
ತಿಪಟೂರು ನಗರದ ಹಾಲ್ಕುರಿಕೆ ರಸ್ತೆ ಧನಲಕ್ಷ್ಮಿ ಕೋಕೋ ನೆಟ್ ಫ್ಯಾಕ್ಟರಿ ಬಳಿ ತಿಪಟೂರು ತಾಲ್ಲೋಕಿನ ಈಡೇನಹಳ್ಳಿ ಪಾಳ್ಯ ನಿವಾಸಿ ಎನ್ ಚೇತನ್ ಎಂಬ ಯುವಕನ ಕೊಲೆ ನಡೆದಿದೆ
ಚೇತನ್ ಕೊಲೆಯಾದ ಯುವಕ
ತಿಪಟೂರು ಈಡೇನಹಳ್ಳಿ ಪಾಳ್ಯವಾಸಿ ಚೇತನ್ ತಿಪಟೂರು ನಗರದ ಗುಬ್ಬಿ ಲೇಔಟ್ ವಾಸಿಯಾಗಿದ ಚೇತನ್ ಈ ಹಿಂದೆ ಶಿವಮೊಗ್ಗ ಮೂಲದ ನಂದಿನಿ ಎಂಬ ಮಹಿಳೆಯೊಂದಿಗೆ ಮದುವೆಯಾಗಿದ್ದು, ಕೌಟುಂಬಿ ಕಲಹದಿಂದ ಬೇರ್ಪಟಿದರು
ಸ್ವಂತ ಲಾರಿಹೊಂದಿದ ಚೇತನ್ ತಿಪಟೂರಿನ ಕಾಯಿ ಪ್ಯಾಕ್ಟರಿಗಳಿಂದ ಕಾಯಿ ಟ್ರಾನ್ಸ್ ಪೋರ್ಟ್ ಮಾಡುತ್ತಿದ್ದ,ಆದರೆ ಚೇತನ್ ಆಲೂರು ಗ್ರಾಮದ ಯುವತಿ ಲವ್ ಮಾಡುತ್ತಿದ್ದಳು ಪರಸ್ಪರ ಪ್ರೀತಿಸುತ್ತಿದ ಇಬ್ಬರೂ
ಮದುವೆಯಾಗಲು ನಿರ್ದರಿಸಿದರು,ಎನ್ನಲಾಗಿದು, ನೆನ್ನೆ ಪಾನಮತ್ತನಾದ ಚೇತನ್, ತಿಪಟೂರು ತಾಲ್ಲೋಕಿನ ಹಾಲ್ಕುರಿಕೆರಸ್ತೆ ಧನಲಕ್ಷ್ಮಿ ಕಾಯಿ ಪ್ಯಾಕ್ಟರಿ ಬಳಿ ಇರುವ ಯುವತಿಯ ಅಪ್ಪ ಲೋಕೇಶಪ್ಪ.ನವರ ಬಳಿ ಹೋಗಿ ನಿಮ್ಮ ಮಗಳನುಕೊಡಿ ಮದುವೆಯಾಗುತ್ತೇವೆ,ಎಂದು ಗಲಾಟೆ ಮಾಡಿದ್ದಾನೆ ಗಲಾಟೆ ವೇಳೆ ನಾವೂ ನಿನಗೆ ಮಗಳನು ಕೊಡುವುದಿಲ್ಲ ಎಂದಾಗಿ ಚೇತನ್ ಹಾಗೂ ಲೋಕೇಶಪ್ಪ ಹಾಗೂ ಆತನ ಹೆಂಡತಿ ಕಲಾವತಿ ಮಧ್ಯ ವಾಗ್ವಾದ ನಡೆದು, ಲೋಕೇಶಪ್ಪ ಹಾಗೂ ಕಲಾವತಿ ಯಾವುದೋ ಆಯುಧದಿಂದ ಹೊಡೆದ ಪರಿಣಾಮ ಚೇತನ್ ಮೃತಪಟ್ಟಿರುತ್ತಾನೆ.
ಸ್ಥಳಕ್ಕೆ ಹೊನ್ನವಳ್ಳಿ ಪೊಲೀಸ್ ಠಾಣೆ ಪೊಲೀಸರು ಭೇಟಿ ನೀಡಿ ಶವವನ್ನು ತಿಪಟೂರು ಸಾರ್ವಜನಿಕ ಆಸ್ಪತ್ರೆ ಶವಾಗಾರಕ್ಕೆ ಸಾಗಿಸಲಾಗಿದ್ದು
ತಿಪಟೂರು ಡಿವೈಎಸ್ಪಿ ವಿನಾಯಕ ಶೆಟ್ಟಿಗೇರಿ,ಗ್ರಾಮಾಂತರ ವೃತ್ತನಿರೀಕ್ಷಕ ಸಿದ್ದರಾಮೇಶ್ವರ್,ಹೊನ್ನವಳ್ಳಿ ಸಬ್ ಇನ್ಪೆಕ್ಟರ್ ರಾಜೇಶ್. ಹಾಗೂ ತಜ್ಞರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು
ಹೊನ್ನವಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಕೈಗೊಳ್ಳಲಾಗಿದೆ.
ವರದಿ: ಮಂಜುನಾಥ್ ಹಾಲ್ಕುರಿಕೆ