
ತುಮಕೂರು ಜಿಲ್ಲೆ ತಿಪಟೂರು ನಗರದ ಸಂವಿಧಾನ ಶಿಲ್ಪ ಡಾ//ಬಿ.ಆರ್ ಅಂಬೇಡ್ಕರ್ ವೃತ್ತದಲ್ಲಿ ದಲಿತಪರ ಸಂಘಟನೆಗಳ ಒಕ್ಕೂಟದಿಂದ ಬೃಹತ್ ಪ್ರತಿಭಟನೆ ನಡೆಸಲಾತಿತು,
ಬಿ.ಆರ್ ಅಂಬೇಡ್ಕರ್ ವೃತ್ತದಲ್ಲಿ ಮಾನವಸರಪಳಿ ನಿರ್ಮಿಸಿದ ಪ್ರತಿಭಟನಾ ನಿರತರು,ಅಮಿತ್ ಷಾ ಭಾವಚಿತ್ರಕ್ಕೆ ಚಪ್ಪಲಿಯಿಂದ ಹೊಡೆದುಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ ದಲಿತ ಮುಖಂಡರು ಗೃಹ ಸಚಿವ ಅಮಿತ್ ಷಾ ರಾಜಿನಾಮೇಗೆ ಒತ್ತಾಯಿಸಿದರು.
ಡಾ//ಬಿ.ಆರ್ ಅಂಬೇಡ್ಕರ್ ವೃತ್ತದಿಂದ ತಾಲ್ಲೋಕು ಆಡಳಿತ ಸೌಧಕ್ಕೆ ಪ್ರತಿಭಟನಾ ಮೆರಣಿಗೆ ನಡೆಸಿಉಪವಿಭಾಗಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿಪತ್ರಸಲ್ಲಿಸಿದರು.
ಪ್ರತಿಭಟನೆಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ, ಡಾ//ಬಿ.ಆರ್ ಅಂಬೇಡ್ಕರ್ ಸ್ವಾಭಿಮಾನಿ ಸಂಘ, ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಂಬೆಡ್ಕರ್ ವಾದ)ಜೈ.ಭೀಮ್ ಚಲವಾದಿ ಮಹಾಸಭಾ, ಅಖಿಲಕರ್ನಾಟಕ ಕೊರಚ ಮಹಾಸಭಾ, ಸೇರಿದಂತೆ ವಿವಿಧ ಸಂಘಟನೆಗಳು ಪ್ರತಿಭಟನೆಯಲ್ಲಿ ಭಾಗವಹಿಸಿದವು.
ಪ್ರತಿಭಟನಾ ನಿರತರನ್ನ ಉದೇಶಿಸಿ ಮಾತನಾಡಿದ ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕ ಹರೀಶ್ ಗೌಡ ಮಾತನಾಡಿ ಗೃಹಸಚಿವ ಅಮಿತ್ ಷಾ, ದೇಶದ ಗೃಹ ಖಾತೆ ನಿರ್ವಹಿಸಲು ಅನರ್ಹ ಹಾಗೂ ಅವೀವೇಕದ ವ್ಯಕ್ತಿ,ಆರ್ ಎಸ್ಎಸ್ ಅಂತರಾಳದ ಮನಸ್ಥಿತಿಯನ್ನ ತಮ್ಮ ಮಾತುಗಳ ಮುಖಾಂತರ ಹೊರಹಾಕಿದ್ದಾರೆ.
ಪ್ರಪಂಚದ ಜ್ಞಾನ ದೀಪವಾದ ಡಾ// ಅಂಬೇಡ್ಕರ್ ರವರ ವಿದ್ವಾತ್ ಸಹಿಸದೆ ಅಸಹನೆಯ ಮಾತನಾಡಿದ್ದಾರೆ, ಈ ದೇಶದ ಬಹುಜನರಿಗೆ, ದಲಿತರು ಹಿಂದುಳಿದವರು, ಆದಿವಾಸಿಗಳು ಅಲ್ಪಸಂಖ್ಯಾತರಿಗೆ, ಡಾ//ಬಿ.ಆರ್ ಅಂಬೇಡ್ಕರ್ ರವರುದೇವರ ಸಮಾನ,ನಮಗೆ ಆತ್ಮಗೌರವ ನೀಡಿದ,ಭೂಮಿಯ ಮೇಲೆ ಸ್ವಾಭಿಮಾನದಿಂದ ಬದುಕಲು ಅವಕಾಶ ಕಲ್ಪಿಸಿದ, ದೇವರು ಅಂಬೇಡ್ಕರ್ ರವರು.ಅವರ ಸ್ಮರಣೆಯಿಂದ ನಮ್ಮ ಜನ್ಮ ಸಾರ್ಥಕ ಎಂದು ಭಾವಿಸಿದ್ದೇವೆ. ನಮ್ಮ ಭಾವನೆ ಹಾಗೂ ಭವ್ಯ ಭಾರತರ ದೇವರು ಅಂಬೇಡ್ಕರ್ ಬಗ್ಗೆ ಅರಿಯದೆ ಅವಿವೇಕದವಮಾತನಾಡಿರುವ ಅಮಿತ್ ಷಾ ಕೂಡಲೇ ರಾಜನಾಮೆ ನೀಡಬೇಕು.ಎಂದು ಒತ್ತಾಯಿಸಿದರು.
ಡಿಎಸ್ಎಸ್ ತಾಲ್ಲೋಕು ಸಂಚಾಲಕ ಯಗಚೀಕಟ್ಟೆ ರಾಘವೇಂದ್ರ ಮಾತನಾಡಿ ಡಾ//ಬಿ.ಆರ್ ಅಂಬೇಡ್ಕರ್ ಈ ದೇಶದ ಜ್ಞಾನ ಹಾಗೂ ಅಸ್ಮಿತೆಯ ಸಂಕೇತ,ದೇಶದ ಅರಾಧ್ಯದೈವ ಅಂಬೇಡ್ಕರ್ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವುದು ಖಂಡನೀಯ, ಪ್ರಧಾನ ಮಂತ್ರಿಗಳು ನೈತಿಕ ಹೊಣೆಹೊತ್ತು, ಕೂಡಲೇ ಅಮಿತ್ ಷಾ ರಾಜೀನಾಮೆ ಪಡೆಯಬೇಕು, ದೇಶದ ಕಾನೂನು ಪಾಲಿಸಬೇಕಾದ ವ್ಯಕ್ತಿಯೇ ಒಂದು ವರ್ಗದ ಓಲೈಕೆಗಾಗಿ, ಉದ್ಘಾಟತನದಿಂದ ಮಾತನಾಡಿದ್ದಾರೆ, ಅಧಿಕಾರದ ಅಹಂಕಾರದಿಂದ ವರ್ತಿಸುತ್ತಿರುವ ಅಮಿತ್ ಷಾ ಗೆ ಕೆಲವೇ ದಿನಗಳಲ್ಲಿ ದೇಶದ ಬಹುಜನರ ಶಕ್ತಿಯನ್ನ ತೋರಿಸುತ್ತೇವೆ. ಕೋಡಲೇ ಅವರು ರಾಜೀನಾಮೆ ನೀಡಿ ಹೊರನಡೆಯಬೇಕು ಎಂದು ತಿಳಿಸಿದರು
ಡಿ.ಎಸ್ಎಸ್ ಅಂಬೇಡ್ಕರ್ ವಾದ ತಾಲ್ಲೋಕು ಸಂಚಾಲಕ ಜಕ್ಕನಹಳ್ಳಿ ಮೋಹನ್ ಮಾತನಾಡಿ ಅಂಬೇಡ್ಕರ್ ಈ ದೇಶದ ಅಸ್ಮಿತೆ ಜಗತ್ತಿನ ಬೆಳಕು, ಸಂವಿಧಾನದ ಅಡಿಯಲ್ಲಿ ಕೆಲಸ ನಿರ್ವಹಿಸುವ ನರೇಂದ್ರ ಮೋದಿಯವರೇ ಅಮಿತ್ ಷಾ ನಂತ ಅವಿವೇಕಿಯನ್ನ ಸಂಪುಟದಿಂದ ಕೈಬಿಡಿ,ನೀವೂ ಸಹ ಉದ್ಘಟತನ ತೋರಿದರೆ ಉಗ್ರಹೋರಾಟ ಮಾಡಬೇಕಾಗುತ್ತದೆ. ದೇವರ ಪೂಜೆ ನಿಮ್ಮ ವಯುಕ್ತಿಕ ಆಚರಣೆ, ಆದರೇ ಅವಿವೇಕದ ಮಾತಿನಿಂದ ಪ್ರಜಾಪ್ರಭುತ್ವದ ದೇವಾಲಯದಲ್ಲಿ ಉದ್ಘಟತನದಿಂದ ಮಾತನಾಡಿರುವ ಅವಿವೇಕಿ ರಾಜಿನಾಮೆ ನೀಡಬೇಕು ಎಂದು ಒತ್ತಾಯಿಸಿದರು
ಪ್ರತಿಭಟನೆಯಲ್ಲಿ ಮುಖಂಡರಾದ ಕಂಚಾಘಟ್ಟ ಸುರೇಶ್. ಅಂಬೇಡ್ಕರ್ ಸ್ವಾಭಿಮಾನಿ ಸಂಘದ ಅಧ್ಯಕ್ಷ ಶಿವಕುಮಾರ್ ಮತ್ತಿಘಟ್ಟ, ಕೊರಚ ಮಹಾಸಭಾ ಅಧ್ಯಕ್ಷ ಸತೀಶ್ ಡಿಎಸ್ಎಸ್ ಮಹಿಳಾ ಘಟಕ ಸಂಚಾಲಕಿ ನಂದಿನಿ .ಕವಿತ.ಭಾಗ್ಯ, ಜೈ ಭೀಮ್ ಚಲವಾದಿ ಸಂಘದ ಅಧ್ಯಕ್ಷ ಸ್ವಾಮಿ.ಜಿಲ್ಲಾ ಸಂಚಾಲಕ ನರಸಿಂಹ ಮೂರ್ತಿ.ಸತೀಶ್.ಡಿಎಸ್ಎಸ್ ಮುಖಂಡರಾದ ಅರಚನಹಳ್ಳಿ ಮಂಜುನಾಥ್. ತುರುವೇಕೆರೆ ಸಂಚಾಲಕ ಕೃಷ್ಣ, ಸಿ.ಎನ್ ಹಳ್ಳಿ ಸಂಚಾಲಕ ರಮೇಶ್ ಮುಂತ್ತಾದವರು ಉಪಸ್ಥಿತರಿದರು
ವರದಿ:ಮಂಜುನಾಥ್ ಹಾಲ್ಕುರಿಕೆ