KALPATHARU KRANTHI

ಮೈಕ್ರೋಫೈನಾನ್ಸ್ ಹಾವಳಿಗೆ ಕಡಿವಾಣ ಹಾಕಲು ಕುಂದೂರು ತಿಮ್ಮಯ್ಯ ಒತ್ತಾಯ

Spread the love

ತಿಪಟೂರು: ರಾಜ್ಯದಲ್ಲಿ ಹಾಗೂ ಜಿಲ್ಲೆಯಲ್ಲಿ ಮೈಕ್ರೋ ಫೈನಾನ್ಸ್ ಹಾವಳಿಯಿಂದ ಮಹಿಳೆಯರು ದೌರ್ಜನ್ಯಕೊಳಗಾಗುತ್ತಿದ್ದು ರಾಜ್ಯಸರ್ಕಾರ ಮೈಕ್ರೋ ಫೈನಾನ್ಸ್ ಅನುಮತಿಯನ್ನ ರದ್ದುಗೊಳಿಸಬೇಕು ಹಾಗೂ ಸಾಲವಸೂಲಿಗೆ ಗುಂಡಾಗಿರಿ ನಡೆಸುತ್ತಿರುವ,ಮೈಕ್ರೋಪೈನಾನ್ಸ್ ಗಳ ವಿರುದ್ದ ಪ್ರಕರಣ ದಾಖಲಿಸ ಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ ) ರಾಜ್ಯಸಮಿತಿ ಸದಸ್ಯ ಕುಂದೂರು ತಿಮ್ಮಯ್ಯ ಒತ್ತಾಯಿಸಿದರು


ನಗರದ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ ಪತ್ರಿಕಾ ಘೋಷ್ಠಿಯಲ್ಲಿ ಮಾತನಾಡಿದ ಕುಂದೂರು ತಿಮ್ಮಯ್ಯ ರಾಜ್ಯದಲ್ಲಿ ಮೈಕ್ರೋ ಪೈನಾನ್ಸ್ ಗಳು ಮಹಿಳೆಯರ ಮೇಲೆ ಗುಂಡಾಗಿರಿ ದೌರ್ಜನ್ಯ ನಡೆಸುತ್ತಿವೆ, ಜಿಲ್ಲೆಯಲ್ಲಿ ಸುಮಾರು 125ಜನ ಮಹಿಳೆಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಸಾವಿರಾರು ಜನ ಮರ್ಯಾದೆಗೆ ಅಂಜಿ, ಮನೆಮಠತೊರೆದು,ಊರು ಬಿಟ್ಟಿದ್ದಾರೆ,ಮಹಿಳೆಯರ ಸಮಸ್ಯೆಗಳನ್ನ ಹಾಲಿಸಿದ ಕರ್ನಾಟಕ ದಲಿತ ಸಂಘರ್ಷ ಸಮಿತಿಗೆ ಮೈಕ್ರೋಪೈನಾನ್ಸ್ ಗಳಿಗೆ, ಆಗುತ್ತಿರು ದೌರ್ಜನ್ಯ ಹಾಗೂ ಫೈನಾನ್ಸ್ ಗಳ ಕರಾಳಮುಖ ದರ್ಶನವಾಯಿತು, ನೊಂದಮಹಿಳೆಯರ ಪರವಾಗಿ ತಿಪಟೂರಿನಲ್ಲಿ ಆರಂಭವಾದ ಹೋರಾಟ ಇಂದು ರಾಜ್ಯದಾದ್ಯಂತ ಜನಚಳುವಳಿಯಾಗಿ ರೂಪುಗೊಳುತ್ತಿದ್ದು, ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಮಹಿಳೆಯರು ಸಂಘಟಿತರಾಗಿ ಹೋರಾಟಕ್ಕೆ ಇಳಿದಿದ್ದಾರೆ, ಕರಾವಳಿ ಭಾಗ,ಮಂಡ್ಯ ಮೈಸೂರು ಚಿತ್ರದುರ್ಗ, ಸೇರಿದಂತೆ ಹಲವಾರುಕಡೆ ಹೋರಾಟಗಳು ನಡೆಯುತ್ತಿವೆ, ಮೊನ್ನೆ ಬೆಳಗಾವಿ ವಿಧಾನಸಭಾ ಅಧಿವೆಷನದಲ್ಲಿ ಅರಸಿಕೆರೆ ಶಾಸಕ ಕೆ.ಎಂ ಶಿವಲಿಂಗೇಗೌಡರು ಸಮಾಜದಲ್ಲಿ ಮೈಕ್ರೋ ಪೈನಾನ್ಸ್ ಗಳು ಮಹಿಳೆಯರ ಮೇಲೆ ನಡೆಸುತ್ತಿರು ದೌರ್ಜನ್ಯ ದಬ್ಬಾಳಿಕೆಯನ್ನ ವಸ್ತು ನಿಷ್ಠವಾಗಿ ಚರ್ಚೆ ಮಾಡಿ ಸದನಕ್ಕೆ ಮನವರಿಕೆ ಮಾಡಿದ್ದಾರೆ, ಅದೇ ರೀತಿ ನರೇಂದ್ರಸ್ವಾಮಿ ಸಹ ಸದನದಲ್ಲಿ ಧ್ವನಿ ಎತ್ತಿದ್ದು ಶಾಸಕ ಶಿವಲಿಂಗೇಗೌಡರ ಜನಪರ ಕಾಳಜಿಗೆ ದಸಂಸ ಅಭಿನಂದನೆ ಸಲ್ಲಿಸುತ್ತದೆ, ಸದಸ್ಯರ ಪ್ರಶ್ನೆಗೆ ಉತ್ತರಿಸಿದ ಕಂದಾಯ ಸಚಿವ ಕೃಷ್ಣ ಭೈರೇಗೌಡ ಸಹ ಮೈಕ್ರೋ ಫೈನಾನ್ಸ್ ಹಾವಳಿಗೆ ಕಡಿವಾಣ ಹಾಕಲು,ಸೂಕ್ತ ಕಾನೂನು ರೂಪಿಸುವ ಬರವಸೆ ನೀಡಿರುವುದು ಹೋರಾಟಗಾರರಲಿ ಹಾಗೂ ಮಹಿಳೆಯರಲ್ಲಿ ಆತ್ಮವಿಶ್ವಾಸ ಹೆಚ್ಚಿಸಿದೆ

