
ತಿಪಟೂರು:ಮನುಷ್ಯನ ದೇಹ ಪ್ರಕೃತಿಯ ಭಾಗ ಪಂಚಭೂತಗಳ ಪ್ರತೀಕವಾಗಿರುವ ದೇಹ, ಪ್ರಕೃತಿಯ ನಿಯಮಗಳಂತೆ ಬದುಕಿದರೆ ಸಧೃಡ ಆರೋಗ್ಯಂತರಾಗಿರ ಬಹುದು. ಶಾರೀರಿಕ ಮತ್ತು ಮಾನಸಿಕ ಆರೋಗ್ಯವನ್ನು ಸಾರ್ವಜನಿಕರು ಕಾಪಾಡಿಕೊಳ್ಳಬಹುದಾಗಿದೆ ಎಂಬ ಆಶಯದೊಂದಿಗೆ ಭಾರತ ಸರ್ಕಾರ ಆಯುಷ್ ಮಂತ್ರಾಲಯ ದೇಶ್ ಕೀ ಪ್ರಕೃತಿ ಪರೀಕ್ಷಾ ಅಭಿಯಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಎಂದು ಕೊನೇಹಳ್ಳಿಯ ಸರ್ಕಾರಿ ಆಯುರ್ವೇದ ಚಿಕಿತ್ಸಾಲಯದ ಹಿರಿಯ ವೈದ್ಯಾಧಿಕಾರಿ ಡಾ.ಸುಮನ.ಟಿ.ಎಮ್ ತಿಳಿಸಿದರು.
ಕೊನೇಹಳ್ಳಿ ಸರ್ಕಾರಿ ಆಯುರ್ವೇದ ಆಸ್ಪತ್ರೆ ಆವರಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಈ ಅಭಿಯಾನ ವಿಶೇಷ ಮೊಬೈಲ್ ಆಪ್ ಆಧಾರಿತ ಕಾರ್ಯಕ್ರಮವಾಗಿದ್ದು ಈ ಅಪ್ಲೀಕೇಶನ್ ಅನ್ನು ಪ್ಲೇ-ಸ್ಟೋರ್ ಮೂಲಕ ಪ್ರಕೃತಿ ಅಭಿಯಾನ್ ಡೌನ್‌ಲೋಡ್ ಮಾಡಿಕೊಂಡು ಮೊಬೈಲ್‌ನಲ್ಲಿ ಅಳವಡಿಸಿಕೊಂಡು ಕೆಲವು ಮೂಲ ಪ್ರಶ್ನೆಗಳಿಗೆ ಉತ್ತರಿಸಿದಲ್ಲಿ, ಕಾಲಕಾಲಕ್ಕೆ ನಿಮ್ಮ ಪ್ರಕೃತಿ ಅನುಸಾರವಾಗಿ ಆರೋಗ್ಯಕ್ಕೆ ಪೂರಕವಾದ ಸೂಚನೆ ಮತ್ತು ಸಲಹೆಗಳು ಮೊಬೈಲಿಗೆ ಬರಲಿದ್ದು, ಜೊತೆಗೆ ಆರೋಗ್ಯ ಪರಿಪಾಲನೆಯ ಬಗ್ಗೆ ಇನ್ನೂ ಹೆಚ್ಚಿನ ಉಪಯುಕ್ತ ಮಾಹಿತಿಗಳನ್ನು ನೀಡಲಾಗುವುದು.
ಮನುಷ್ಯನ ದೇಹವು ಕಾಲ ಕಾಲಕ್ಕೆ ಬದಲಾವಣೆ ಆಗುವ ಸಂದರ್ಭದಲ್ಲಿ ಆರೋಗ್ಯದ ವ್ಯತ್ಯಾಸಗಳನ್ನು ಆಫ್ ಮೂಲಕ ತಿಳಿದುಕೊಳ್ಳಲಾಗುತ್ತಿದೆ ಕೇಂದ್ರ ಸರ್ಕಾರವು ಈ ಪ್ರಯೋಗವನ್ನು ಮೊದಲು ಕರ್ನಾಟಕದಲ್ಲಿ ಪ್ರಾಯೋಗಿಕವಾಗಿ ಚಾಲನೆ ನೀಡಿದ್ದು ಮುಂದೆ ಇದರ ಉಪಯೋಗವನ್ನು ದೇಶದ ಜನರು ಉಪಯೋಗಿಸಿಕೊಳ್ಳಬಹುದಾಗಿದೆ ಅದ್ದರಿಂದ ಸಾರ್ವಜನಿಕರು ಪ್ರಕೃತಿ ಪರೀಕ್ಷಾ ಅಭಿಯಾನ್‌ನಲ್ಲಿ ಪಾಲ್ಗೋಂಡು ಉಪಯೋಗ ಪಡೆದುಕೊಳ್ಳಬಹುದು ಹಾಗೂ ಹೆಚ್ಚಿನ ಮಾಹಿತಿಗಾಗಿ ಸರ್ಕಾರಿ ಆಯುರ್ವೇದ ಚಿಕಿತ್ಸಾಲಯವನ್ನು ಸಂಪರ್ಕಿಸಿಬಹುದು ಎಂದು ತಿಳಿಸಿದರು.
ಅಭಿಯಾನದಲ್ಲಿ ತಮ್ಮನ್ನು ತಾವು ಅವಲೋಕನ ಮಾಡಿಕೊಳ್ಳಬೇಕು,, ವ್ಯಕ್ತಿಗೆ ಋತುವಿಗೆ ಅನುಗುಣವಾಗಿ ಆಹಾರ,ಹಾಗೂ ಜೀವನ ಶೈಲಿ ಬದಲಿಸಿಕೊಳ್ಳ ಬೇಕು, ಚಿಕಿತ್ಸೆ ಅವಶ್ಯಕತೆಯಿದೆ ಎಂಬುದು ತಿಳಿಯಬಹುದಾಗಿದೆ. ಮುಂದಿನ ದಿನಗಳಲ್ಲಿ ಉದ್ಯೋಗಕ್ಕೆ, ವೈವಾಹಿಕ ಜೀವನದ ಪೂರ್ವದಲ್ಲಿ ಈ ಅಭಿಯಾನವವು ಅನುಕೂಲಕರವಾಗುತ್ತದೆ. ಅಭಿಯಾನದಲ್ಲಿ ಯಾವ ಯಾವ ಸ್ಥಳಕ್ಕೆ ಯಾವ ರೀತಿ ಸಲಕರಣೆಗಳು ಅವಶ್ಯಕತೆ ಹಾಗೂ ಯಾವ ತರಭೇತಿಯನ್ನು ನೀಡಬಹುದು ಎಂಬುದನ್ನು ಗುರುತಿಸುವ ಕೆಲಸವನ್ನು ಮಾಡಲಾಗುತ್ತಿದೆ ಎಂದು ತಿಳಿಸಿದರು.
ವರದಿ:ಮಂಜುನಾಥ್ ಹಾಲ್ಕುರಿಕೆ
ಜಾಹಿರಾತು: