KALPATHARU KRANTHI

ನಂಜುಂಡಪ್ಪ ವರದಿಯಿಂದ ತಿಪಟೂರು ತಾಲ್ಲೋಕಿಗೆ ಭಾರೀ ಅನ್ಯಾಯ : ಶಾಸಕ ಕೆ.ಷಡಕ್ಷರಿ

Spread the love

ತಿಪಟೂರು ತಾಲ್ಲೋಕು ಶೈಕ್ಷಣಿಕವಾಗಿ ಮುಂದುವರೆದಿದೆ ಆದರೆ ಆರ್ಥಿಕವಾಗಿ ಇನ್ನೂ ಹಲವಾರು ಕ್ಷೇತ್ರಗಳಲ್ಲಿ ಮುಂದುವರೆಯುವ ಅಗತ್ಯವಿದ್ದು ಸರ್ಕಾರ ಅನುದಾನ ನೀಡುವಾಗ, ನಂಜುಂಡಪ್ಪ ವರದಿಯನ್ನ ಪರಿಗಣಿಸುತ್ತಿದ್ದು, ತಿಪಟೂರು ಹೊರತುಪಡಿಸಿ ಜಿಲ್ಲೆಯ ಎಲ್ಲಾ ತಾಲ್ಲೋಕುಗಳ ನಂಜುಡಪ್ಪ ವರದಿಯಂತೆ ಹಿಂದುಳಿದ ತಾಲ್ಲೋಕುಗಳಾದರೆ ತಿಪಟೂರು ಮಾತ್ರ ಮುಂದುವರೆದ ತಾಲ್ಲೋಕು ಎಂದು ಗುರ್ತಿಸಿದ್ದಾರೆ, ನಂಜುಂಡಪ್ಪ ಆಯೋಗದ ವರದಿಯಿಂದ ನಮಗೆ ಅನ್ಯಾಯವಾಗಿದ್ದು, ವರದಿಯನ್ನ ಪುನರ್ ಪರಿಶೀಲನೆ ಮಾಡಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದ್ದೇನೆ ಎಂದು ಶಾಸಕ ಕೆ.ಷಡಕ್ಷರಿ ತಿಳಿಸಿದರು

ತುಮಕೂರು ಜಿಲ್ಲೆ ತಿಪಟೂರು ನಗರದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಸ್ಟೆಲ್ ಆವರಣದಲ್ಲಿ ನಡೆದ ಹಿಂದುಳಿದ ವರ್ಗಗಳ ವಿದ್ಯಾರ್ಥಿನಿಲಯಗಳ ವಿದ್ಯಾರ್ಥಿಗಳಿಗೆ ಸ್ಪೋಕನ್ ಇಂಗ್ಲೀಷ್ ಹಾಗೂ ವ್ಯಕ್ತಿತ್ವ ವಿಕಸನ ತರಬೇತಿಗೆ ಕಾರ್ಯಕ್ರಮಕ್ಕೆ ಜ್ಯೋತಿಬೆಳಗಿಸುವ ಮೂಲಕ ಶಾಸಕ ಕೆ.ಷಡಕ್ಷರಿ ಚಾಲನೆ ನೀಡಿದರು

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಶಿಕ್ಷಣಮತ್ತು ಆರೋಗ್ಯ ಸರ್ಕಾರದ ಮೊದಲ ಆಧ್ಯತೆ ದೇಶದ ಪ್ರತಿಯೊಬ್ಬರಿಗೆ ಉತ್ತಮ ಶಿಕ್ಷಣ ದೊರೆಯಬೇಕು ಎನ್ನುವ ನಿಟ್ಟಿನಲ್ಲಿ ಹಲವಾರು ಯೋಜನೆಗಳನ್ನ ರೂಪಿಸಿದ್ದು ಗ್ರಾಮೀಣ ಭಾಗದಲ್ಲಿ ಹಾಸ್ಟೆಲ್ ವಿಧ್ಯಾರ್ಥಿಗಳಿಗೆ ಸ್ಪೋಕನ್ ಇಂಗ್ಲೀಶ್ ಹಾಗೂ ವ್ಯಕ್ತಿತ್ವ ವಿಕಸನ ತರಬೇತಿ ನೀಡುವ ಯೋಜನೆ ರೂಪಿಸಿದ್ದು ವಿದ್ಯಾರ್ಥಿಗಳ ಯೋಜನೆ ಸದುಪಯೋಗ ಪಡಿಸಿಕೊಳ್ಳ ಬೇಕು.