ಮೈಕ್ರೋ ಫೈನಾನ್ಸ್ ಗಳಿಂದ ಮಹಿಳೆಯರ ಮೇಲೆ ದೌರ್ಜನ್ಯಗಳಾಗುತ್ತಿರುವ ಬಗ್ಗೆ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾಪೊಲೀಸ್ ವರೀಷ್ಠಾಧಿಕಾರಿಗಳನ್ನ ಭೇಟಿ ಮಾಡಿ,ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ಬಗ್ಗೆ ಮನವರಿಕೆ ಮಾಡಲಾಗಿದೆ, ಮೇಲಾಧಿಕಾರಿಗಳು ಸೂಚಿಸಿದರೂ, ಸ್ಥಳೀಯ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಿಸಿ ಕ್ರಮವಹಿಸಲು ಹಿಂದೇಟು ಹಾಕುತ್ತಿದ್ದಾರೆ, ಪೊಲೀಸ್ ಇಲಾಖೆಯ ನಡೆ , ಅನುಮಾನಕ್ಕೆ ಕಾರಣವಾಗಿದ್ದು ,ಸ್ಥಳೀಯವಾಗಿ ಮೈಕ್ರೊಪೈನಾನ್ಸ್ ಗಳ ಜೊತೆ ಒಳ ಒಪ್ಪಂದ ಮಾಡಿಕೊಂಡಿರುವ ಅನುಮಾನವಿದೆ, ಠಾಣೆ ಹಂತದ ಅಧಿಕಾರಿಗಳು ,ಮೈಕ್ರೋ ಫೈನಾನ್ಸ್ ಗಳು ದೌರ್ಜನ್ಯ ನಡೆಸಿದ್ದಾಗ ಯಾರದರೂ ಮಹಿಳೆಯರು ದೂರುನೀಡಿದರೇ ಕಾನೂನು ಕ್ರಮಕೈಗೊಳಬೇಕು, ಸರ್ಕಾರ ಮೈಕ್ರೋ ಫೈನಾನ್ಸ್ ಲೈಸೆನ್ಸ್ ರದ್ದುಗೊಳಿಸಿ ,ದೌರ್ಜನ್ಯದಿಂದ ಪ್ರಣಕಳೆದುಕೊಂಡ ಕುಟುಂಬಗಳಿಗೆ ಪರಿಹಾರ ನೀಡಲು, ರಾಜ್ಯಾಧ್ಯಕ್ಷರಾದ ಮಾವಳ್ಳಿ ಶಂಕರ್ ಅವರನೊಳ್ಳ ನಿಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯ ನವರನ್ನ ಭೇಟಿ ಮಾಡಿ, ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ಮನವಿ ಮಾಡಲಾಗುವುದು ಎಂದು ತಿಳಿಸಿದರು.

