂದ ವಿಶೇಷ ಚೇತನರು,ಸಾಮಾಜಿಕ ವೇದಿಕೆಯಿಂದ ಹೊರಗುಳಿಯದಂತೆ ನೋಡಿಕೊಳ್ಳುವುದು ನಮ್ಮಗಳ ಕರ್ತವ್ಯ.ಮಾನವ ಹಕ್ಕುಗಳು ಸಂವಿಧಾನದಲ್ಲಿ ಅಡಕವಾಗಿದ್ದು ಎಲ್ಲರಂತೆಯೇ ವಿಶೇಷ ಚೇತನರೂ ತಮ್ಮ ತಮ್ಮ ಹಕ್ಕು ಕರ್ತವ್ಯಗಳನ್ನು ಚಲಾಯಿಸಬಹುದು ಎಂದು ತಿಳಿಸಿದರು.
ತಿಪಟೂರು ತಾಲ್ಲೋಕು ವಕೀಲರ ಸಂಘದ ಕಾರ್ಯದರ್ಶಿ ಬಿ ಮಲ್ಲಿಕಾರ್ಜುನಯ್ಯ. ಮಾತನಾಡಿ ವಿಶೇಷ ಅಗತ್ಯ ಉಳ್ಳವರು ಬೌದ್ಧಿಕ ಆರನೇ ಜ್ಞಾನವನ್ನು ಹೊಂದಿರುತ್ತಾರೆ. ಇವರು ಅತಿ ಸೂಕ್ಷ್ಮತೀತರು ಇವರುಗಳಿಗೆ ಸರ್ಕಾರ ಅಗತ್ಯ ಮೀಸಲಾತಿ ಹಾಗೂ ಮಾಸಿಕ ಆರ್ಥಿಕ ನೆರವು ನೀಡುವುದರ ಮುಖೇನ ಅವರನ್ನು ಸಮಾಜದ ಮುಖ್ಯ ವಾಹಿನಿಗೆ ಕರೆ ತರುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸ ಬೇಕು ಎಂದು ತಿಳಿಸಿದರು.
ತಿಪಟೂರು ನ್ಯಾಯಾಲಯದ ಪ್ರಥಮ ದರ್ಜೆ ಸಹಾಯಕರಾದ ಶಿವನಗೌಡ ಮುದ್ದಣ ಗೌಡ. ವಾಣಿ. ಮುಖ್ಯ ಶಿಕ್ಷಕರು, ಹಿರಿಯ ಪ್ರಾಥಮಿಕ ಶಾಲೆ, ಹಾವೇನಹಳ್ಳಿ, ಸಿ ಆರ್ ಪಿ ಶ್ರೀಮತಿ ಆಶಾ.ಮುಂತ್ತಾದವರು ಉಪಸ್ಥಿತರಿದರು
ವರದಿ:ಮಂಜುನಾಥ್ ಹಾಲ್ಕುರಿಕೆ
ಜಾಹಿರಾತು: