ತಿಪಟೂರು: ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕೆ ಎಲ್ ಎ ಸ್ಕೂಲ್ ಆಫ್ ಲಾ ಕಾಲೇಜಿನಿಂದ ಆಯೋಜಿಸಿದ್ದ ಮಾನವ ಹಕ್ಕುಗಳ ದಿನಾಚರಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷೀಯ ಭಾಷಣವಹಿಸಿ ಮಾತನಾಡಿದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶಿವಕುಮಾರ್ ಇತ್ತೀಚಿಗೆ ಬಾಂಗ್ಲಾದೇಶದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಇಂತಹ ಉಲ್ಲಂಘನೆಳಿಗೆ ಮಾನವ ಹಕ್ಕುಗಳ ಅರಿವು ಅಗತ್ಯವಾಗಿದೆ, ಕಾರ್ಮಿಕರ ಮಕ್ಕಳಿಗಾಗಿ ಹಲವಾರು ಶೈಕ್ಷಣಿಕ ಸೌಲಭ್ಯಗಳನ್ನು ಸರ್ಕಾರ ಒದಗಿಸುತ್ತಿದೆ ಇದು ಕೂಡ ಮಾನವೀಯ ಹಕ್ಕುಗಳ ಪ್ರಯೋಜನವಾಗಿದೆ, ನಮ್ಮ ಮೂಲಭೂತ ಹಕ್ಕುಗಳಿಗೆ ಧಕ್ಕೆ ಬಾರದಂತೆ ಮಾನವೀಯ ಹಕ್ಕುಗಳ ಅರಿತು ರಕ್ಷಣೆ ಮಾಡಬೇಕಾದ ಹೊಣೆಗಾರಿಕೆ ನಮ್ಮೆಲ್ಲರಿಗೂ ಇದೆ ಎಂದರು. ಕೆ ಎಲ್ ಎ ಸ್ಕೂಲ್ ಆಫ್ ಲಾ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಪ್ರೊ ಪ್ರಸನ್ನ ಹೆಚ್ ಎನ್ ಮಾತನಾಡಿ ಮಾನವ ಹಕ್ಕುಗಳ ಉಗಮ ಮತ್ತು ಇತಿಹಾಸದ ಹಂತಗಳನ್ನು ತಿಳಿಸಿ ಬದುಕುಳಿದಿರುವ ವ್ಯಕ್ತಿಯಿಂದ ಬಂಧನಕ್ಕೆ ಒಳಗಾದ ವ್ಯಕ್ತಿ ಗಳವರೆಗೂ ಮಾನವೀಯ ಹಕ್ಕುಗಳ ಬಲವಿದೆ ಇಂತಹ ಮಾನವೀಯ ಹಕ್ಕುಗಳ ಅರಿವು ಅಗತ್ಯವಾಗಿದೆ ವಿಶ್ವಸಂಸ್ಥೆಯ ಅಂಗಸಂಸ್ಥೆಯಾದ ಮಾನವ ಹಕ್ಕುಗಳ ಸಾರ್ವತ್ರಿಕ ಘೋಷಣೆಯನ್ನು(UDHR) 1948 ಡಿಸೆಂಬರ್ 10 ರಂದು ನಾಗರೀಕರಿಗೆ ಮಾನವೀಯ ಹಕ್ಕುಗಳನ್ನು ರಕ್ಷಿಸಲು ಜಾಗತೀಕವಾಗಿ ಜಾರಿಗೆ ತರಲಾಯಿತು. ಅಂತೆಯೇ ರಾಷ್ಟ್ರೀಯ ಹಾಗೂ ರಾಜ್ಯ ಮಾನವ ಹಕ್ಕುಗಳ ಆಯೋಗಳು ಸಕ್ರಿಯವಾಗಿವೆ. ಇಂದು” ನಮ್ಮ ಹಕ್ಕುಗಳು, ನಮ್ಮ ಭವಿಷ್ಯ, ಇದೀಗ” ಎಂಬ ಶಿರ್ಷಿಕೆಯಲ್ಲಿ ಆಚರಣೆ ಮಾಡಲಾಗುತ್ತಿದೆ, ನಮಗೆ ಸಾಂವಿಧಾನಿಕವಾಗಿ ದೊರೆಯಲ್ಪಟ್ಟ ಮೂಲಭೂತ ಹಕ್ಕುಗಳ ರಕ್ಷಣೆಗೆ ಮಾನವೀಯ ಹಕ್ಕುಗಳು ರಕ್ಷೆಯಾಗಿವೆ ಎಂದರು .
ಕಾರ್ಯಕ್ರಮದಲ್ಲಿ ಕೆ ಎಲ್ ಎ ಸ್ಕೂಲ್ ಆಫ್ ಲಾ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಪ್ರೊ ಪ್ರಸನ್ನ ಹೆಚ್ ಎನ್, ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶಿವಕುಮಾರ್ ಮತ್ತು ದೈಹಿಕ ಉಪನ್ಯಾಸಕರಾದ ಷಡಾಕ್ಷರಿ ಮತ್ತು ಇತಿಹಾಸ ಉಪನ್ಯಾಸಕರಾದ ಅಭಿಷೇಕ್ ಮತ್ತು ರಾಜ್ಯಶಾಸ್ತ್ರ ಉಪನ್ಯಾಸಕರಾದ ಪ್ರಕಾಶ್ ರವರು ಉಪಸ್ಥಿತರಿದ್ದರು ಹಾಗೂ ಸದರಿ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಕೆ ಎಲ್ ಎ ಸ್ಕೂಲ್ ಆಫ್ ಲಾ ಕಾಲೇಜಿನ ಕಾನೂನು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ವರದಿ: ಸಂತೋಷ್ ಓಬಳ. ಗುಬ್ಬಿ