
ತುಮಕೂರು ಜಿಲ್ಲೆ ತಿಪಟೂರು ನಗರದ ಫಲಾಘಟ್ಟಿ ಬಡಾವಣೆಯಲ್ಲಿ ನೂತನವಾಗಿ ಮಂಜುರಾಗಿರುವ ವಾಲ್ಮಿಕಿ ಸಮುದಾಯ ಭವನಕ್ಕೆ ಸರ್ಕಾರ ಲ್ಯಾಂಡ್ ಆರ್ಮಿ ಸುಮಾರು ಎರಡು ಕೋಟಿ ವೆಚ್ಚದ ಕಾಮಗಾರಿ ಹಾಗೂ ಹೇಮಾವತಿ ಟಿಎಸ್ಪಿ ಅನುದಾನ 1ಕೋಟಿ ಸೇರಿ ಒಟ್ಟು 3ಕೋಟಿ ವೆಚ್ಚದಲ್ಲಿ ವಾಲ್ಮಿಕಿ ಭವನ ಕಾಮಗಾರಿ ಪ್ರಗತಿಯಲ್ಲಿದ್ದು ಕಾಮಗಾರಿಯನ್ನ ಕಳಪೆ ಗುಣಮಟ್ಟದ ವಸ್ತುಗಳಿಂದ ನಿರ್ಮಾಣ ಮಾಡಲಾಗುತ್ತಿದೆ. ಕಾಮಗಾರಿಗೆ ಬಳಕೆ ಮಾಡಿರುವ ಸಿಮೆಂಟ್ ,ಇಟ್ಟಿಗೆ, ಕಳೆಪೆಯಾಗಿದು, ಡಸ್ಟ್ ಬಳಸಿ ಕಾಮಗಾರಿ ಮಾಡಲಾಗುತ್ತಿದೆ.
ಕಾಮಗಾರಿಗೆ ಬಳಸಿರುವ ಇಟ್ಟಿಗೆಗಳು ನೀರಿನಲ್ಲಿ ಕರಗುತ್ತಿದೆ.ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ
ಕೆಆರ್ಡಿಎಲ್ ಹಾಗೂ ಹೇಮಾವತಿ ಅನುದಾನದ ಗುತ್ತಿಗೆಯನ್ನ ಚಿಕ್ಕಬಳ್ಳಾಪುರ ಮೂಲದ ರಾಮಿರೆಡ್ಡಿ ಗುತ್ತಿಗೆ ಪಡೆದಿದ್ದು .
ಕಾಮಗಾರಿಯನ್ನು ಅತ್ಯಂತ ಕಳಪೆಗುಣಮಟ್ಟದಲ್ಲಿ ಮಾಡಲಾಗುತ್ತಿದೆ ಎಂದು ವಾಲ್ಮಿಕಿ ಸಮುದಾಯದ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.
ವಾಲ್ಮಿಕಿ ಸಮುದಾಯದ ಮುಖಂಡ ಜಯಸಿಂಹ ಮಾತನಾಡಿ ಪರಿಶಿಷ್ಟ ಜಾತಿ ವಾಲ್ಮಿಕಿ ಭವನ ನಿರ್ಮಾಣಕ್ಕೆ ಸರ್ಕಾರ ಅನುದಾನ ನೀಡಿದೆ ಆದರೆ ಕಟ್ಟಡದ ಬೆಸ್ಮೆಂಟ್ ನಿರ್ಮಾಣಕ್ಕೆ ಕಲ್ಲಿನ ಬದಲಾಗಿ ಇಟ್ಟಿಗೆಯಿಂದ ನಿರ್ಮಾಣ ಮಾಡಲಾಗಿದ್ದು ಕಟ್ಟಡ ಸೀಪೇಜ್ ಬಂದಿದೆ.
ಇಟ್ಟಿಗೆಗಳು ಅತ್ಯಂತ ಕಳಪೆ ಗುಣಮಟ್ಟದಿಂದ ಕೂಡಿದ್ದು , ಮಳೆಬಂದಾಗ ಇಟ್ಟಿಗೆಗಳು ಕರಗುತ್ತಿವೆ, ಪಿಲ್ಲರ್ ಗಳಿಗೆ ಸರಿಯಾದ ಕ್ಯಾರಿಂಗ್ ಮಾಡಿಲ್ಲ,ನಗರದ ಯುಜಿಡಿ ಕೊಳಚೆ ನೀರನ್ನ ಕಾಮಗಾರಿಗೆ ಬಳಕೆ ಮಾಡಿದ್ದಾರೆ ಕಳಪೆಗಾಮಗಾರಿಯಿಂದ ಕಟ್ಟಡ ಗುಣಮಟ್ಟ ಕಳೆದುಕೊಂಡಿದೆ ಆಕ್ರೋಶ ವ್ಯಕ್ತಪಡಿಸಿದರು.
ಸ್ಥಳಕ್ಕೆ ಆಗಮಿಸಿ ಕಟ್ಟಡ ಕಾಮಗಾರಿ ಪರಿಶೀಲನೆ ಮಾಡಿದ ಉಪವಿಭಾಗಾಧಿಕಾರಿ ಶ್ರೀಮತಿ ಸಪ್ತಶ್ರೀ ಮಾತನಾಡಿ ಸಮುದಾಯದ ಮುಖಂಡರ ಮನವಿಯಂತೆ ವಾಲ್ಮಿಕಿ ಭವನ ಕಾಮಗಾರಿ ಸ್ಥಳಪರಿಶೀಲನೆ ಮಾಡಿದ್ದೇವೆ ಕಾಮಗಾರಿಗೆ ಬಳಕೆ ಮಾಡಿದ ವಸ್ತುಗಳನ್ನ ಸಂಗ್ರಹಿಸಿ ಲ್ಯಾಬ್ ಗೆ ಕಳಿಸಿ ತಾಂತ್ರಿಕ ಪರಿಣಿತರ ವರದಿಯಂತೆ ಜಿಲ್ಲಾಧಿಕಾರಿಗಳಿಗೆ ವರದಿನೀಡಿ,ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದರು
ತಹಸೀಲ್ದಾರ್ ಪವನ್ ಕುಮಾರ್ ಸ್ಥಳಪರೀಶೀಲನೆ ಮಾಡಿ ಕಟ್ಟಡ ಕಳಪೆಯಾಗಿರುವ ಬಗ್ಗೆ ಮೆಲ್ನೋಟಕ್ಕೆ ಕಂಡುಬಂದಿದ್ದು, ತಾಂತ್ರಿಕ ಪರಿಣಿತರ ವರದಿ ಬರುವವರೆಗೆ ಕಾಮಗಾರಿ ನಿಲ್ಲಿಸುವಂತೆ ಸೂಚಿಸಿದ್ದೇವೆ ಮೇಲಾಧಿಕಾರಿಗಳ ಸೂಚನೆಯಂತೆ ಕ್ರಮವಹಿಸುತ್ತೇವೆ ಎಂದರು
ಕಾಮಗಾರಿ ಸ್ಥಳಪರಿಶೀಲನೆ ವೇಳೆ ನಗರಸಭಾ ಸದಸ್ಯ ಮಹೇಶ್.ಮುಖಂಡರಾದ ಜಯಸಿಂಹ, ಸೀತಾರಾಮನಾಯ್ಕ.ಮಂಜುನಾಥ್ ನಾಗರಾಜು, ಮಹಲಿಂಗನಾಯ್ಕ ಮುಂತ್ತಾದವರು ಉಪಸ್ಥಿತರಿದರು
ವರದಿ:ಮಂಜುನಾಥ್ ಹಾಲ್ಕುರಿಕೆ