ವಿದ್ಯಾರ್ಥಿಗಳ ಶೈಕ್ಷಣಿಕ ಜೀವನದಲ್ಲಿ ಶಿಸ್ತು ಮುಖ್ಯ ಶಿಸ್ತು ರೂಢಿಸಿಕೊಂಡಗ ನಿಮ್ಮ ಸಾಧನೆಗೆ ದಾರಿಯಾಗುತ್ತದೆ,ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಕಡಿಮೆ ನಗರ ಭಾಗದ ವಿದ್ಯಾರ್ಥಿಗಳು ಹೆಚ್ಚು ಎನ್ನುವ ಭಾವನೆ ಕೈಬಿಡಿ ನಿರಂತರ ಪರಿಶ್ರಮದಿಂದ ಅಧ್ಯಯನ ಮಾಡಿದಾಗ, ಸಾಧನೆ ಮಾಡಲು ಸಹಕಾರಿಯಾಗುತ್ತದೆ.ಎಂದು ತಿಳಿಸಿದರು.

ನಗರಸಭೆ ಅಧ್ಯಕ್ಷೆ ಯಮುನಾಧರಣೇಶ್ ಮಾತನಾಡಿ ವಿದ್ಯಾರ್ಥಿಗಳ ಶೈಕ್ಷಣಿಕ ಜೀವನದಲ್ಲಿ ಶಿಸ್ತು ಮತ್ತು ಶ್ರದ್ದೆಯಿಂದ ನಿರಂತರ ವಿದ್ಯಾಭ್ಯಾಸ ನಿಮ್ಮ ಇಡೀ ಜೀವನವನ್ನ ರೂಪಿಸುವ ಸಮಯವಾಗಿದೆ, ವಿದ್ಯಾರ್ಥಿಗಳ ಜಾಗರೂಕರಾಗಿ, ವಿದ್ಯಾಭ್ಯಾಸದ ಕಡೆ ಗಮನಹರಿಸಿ,ಗ್ರಂಥಾಲಯಗಳಲ್ಲಿ ಹೆಚ್ಚು ಸಮಯಕಳೆಯಿರಿ,ಎಂದು ತಿಳಿಸಿದರು

ಕಾರ್ಯಕ್ರಮದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾಧಿಕಾರಿ ಸೋನಿಯಾ ವರ್ಣೇಕರ್ ಮಾತನಾಡಿ ಸರ್ಕಾರ ವಿಧ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಜೊತೆಗೆ, ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಅಗತ್ಯವಿರುವ ಎಲ್ಲಾ ಸೌಕರ್ಯಗಳನ್ನ ನೀಡುತ್ತದೆ, ಸರ್ಕಾರ ಸೌಲಭ್ಯ ಬಳಕೆ ಮಾಡಿಕೊಳ್ಳಿ, ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ವಿದ್ಯಾರ್ಥಿಗಳು ಐಎಎಸ್ ಕೆಎಎಸ್ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದಾರೆ, ನಿಮ್ಮಿಂದ ಯಾವ ಸಾಧನೆ ಬೇಕಾದರೂ ಮಾಡಬಹುದು. ನೀವು ಕೀಳಿರಿಮೆ ಬಿಟ್ಟು ಛಲದಿಂದ ವಿದ್ಯಾಭ್ಯಾಸ ಮಾಡಿ, ಎಂದು ತಿಳಿಸಿದರು

ಕಾರ್ಯಕ್ರಮದಲ್ಲಿ ತಿಪಟೂರು ಉಪವಿಭಾಗಾಧಿಕಾರಿಶ್ರೀಮತಿ ಸಪ್ತಶ್ರೀ ಹಿಂದುಳಿದವರ್ಗಗಳ ಕಲ್ಯಾಣ ಇಲಾಖೆ ತಾಲ್ಲೋಕು ಅಧಿಕಾರಿಶ್ರೀಮತಿ ಜಲಜಾಕ್ಷಮ್ಮ.ತಿಪಟೂರು ಎಆರ್ ಟಿಒ ಇನ್ಪೆಕ್ಟರ್ ಕಿರಣ್.ನಗರಸಭೆ ಸದಸ್ಯ ಲೋಕನಾಥ್ ಸಿಂಗ್ ಮುಂತ್ತಾದವರು ಉಪಸ್ಥಿತರಿದರು

ವರದಿ : ಮಂಜುನಾಥ್ ಹಾಲ್ಕುರಿಕೆ

ಜಾಹಿರಾತು

Exit mobile version