KALPATHARU KRANTHI

ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಮಾಯವಾದ ಆಂತರಿಕ ಶಿಸ್ತು. ಕೈಕಟ್ಟಿಕುಳಿತ ಆಡಳಿತ ಮಂಡಳಿ. ಹಿರಿಯ ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ತೀರ್ಥಕುಮಾರ್ ಆರೋಪ

Spread the love

ತಿಪಟೂರು:ನಗರದ ಸರ್ಕಾರಿ ಪ್ರಥಮದರ್ಜೆ ಕಾಲೇಜು ರಾಜ್ಯದ ಪ್ರತಿಷ್ಠಿತ ಕಾಲೇಜುಗಳಲ್ಲಿ ಒಂದು,ಸುಮಾರು 4ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುವ ಕಾಲೇಜಿನಲ್ಲಿ ಶಿಸ್ತು ,ಉಲಂಗನೆಯಾಗಿದ್ದು, ಕಾಲೇಜು ಶಿಸ್ತು ಸಮಿತಿ ನಾಮಕಾವಸ್ತೆಗೆ ಕೆಲಸ ಮಾಡುತ್ತಿದೆ ಎಂದು ಸರ್ಕಾರಿ ಹಿರಿಯ ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ತೀರ್ಥಕುಮಾರ್ ಆರೋಪಿಸಿದರು
ನಗರದ ಕೌಸ್ತುಭ ಹೋಟೆಲ್ ಸಭಾಂಗಣದಲ್ಲಿ ಆಯೋಜಿಸಿದ ಪತ್ರಿಕಾ ಘೋಷ್ಠಿಯಲ್ಲಿ ಮಾತನಾಡಿದ ಅವರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಪ್ರತಿದಿನ ಸಾವಿರಾರು ವಿದ್ಯಾರ್ಥಿಗಳು ಭವಿಷ್ಯ ರೂಪಿಸಿಕೊಳ್ಳಲು. ಬರುತ್ತಾರೆ, ಪೋಷಕರು ಸಹ ತಮ್ಮ ಮಕ್ಕಳ ಮೇಲೆ ಭವಿಷ್ಯದ ಕನಸ್ಸುಗಳನ್ನ ಇಟ್ಟುಕೊಂಡು ಕಾಲೇಜಿಗೆ ಕಳಿಸುತ್ತಿದ್ದು, ಕಳೆದ ಮೂರ್ನಾಲ್ಕು ದಿನಗಳ ಹಿಂದೆ,ಕಾಲೇಜು ಆವರಣದಲ್ಲಿ ನಡೆದಿರುವ, ಗುಂಪುಹಲ್ಲೇ ಪ್ರಕರಣ ವಿದ್ಯಾರ್ಥಿಗಳು ಹಾಗೂ ಪೋಷಕರಲ್ಲಿ ಆತಂಕ ಉಂಟುಮಾಡಿದೆ,ಕಾಲೇಜು ಆವರಣದೊಳಕ್ಕೆ ಹೊರಗಿನ ವಿದ್ಯಾರ್ಥಿಗಳು ಹಾಗೂ ಕೆಲ ಪುಂಡರು ಪ್ರವೇಶ ಮಾಡುತ್ತಿದ್ದಾರೆ, ಗುಂಪುಕಟ್ಟಿಕೊಂಡು ಗುಂಡಾಗಿರಿ ಮಾಡುತ್ತಿರುವ ಅನೇಕ ಪ್ರಕರಣಗಳು ನಡೆದಿವೆ. ಈ ಬಗ್ಗೆ ಕಾಲೇಜು ಆಡಳಿತ ಮಂಡಳಿ ಹಾಗೂ ಪ್ರಾಚಾರ್ಯರ ಗಮಕ್ಕೆ ತಂದರೂ,ಕ್ರಮವಹಿಸದೇ ಜಾಣಮೌನ ತಾಳಿದ್ದಾರೆ,ಪ್ರಾಚಾರ್ಯರ ಮೌನ ಕಾಲೇಜಿನಲ್ಲಿ ಪುಂಡಾಟಿಕೆ ಹೆಚ್ಚುವ ಆತಂಕ ಉಂಟುಮಾಡಿದೆ.