KALPATHARU KRANTHI

ಮೈರೋಮಾಂಚನಗೊಳಿಸಿದ ಕಾರ್ ರೇಸ್ ,ತಿಪಟೂರು ಗಡಿಯಲ್ಲಿ ಧೂಳೆಬ್ಬಿಸಿದ ಕಾರುಗಳು

Spread the love

ತುಮಕೂರು ಜಿಲ್ಲೆ ತಿಪಟೂರು ತಾಲ್ಲೋಕಿನ ಅರಣ್ಯದಂಚಿನ ಗಡಿಗ್ರಾಮಗಳಾದ ಹತ್ಯಾಳ್ ,ಗುಬ್ಬಿ ತಾಲ್ಲೋಕಿನ ಕಾರೇಕುರ್ಚಿ,ಕದಿರೇ ದೇವರಹಟ್ಟಿ ಭೋಮ್ಮರಸ‌ಹಳ್ಳಿ ಬಳಿ ಶನಿವಾರ ಹಾಗೂ ಭಾನುವಾರ ಆಯೋಜಿಸಿದ್ದ ಕರ್ನಾಟಕ ಕೆ.1000 ಕಾರು ರೇಸ್ ನಲ್ಲಿ ಕಲರವ ಪ್ರೇಕ್ಷಕರಮೈರೋಮಾಂಚನಗೊಳಿಸಿತು..ಪ್ರತಿ ವರ್ಷದಂತೆ ಈ ಭಾರಿಯೂ ಕಾರು ರೇಸ್ ಎರಡು ದಿನಗಳ ಕಾಲ ಪ್ರೇಕ್ಷಕರಿಗೆ ರಸದೌತಣನೀಡಿದವು.ಭೋಮ್ಮರಸನಹಳ್ಳಿ,ಶಿವಸಂದ್ರ ,ಕೊಂಡ್ಲಿ ,ಹತ್ಯಾಳ್ ತೀರ್ಥರಾಮ ಹಾಗೂ ಕಾರೇಕುರ್ಚಿಯ ರಸ್ತೆಗಳಲ್ಲಿ ಝಗ ಮಗಿಸುತ್ತಿದ್ದ ನಾನಾ ಮಾಡೇಲ್ ನ ಕಾರುಗಳ ವೇಗದ ಓಡಾಟ ರಸ್ತೆ ತಿರುವಿನಲ್ಲಿಯೂ ಬಗೆ ಬಗೆಯ ಕಲರ್ ನ ಕಾರುಗಳು ಸೌಂಡ್ ‌ಮಾಡಿಕೊಂಡು ಧೂಳೆಬ್ಬಿಸಿಕೊಂಡು ಹೋಗುತ್ತಿದ್ದ ದೃಶ್ಯಗಳು ಮೈ ಜುಮ್ಮೆನಿಸುವಂತಿತ್ತು.

ವಿಶೇಷವಾಗಿ ರಾಷ್ವ್ರೀಯ ಅಂತರ ರಾಷ್ವ್ರೀಯ ಮಟ್ಟದ ಸ್ಪರ್ಧಾಳುಗಳು ರೇಸ್ ನಲ್ಲಿ ಭಾಗವಹಿಸಿದ್ದರು.
ರೋಮಾಂಚನಕಾರಿಯಾಗಿದ್ದ ಕಾರು ರೇಸ್ ನೋಡಲು ಜನರು ರಸ್ತೆ ಬದಿ ತೋಟದ ಸಾಲಿನಲ್ಲಿ ನಿಂತು ಕುತೂಹಲದಿಂದ ಕಾಯುತ್ತಿದ್ದರು. ಕಾರ್ ಗಳು ಬರುತ್ತಿದಂತೆ ಸಿಳ್ಳೆ ಹೊಡೆದು ಚಪ್ಪಾಳೆ ತಟ್ಟಿ ಕಾರ್ ಗಳನ್ನ ಹುರಿದುಬ್ಬಿಸಿದರು.
ಕಾರ್ ರೇಸ್ ನಲ್ಲಿ ಸುಮಾರು 56 ಕಾರುಗಳು ಭಾಗವಹಿಸಿದ್ದವು.ರೇಸ್ ನಲ್ಲಿ ಮಹಿಳೆಯರು ಸ್ಪರ್ಧೆಯಲ್ಲಿ ಭಾಗವಹಿಸಿದ್ದು

ವರದಿ: ಸಂತೋಷ್ ಓಬಳ, ಗುಬ್ಬಿ

Exit mobile version