KALPATHARU KRANTHI

ಅದ್ದೂರಿಯಾಗಿ ನಡೆದ ಹೊನ್ನವಳ್ಳಿ ಶ್ರೀ ಗುರು ರೇವಣಸಿದೇಶ್ವರ ಸ್ವಾಮಿಯ ಕಡೆ ಕಾರ್ತಿಕ ಮಹೋತ್ಸವ

Spread the love

ತಿಪಟೂರು ತಾಲೋಕಿನ ಹೊನ್ನವಳ್ಳಿ ಗ್ರಾಮದ ಶ್ರೀ ಗುರು ರೇವಣಸಿದೇಶ್ವ ಸ್ವಾಮಿಯ ಕಡೆ ಕಾರ್ತಿಕಕೋತ್ಸವದ ಅಂಗವಾಗಿ ಊರಿನ ಪ್ರಮುಖ ಬೀದಿಗಳಲ್ಲಿ ಕಾಗೀನೆಲೆ ಹೊಸದುರ್ಗ ಕನಕ ಗುರುಪೀಠ ಶಾಖಾಮಠದ ಪೀಠಾಧ್ಯಕರಾದ ಶ್ರೀಶ್ರೀ ಈಶ್ವರಾನಂದ ಪುರಿ ಮಹಾಸ್ವಾಮೀಗಳ ದಿವ್ಯಸಾನಿಧ್ಯದಲ್ಲಿ ಉತ್ಸವ ನಡೆಸಲಾಯಿತು. ಉತ್ಸವದಲ್ಲಿ ಸಾನಿಧ್ಯವಹಿಸಿದ ಶ್ರೀಗಳು ನಾಡಿನ ಸುಭೀಕ್ಷತೆಗೆ ಶುಭಹಾರೈಸಿದರು.

ಹೊನ್ನವಳ್ಳಿಯ ದೊಡ್ಡಹಟ್ಟಿ, ಶ್ರೀರಾಮನಗರ,ಶ್ರೀ ಮಂಜುನಾಥ ಬಡಾವಣೆ, ಕಂಚುಗಾರನಹಳ್ಳಿಯ ಕುರುಬಮಂಡಳಿಯವರಿಂದ ಸೋಮವಾರ ಶ್ರೀಗುರು ರೇವಣಸಿದೇಶ್ವ ಸ್ವಾಮಿ,ಕಾರ್ತಿಕಕ್ಕೆ ಆಗಮಿಸಿದ್ದ ಗ್ರಾಮ ದೇವರುಗಳು, ಬೀರದೇವರುಗಳಿಗೆ ಕುರುಬ ಮಂಡಳಿಯಿಂದ ವಿಶೇಷ ಪೂಜೆ ಸಲ್ಲಿಸಲಾಯಿತು.

ಮಂಗಳವಾರ ಹೊನ್ನವಳ್ಳಿ ರಾಜ ಬೀದಿಗಳಲ್ಲಿ ಶ್ರೀ ರೇವಸಿದ್ದೆಶ್ವರ ಸ್ವಾಮಿ,ಶ್ರೀ ಹೀರೆಕಲ್ ಬೆಟ್ಟದ ಸಿದೇಶ್ವರ ಸ್ವಾಮಿ ಹೊನ್ನವಳ್ಳಿ ಉಡಸಲಮ್ಮ ದೇವಿ,ಕೊಲ್ಹಾಪುರದಮ್ಮದೇವಿ. ಚಿಕ್ಕಮ್ಮದೇವಿ, ಧೂತರಾಯ, ಕಂಚಿನಭೂತ, ಶ್ರೀ ಬನಶಂಕರಮ್ಮದೇವಿ, ಶ್ರೀ ಯಲ್ಲಮ್ಮದೇವಿ,ಶ್ರೀ ಅಣ್ಣಪ್ಪಸ್ವಾಮಿ, ಮತ್ತು ಗ್ಯಾರಘಟ್ಟ, ಸೂರನಹಳ್ಳಿ, ಚೌಲಿಹಳ್ಳಿ,ಅದಿಹಳ್ಳಿ ಬೀರ ದೇವರುಗಳು,ಶ್ರೀ ಮೈಲಾರ ಲಿಂಗೇಶ್ವರ ಸ್ವಾಮಿ,ಅದ್ದೂರಿಯಾಗಿ ಉತ್ಸವಮಾಡಲಾಯಿತು
ಶ್ರೀ ಗುರುರೇವಣ್ಣಸಿದೇಶ್ವರ ಸ್ವಾಮಿ ಮಠ ಹಾಗು ಕುರುಬರ ಮಂಡಳಿ ಅಧ್ಯಕ್ಷರಾದ ಚಂದ್ರೇಗೌಡ, ಹೆಚ್. ಕೆ. ನಿಂಗಪ್ಪ ಹೊನ್ನವಳ್ಳಿ ಬಸವರಾಜ ಒಡೆಯರ್.ಸೇರಿದಂತೆ ಅನೇಕರು ಉಪಸ್ಥಿತರಿದರು

ವರದಿ :ಮಂಜುನಾಥ್ ಹಾಲ್ಕುರಿಕೆ

Exit mobile version