KALPATHARU KRANTHI

ತಿಪಟೂರಿನಲ್ಲಿ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಆಚರಣೆ.

Spread the love

ತಿಪಟೂರು:ನಗರದ ಗ್ರಂಥಾಲಯದಲ್ಲಿ ಗ್ರಂಥಾಲಯ ಸಪ್ತಾಹ ಆಚರಿಸಲಾಯಿತು

ನಿವೃತ್ತ ಶಿಕ್ಷಕರಾದ ಸೋಮಶೇಖರ್, ಸಪ್ತಾಹಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಪುಸ್ತಕಗಳು ಮನುಷ್ಯನಿಗೆ ಉತ್ತಮ ಸ್ನೇತ ಇದ್ದಹಾಗೆ,ಓದುವ ಹಾವ್ಯಾಸ ರೂಡಿಸಿಕೊಂಡರೆ ಮಾನಸಿಕ ನೆಮ್ಮದಿ ಪಡೆಯ ಬಹುದು, ಕೆಟ್ಟ ಚಟಗಳಿಂದ ದೂರವಾಗಿ ನೆಮ್ಮದಿ ಪಡೆಯುಲು ಪುಸ್ತಕಗಳ ಓದುವ ಹವ್ಯಾಸಬೆಳಸಿಕೊಳ್ಳಬೇಕು ಎಂದು ತಿಳಿಸಿದರು

ಸವಿತಾ ಸಮಾಜದ ಮುಖಂಡ ಗೋವಿಂದ ರಾಜು ಮಾತನಾಡಿ ಗ್ರಂಥಾಲಯಗಳು ದೇವಾಲಯಗಳಂತೆ,ಜ್ಞಾನ ಸಂಪಾದನೆಗೆ ಉತ್ತಮ ತಾಣಗಳು ದುಶ್ಚಟಗಳಿಂದ ವಿದ್ಯಾರ್ಥಿಗಳಿಗೆ,ದೂರವಾಗಲು ಹೆಚ್ಚುಸಮಯ ಗ್ರಂಥಾಲಯದಲ್ಲಿ ಕಳೆಯಬೇಕು,ಹೆಚ್ವು ಹೆಚ್ಚು ಓದಿದಂತೆ ಹೆಚ್ಚು ಹೆಚ್ಚು ಜ್ಞಾನ ವೃದ್ದಿಯಾಗುತ್ತದೆ,ವಿದ್ಯಾರ್ಥಿಗಳು ಗ್ರಂಥಾಲಯಕ್ಕೆ ನೀವು ಬನ್ನಿ, ನಿಮ್ಮವರನ್ಮು ಕರೆತನ್ನಿ, ಎಂಬ ಘೋಷವಾಕ್ಯ ದೊಂದಿಗೆ ಕರೆ ಕೊಟ್ಟರು, ಮಹಾಲಿಂಗಪ್ಪ ನಿವೃತ್ತ ಶಿಕ್ಷಕರು, ಶಿಕ್ಷಕರಾದ ಲೋಕೇಶ್ ಗ್ರಂಥಾಲಯ ಪ್ರಭಾರಕರಾದ ಡಿ.ಎಸ್ .ಚಂದ್ರಶೇಖರ್ ಕವಿತಾ, ಶೋಭಾ ಹೆಚ್.ಟಿ ಹಾಗೂ ವಿದ್ಯಾರ್ಥಿಗಳು ಓದುಗರು,ಭಾಗವಹಿಸಿದ್ದರು

Exit mobile version