ಮಹಿಳೆ ಘಟಕದ ತಾಲ್ಲೋಕು ಅಧ್ಯಕ್ಷೆ ನಂದಿನಿ ಮಾತನಾಡಿ ಮೈಕ್ರೋ ಫೈನಾನ್ಸ್ ಗಳು ಸಾಲವಸೂಲಿಗೆ ಗುಂಡಾಗಿರಿ ಮಾಡುತ್ತಿರುವುದು ಸರಿಯಲ್ಲ, ಮೈಕ್ರೋ ಫೈನಾನ್ಸ್ ಹಾವಳಿಯಿಂದ ನೂರಾರು ಜನ ಆತ್ಮಹತ್ಯೆ ಮಾಡಿಕೊಂಡಿದು ಸರ್ಕಾರ ಮೈಕ್ರೋ ಫೈನಾನ್ಸ್ ನಿಷೇದಿಸ ಬೇಕು, ಹಾಗೂ ಕಠಿಣ ಕಾನೂನು ರೂಪಿಸಬೇಕು, ಅರಸೀಕೆರೆ ಶಾಸಕರು ಜನಪರವಾಗಿ ಸದನದಲ್ಲಿ ಧ್ವನಿಎತ್ತಿರುವುದು ಅಭಿನಂದನೀಯ ಎಂದು ತಿಳಿಸಿದರು.
ದಸಂಸ ತಾಲ್ಲೋಕು ಸಂಚಾಲಕ ಮೋಹನ್ ಜಕ್ಕನಹಳ್ಳಿವಮಾತನಾಡಿ ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಕಿರುಕುಳ ಜಾಸ್ತಿಯಾಗಿದೆ. ಮಹಿಳೆಯರ ಮೇಲೆ ಕುಂದೂರು ತಿಮ್ಮಯ್ಯ ನವರ ನೇತೃತ್ವದಲ್ಲಿ ಹೋರಾಟ ರೂಪಿಸಿದ ಪರಿಣಾಮ ಮಹಿಳೆಯರು ಮೈಕ್ರೋ ಫೈನಾನ್ಸ್ ದೌರ್ಜನ್ಯಗಳ ವಿರುದ್ದ ಧ್ವನಿಎತ್ತುತ್ತಿದ್ದಾರೆ.ನಮ್ಮ ಹೋರಾಟವನ್ನು ಇನ್ನು ಪ್ರಭಲವಾಗಿ ರೂಪಿಸುತ್ತಿದ್ದು , ಮೈಕ್ರೋಫೈನಾನ್ಸ್ ಗಳನ್ನ ನಿಷೇದಿಸುವ ವರೆಗೆ ನಮ್ಮ ಹೋರಾಟ ನಿರಂತರವಾಗಿರುತ್ತದೆ ಎಂದು ತಿಳಿಸಿದರು

ಪತ್ರಿಕಾ ಘೋಷ್ಠಿಯಲ್ಲಿ ದಸಂಸ ತಾಲ್ಲೋಕು ಸಂಚಾಲಕ ಮೋಹನ್ ಜಕ್ಕನಹಳ್ಳಿ ,ಮಹಿಳಾ ಘಟಕ ತಾಲ್ಲೋಕು ಸಂಚಾಲಕಿ ನಂದಿನಿ.ಸಂಘಟನಾ ಸಂಚಾಲಕಿ ಮಂಜುಳ.ಸಂಘಟನಾ ಸಂಚಾಲಕ ಗಡಬನಹಳ್ಳಿ ಚಂದ್ರಶೇಖರ್.ಯಗಚೀಕಟ್ಟೆ ಮೂರ್ತಿ,ಚಿಕ್ಕನಾಯ್ಕನಹಳ್ಳಿ ಸಂಘಟನಾ ಸಂಚಾಲಕ ರಮೇಶ್ ಯರೇಕಟ್ಟೆ,ಇರ್ಫಾನ್ ತಿಪಟೂರು ತಾಲ್ಲೋಕು ಕಾರ್ಯದರ್ಶಿ ಕವಿತಾ ಭವ್ಯ, ಹ್ಯೂಮನ್ ರೈಟ್ಸ್. ಇನ್ಪರ್ಮೇಷನ್ ಕಮಿಟಿ ಅಧ್ಯಕ್ಷೆ ಶಮಾ ಫರ್ಮಿನ್.ಮುಂತ್ತಾದವರು ಉಪಸ್ಥಿತರಿದರು

ವರದಿ:ಮಂಜುನಾಥ್ ಹಾಲ್ಕುರಿಕೆ

Exit mobile version