KALPATHARU KRANTHI

ಉಪಚುನಾವಣೆಯಲ್ಲಿ ಕಾಂಗ್ರೇಸ್ ಜಯಭೇರಿ: ತಿಪಟೂರಿನಲ್ಲಿ ಶಾಸಕ ಕೆ.ಷಡಕ್ಷರಿ ನೇತೃತ್ವದಲ್ಲಿ ಕಾರ್ಯಕರ್ತರ ವಿಜಯೋತ್ಸವ.

Spread the love

ಕರ್ನಾಟಕ ವಿಧಾನಸಭಾ ಉಪಚುನಾವಣೆ, ಚನ್ನಪಟ್ಟಣ, ಸಂಡೂರು & ಶಿಗ್ಗಾಂವಿ ಕ್ಷೇತ್ರಗಳಲ್ಲಿ ಸ್ಪರ್ಧಿಸಿರುವ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಾದ ಸಿ,ಪಿ ಯೋಗೀಶ್ವರ್, ಶ್ರೀಮತಿ ಅನ್ನಪೂರ್ಣ ತುಕಾರಾಂ & ಪಠಾಣ ಯಾಸೀರ್ ಅಹ್ಮದ್ ಖಾನ್ ಜಯಭೇರಿಗಳಿಸಿದ ಹಿನ್ನೆಲೆ ಹಾಗೂ ಜಾರ್ಖಂಡ್ ಕಾಂಗ್ರೆಸ್ ಸರ್ಕಾರ ಜಯಗಳಿಸಿರುವ ಹಿನ್ನೆಲೆಯಲ್ಲಿ ತಿಪಟೂರು ನಗರದ ನಗರಸಭಾ ವೃತ್ತದಲ್ಲಿ ಶಾಸಕ ಕೆ.ಷಡಕ್ಷರಿ ನೇತೃತ್ವದಲ್ಲಿ ಪಟಾಕಿ ಸಿಡಿಸಿ, ಸಿಹಿವಿತರಿಸುವ ಮೂಲಕ,ವಿಜಯೋತ್ಸವ ಆಚರಿಸಲಾಯಿತು.

ವಿಜಯೋತ್ಸವದಲ್ಲಿ ಮಾತನಾಡಿದ ಶಾಸಕ ಕೆ.ಷಡಕ್ಷರಿ ಚನ್ನಪಟ್ಟಣ, ಸಂಡೂರು,ಶಿಗ್ಗಾವಿ ಮತಕ್ಷೇತ್ರದ ಜಯ ಜನಪರ ಆಡಳಿತಕ್ಕೆ ಸಂದಜಯ,ಕಾಂಗ್ರೇಸ್ ಪಕ್ಷ ನೀಡಿರುವ,ಜನಪರ ಕಾರ್ಯಕ್ರಮಗಳು ಹಾಗೂ ಜನಪರ ಆಡಳಿತಕ್ಕೆ ಜನ ಮತನೀಡಿದ್ದಾರೆ.
ನಮ್ಮ ಸರ್ಕಾರದ ಪಂಚಗ್ಯಾರಂಟಿ ಯೋಜನೆಗಳು ಜನರಿಗೆ ಸಹಾಯವಾಗಿವೆ,ಗೃಹಲಕ್ಷ್ಮಿ, ಅನ್ನಭಾಗ್ಯ,ಗೃಹಜ್ಯೋತಿ,ಶಕ್ತಿಯೋಜನೆ ಅನ್ನಭಾಗ್ಯ ಯೋಜನೆಗಳಿಂದ ಶ್ರೀ ಸಾಮನ್ಯ ಜನರಿಗೆ ಅನುಕೂಲವಾಗುತ್ತಿದೆ,
ನಮ್ಮ ಜನಪರ ಆಡಳಿತದಿಂದ ಚುನಾವಣೆಯಲ್ಲಿ ನಮ್ಮ ಅಭ್ಯಾರ್ಥಿಗಳು ಜಯಗಳಿಸಿದ್ದಾರೆ ಎಂದು ತಿಳಿಸಿದರು.

ವಿಜಯೋತ್ಸವದಲ್ಲಿ ನಗರಸಭೆ ಅಧ್ಯಕ್ಷೆ ಶ್ರೀಮತಿ ಯಮುನಾ ಧರಣೇಶ್,ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಮಡೇನೂರು ಕಾಂತರಾಜು,ನಗರಕಾಂಗ್ರೇಸ್ ಅಧ್ಯಕ್ಷ ತರಕಾರಿ ಪ್ರಕಾಶ್,ನಗರಸಭೆ ಸದಸ್ಯರಾದ ಹೂರ್ ಬಾನು.,ವಿನುತಾ ತಿಲಕ್,ಯೋಗೇಶ್ ,ಮಹೇಶ್,ಮುಖಂಡರಾದ,ಮಾಜಿ ತಾ.ಪಂ ಅಧ್ಯಕ್ಷ ನ್ಯಾಕೇನಹಳ್ಳಿ ಸುರೇಶ್, ಎಂ.ಡಿ ರವಿಕುಮಾರ್,ಮಾದಿಹಳ್ಳಿ ರೇಣು,ಸೈಫುಲ್ಲ,ಮಾದಿಹಳ್ಳಿರೇಣು.ವಗ್ಗನಘಟ್ಟ ಯೋಗಾನಂದ್,ಲೋಕನಾಥ್ ಸಿಂಗ್ ಮುಂತ್ತಾದವರು ಉಪಸ್ಥಿತರಿದರು

ವರದಿ :ಮಂಜುನಾಥ್ ಹಾಲ್ಕುರಿಕೆ

Exit mobile version