KALPATHARU KRANTHI

ತಿಪಟೂರು ಶಾರದ ನಗರ ಹಾಸನ ರಸ್ತೆ ಸಿ.ಎಲ್ 86 ರಸ್ತೆ ಮೇಲ್ಸೆತುವೆಗೆ 89.32ಕೋಟಿ ಮುಂಜೂರು

Spread the love

ತಿಪಟೂರು ನಗರದ ಹಾಸನ ರಸ್ತೆ ಶಾರದ ನಗರ ರೈಲ್ವೆ ಮೇಲ್ಸೇತುವೆ ನಿರ್ಮಾಣಮಾಡಬೇಕು, ಎನ್ನುವ ಬಹುದಿನಗಳ ಬೇಡಿಕೆಗೆ ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ಸಚಿವ ವಿ.ಸೋಮಣ್ಣ ನವರು 88.32ಕೋಟಿ ವೆಚ್ಚದ ಯೋಜನೆಗೆ ಕೇಂದ್ರ ರೈಲ್ವೆ ಇಲಾಖೆ ಮಂಜೂರಾತಿ ನೀಡಲು ಯಶಸ್ವಿಯಾಗಿದ್ದಾರೆ.

ತಿಪಟೂರು ನಗರದ ಹೃದಯ ಭಾಗ ಶಾರದಾ ನಗರ ಮೇಲ್ಸೇತುವೆ ಮತ್ತು ಹೊನ್ನವಳ್ಳಿ ಮೇಲ್ಸೇತುವೆ ಸಂಪೂರ್ಣ ರೇಲ್ವೆ ಇಲಾಖೆ ವೆಚ್ಚದಲ್ಲಿ ಮಂಜೂರು ಮಾಡಲಾಗಿದೆ.

ದಿನಾಂಕ 27.10.2024ರಂದು ಶ್ರೀ ವಿ. ಸೋಮಣ್ಣ, ಮಾನ್ಯ ಲೋಕಸಭಾ ಸಂಸದರು, ತುಮಕೂರು ಹಾಗೂ ರೇಲ್ವೆ ಹಾಗೂ ಜಲಶಕ್ತಿ ರಾಜ್ಯ ಸಚಿವರು, ಭಾರತ ಸರ್ಕಾರ ಇವರು ತಿಪಟೂರಿನಲ್ಲಿ ಭಾರತೀಯ ರೇಲ್ವೆ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ರಾಜ್ಯ ಸರ್ಕಾರಿ ಅಧಿಕಾರಿಗಳೊಂದಿಗೆ ಸಾರ್ವಜನಿಕ ಕುಂದು ಕೊರತೆ ಸಭೆ ನಡೆಸಿದ್ದರು.

ಈ ಸಂದರ್ಭದಲ್ಲಿ ಸಾರ್ವಜನಿಕರು ತಿಪಟೂರಿನ ಹೃದಯ ಭಾಗ ಶಾರದಾ ನಗರದಲ್ಲಿ ಮೇಲ್ಸೇತುವೆ (ಎಲ್.ಸಿ.86) ಮತ್ತು ಹೊನ್ನವಳ್ಳಿ ಮೇಲ್ಸೆತುವೆ (ಎಲ್.ಸಿ.88) ನಿರ್ಮಾಣ ಮಾಡಿಸಿಕೊಟ್ಟು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವಂತೆ ಮನವಿ ಮಾಡಿದ್ದರು. ಇದಕ್ಕೆ ಸ್ಪಂದಿಸಿದ ಕೇಂದ್ರ ಸಚಿವ ಸೋಮಣ್ಣನವರು ಸ್ಥಳದಲ್ಲಿ ರೇಲ್ವೆ ಅಧಿಕಾರಿಗಳಿಗೆ ಈ ಬಗ್ಗೆ ಕ್ರಮ ಜರುಗಿಸಲು ಆದೇಶ ನೀಡಿದ್ದರು.

ಇದಕ್ಕೆ ಸ್ಪಂದಿಸಿ, ರೇಲ್ವೆ ಬೋರ್ಡ್ ತಿಪಟೂರಿನ ಶಾರದಾ ನಗರದಲ್ಲಿ (ಎಲ್.ಸಿ. 86) ಮೇಲ್ಸೇತುವೆಯನ್ನು ಒಟ್ಟು ರೂ.89.32 ಕೋಟಿ ವೆಚ್ಚದಲ್ಲಿ ಮಂಜೂರು ಮಾಡಿ ಆದೇಶಿಸಿದೆ.

ಎಲ್.ಸಿ.ನಂ.88 ಹೊನ್ನವಳ್ಳಿ ಮೇಲ್ಸೇತುವೆ ರಾಜ್ಯ ಸರ್ಕಾರ ಮತ್ತು ರೇಲ್ವೆ ಇಲಾಖೆಯ ವೆಚ್ಚ ಹಂಚಿಕೆಯ ವಿಷಯದಲ್ಲಿ ನೆನೆಗುದಿಗೆ ಬಿದ್ದಿತ್ತು. ವಿ.ಸೋಮಣ್ಣ ನವರು
ಅಧಿಕಾರಿಗಳೊಂದಿ ಚರ್ಚಿಸಿ ಸಂಪೂರ್ಣ ವೆಚ್ಚವನ್ನು ರೇಲ್ವೆ ಬೋರ್ಡನಿಂದ ಮಂಜೂರು ಮಾಡಿಸಿ ಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಸಂಪೂರ್ಣ ರೇಲ್ವೆ ಇಲಾಖೆಯ ವೆಚ್ಚದಲ್ಲಿ ರೂ. 29.00 ಕೋಟಿ ಹೊನ್ನವಳ್ಳಿ ಮೇಲ್ಸೇತುವೆಗೆ ರೇಲ್ವೆ ಬೋರ್ಡ ಮಂಜೂರಾತಿ ನೀಡಿದೆ.

ತುಮಕೂರಿನ ಅಭಿವೃದ್ಧಿಗೆ ಸ್ಪಂದಿಸಿದ ಸನ್ಮಾನ್ಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರಿಗೆ ಮತ್ತು ರೇಲ್ವೆ ಸಚಿವ ಶ್ರೀ ಅಶ್ವಿನಿ ವೈಷ್ಣವ್ ಅವರಿಗೆ ಕೇಂದ್ರ ರೇಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವ ಸೋಮಣ್ಣ ಅಭಿನಂದನೆ ತಿಳಿಸಿದ್ದಾರೆ.


ವರದಿ:ಮಂಜುನಾಥ್ ಹಾಲ್ಕುರಿಕೆ

Exit mobile version