ಗುಬ್ಬಿ: ತಾಲ್ಲೂಕಿನ ಕಡಬ ಹೋಬಳಿಯ ಜನಕದೇವನಹಳ್ಳಿ ಗ್ರಾಮದಲ್ಲಿ ಸರಳವಾಗಿ ಕನಕದಾಸರ ಜಯಂತಿ ಆಚರಿಸಲಾಗಿತ್ತು, ಗ್ರಾಮದ ಕುರುಬ ಸಮಾಜದ ಮುಖಂಡರಾದ ಚಿಕ್ಕಣ್ಣ ಮಾತನಾಡಿ ನಮ್ಮ ಗ್ರಾಮದಲ್ಲಿ ಪ್ರತಿ ವರ್ಷವೂ ಕನಕ ದಾಸರ ಜಯಂತಿನ್ನು ಕುರುಬ ಸಮಾಜಕ್ಕೆ ಸೀಮಿತವಾಗದೆ ಎಲ್ಲಾ ಸಮುದಾಯದವರು ಒಟ್ಟಾಗಿ ಆಚರಿಸುತ್ತೇವೆ, ನಮ್ಮ ನಾಡು ದೇಶಕ್ಕೆ ಕೀರ್ತಿ ತಂದಿದ್ದಾರೆ ನಾವು ಅವರ ಹಾದಿಯಲ್ಲಿ ಹೋಗಬೇಕು ಮುಂದಿನ ದಿನಗಳಲ್ಲಿ ನಮ್ಮ ಗ್ರಾಮದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಶಾಸಕರಿಗೆ ಮನವಿ ಮಾಡಿದ್ದೇವೆ ಎಂದರು ಮತ್ತೊಬ್ಬರು ಮಾತನಾಡಿ ಕನಕ ದಾಸರ ಆಚಾರ ವಿಚಾರಗಳನ್ನು ನಾವು ಪಾಲಿಸಬೇಕು ಎಲ್ಲಾರೂ ಒಗ್ಗಟ್ಟಾಗಿ ಬೆಳೆಯಬೇಕು ಎಂದರು ಕಾರ್ಯಕ್ರಮದಲ್ಲಿ ಕುರುಬ ಸಮಾಜ ಸಂಘಟನೆಯ ಮುಖಂಡರು, ಗ್ರಾಮಸ್ಥರು ಹಾಜರಿದ್ದರು.
ವರದಿ: ಸಂತೋಷ್ ಓಬಳ. ಗುಬ್ಬಿ