
ತಿಪಟೂರು ಐತಿಹಾಸಿಕ ಪ್ರಸಿದ್ದ ಕಲ್ಪತರು ನಾಡಹಬ್ಬ ಶ್ರೀಸತ್ಯಗಣಪತಿ ವಿಸರ್ಜನಾ ಮಹೋತ್ಸವದ ಅಂಗವಾಗಿ ಉತ್ಸವಕ್ಕೆ ಅದ್ದೂರಿ ಚಾಲನೆ ನೀಡಲಾಯಿತು.
ಶ್ರೀ ಸತ್ಯಗಣಪತಿ ಆಸ್ಥಾನ ಮಂಟಪದಲ್ಲಿ ವಿಶೇಷಪೂಜೆಸಲ್ಲಿಸಿ ನಂತರ ಹೂವಿನಿಂದ ಅಲಂಕೃತವಾದ ಉತ್ಸವದಲ್ಲಿ ಕೂರಿಸಿ, ಶಾಸಕರಾದ ಕೆ.ಷಡಕ್ಷರಿ,ಮಾಜಿ ಶಿಕ್ಷಣ ಸಚಿವ ಬಿ.ಸಿ ನಾಗೇಶ್, ಶ್ರೀಸತ್ಯಗಣಪತಿ ಸೇವಾ ಟ್ರಸ್ಟ್ ಅಧ್ಯಕ್ಷ ಶ್ರೀಕಂಠ ಶ್ರೀ ಸತ್ಯಗಣಪತಿಯವರಿಗೆ ಪೂಜೆಸಲ್ಲಿಸಿ ಚಾಲನೆ ನೀಡಿದರು.
ಶ್ರೀಸತ್ಯಗಣಪತಿ ಆಸ್ಥಾನದಿಂದ ಹೊರಟ ಉತ್ಸವ,ದೊಡ್ಡಪೇಟೆ, ಕನ್ನಿಕಾ ಪರಮೇಶ್ವರಿ ದೇವಾಸ್ಥಾನ ರಸ್ತೆ ಎಲೆ ಆಸರ,ಮಡಕೆ ಆಸರ, ಮೂಲಕ ಅದ್ದೂರಿ ಉತ್ಸವ ನಡೆಸಲಾಯಿತು, ಮಂಗಳವಾದ್ಯ,ಚಂಡೆವಾಧ್ಯ ತಮಟೆವಾಧ್ಯ, ನಾದಸ್ವರ, ಡಿಜೆ ಉತ್ಸವಕ್ಕೆ ಮೆರಗು ನೀಡಿದವು.ಲಕ್ಷಾಂತರ ಜನ ಭಕ್ತಾಧಿಗಳು ಉತ್ಸವದಲ್ಲಿ ಭಾಗವಹಿಸಿದರು
ಗಣೇಶ ಉತ್ಸವ ಸಾಗುವ ಮಾರ್ಗದಲ್ಲಿ ಸ್ವಾಮಿಯವರಿಗೆ ವಿಶೇಷವಾದ ಫಲಹಾರ, ವಿವಿಧ ನೈವೇದ್ಯಗಳು,ಹಣ್ಣು ಹಾರ ಸಮರ್ಪಿಸಿ ಪೂಜೆಸಲ್ಲಿಸಿದರು ಮನಮೋಹಕ ಡಿಜೆಸೌಂಡ್ಸ್ ಗೆ ಸಾವಿರಾರು ಯುವಕ ಯುವತಿಯರು ಕುಣಿದು ಕುಪ್ಪಳಿಸಿದರು,
ನಗರದಾದ್ಯಂತ ಜಗಮಗಿಸುವ ವಿದ್ಯುತ್ ದೀಪಾಲಂಕಾರದಿಂದ ಅಲಂಕರಿಸಿದ್ದು, ವಿಶೇಷವಾದ ಅಮ್ಯೂಸ್ ಮೆಂಟ್ ಪಾರ್ಕ್.ಹಾಗೂ ಮಾರಾಟ ಮಳಿಗೆಗಳು ಜಾತ್ರೆಗೆ ರಂಗು ನೀಡಿದೆ .ಉತ್ಸವ ಅದ್ದೂರಿಯಾಗಿ ನಡೆಯುತ್ತಿದ್ದು ನಾಳೆ ತಿಪಟೂರು ಅಮಾನೀಕೆರೆ ಕಲ್ಯಾಣಿಯಲ್ಲಿ ವಿಸರ್ಜನಾ ಮಹೋತ್ಸವ ನಡೆಯಲಿದೆ.
ವರದಿ:ಮಂಜುನಾಥ್ ಹಾಲ್ಕುರಿಕೆ