ಈ ಹಿಂದೆ ಕಾಲೇಜಿನಲ್ಲಿ ಕಾರ್ಯನಿರ್ವಹಿಸಿದ ಜಯದೇವಪ್ಪ ನವರ ಕಾಲಾವಧಿಯಲ್ಲಿ ಕಾಲೇಜು ಶಿಸ್ತು ಬದ್ದವಾಗಿ, ನಡೆಯುತ್ತಿತ್ತು, ವಿದ್ಯಾರ್ಥಿ ವಿದ್ಯಾರ್ಥಿನಿಯರೊಂದಿಗೆ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಿ ಸಮಸ್ಯೆಗಳ ಪರಿಹಾರಕ್ಕೆ ಕ್ರಮವಹಿಸುತ್ತಿದ್ದರು ಆದರೆ ಇತ್ತಿಚಿನ ದಿನಗಳಲ್ಲಿ ಕಾಲೇಜಿನಲ್ಲಿ ಶಿಸ್ತು ಮಾಯವಾಗಿದ್ದು,ಕಾಲೇಜಿಗೆ ಹೊರಗಿನ ವ್ಯಕ್ತಿಗಳು ಪ್ರವೇಶಿಸುವುದು, ಕಾಲೇಜು ಆವರಣಕ್ಕೆ ಬೈಕ್ ತೆಗೆದುಕೊಂಡುಹೋಗಿ ವೀಲಿಂಗ್ ಮಾಡುವ ಕೃತ್ಯದಲ್ಲಿ ತೊಡಗಿದ್ದಾರೆ.
ಕಾಲೇಜು ಶಿಸ್ತು ಸಮಿತಿ ವಿದ್ಯಾರ್ಥಿಗಳಲ್ಲಿ ಶಿಸ್ತುಪಾಲನೆಗೆ ಕಟ್ಟುನಿಟ್ಟಿನ ಕ್ರಮವಹಿಸಬೇಕು.ಕಾಲೇಜು ಆವರಣದಲ್ಲಿ ಸೆಕ್ಯುರಿಟಿ ವ್ಯವಸ್ಥೆಗೊಳಿಸಿ, ಕಾಲೇಜು ಪ್ರವೇಶ ದ್ವಾರಲ್ಲಿ ಗುರುತಿನ ಚೀಟಿ ಪರಿಶೀಲನೆ ಮಾಡಿ ವಿದ್ಯಾರ್ಥಿಗಳು ಕಾಲೇಜು ಒಳಗೆ ಪ್ರವೇಶಿಸುವಂತೆ ಮಾಡಬೇಕು, ಕಾಲೇಜು ಒಳಗೆ ಹಾಗೂ ಹೊರಗೆ ಯಾವುದೇ ಅಹಿತಕರ ಘಟನೆಗಳು ನಡೆದರು ನಿರ್ಧಾಕ್ಷ್ಯಣ್ಯ ಕ್ರಮವಹಿಸ ಬೇಕು ಆಗಮಾತ್ರ ಹಳ್ಳಿಗಾಡಿನ ವಿದ್ಯಾರ್ಥಿಗಳು ನಿರ್ಭೀತಿಯಿಂದ ವಿದ್ಯಾಭ್ಯಾಸಕ್ಕೆ ಬರಲು ಸಾಧ್ಯವಾಗುತ್ತದೆ ಭವಿಷ್ಯತ್ ನಲ್ಲಿ .ರೌಡಿಸಂ.ಗುಂಡಾಗಿರಿ ರ್ಯಾಗಿಂಗ್ ನಂತಹ ಕೃತ್ಯಗಳು ನಡೆಯದಂತೆ ಕಡಿವಾಣ ಬಿಳಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು
ಪತ್ರಿಕಾ ಘೋಷ್ಠಿಯಲ್ಲಿ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಶರತ್,ಮುಖಂಡರಾದ ಶಿವಾನಂದ್ ಹೆಚ್.ಬಿ.ಭೂಷಣ್.ಬಾಬು.ಕುಮಾರ್ ಗಿರೀಶ್ ಮುಂತ್ತಾದವರು ಉಪಸ್ಥಿತರಿದರು

ವರದಿ:ಮಂಜುನಾಥ್ ಹಾಲ್ಕುರಿಕೆ

Exit mobile version