
ತುಮಕೂರು ಜಿಲ್ಲೆ ಚಿಕ್ಕನಾಯ್ಕನಹಳ್ಳಿ ತಾಲ್ಲೋಕಿನ ಹಂದನಕೆರೆ ಹೋಬಳಿ ಗೋಪಾಲಪುರ ಗ್ರಾಮದ ದಲಿತ ಮಹಿಳೆ ಹೊನ್ನಮ್ಮ ಹತ್ಯೆ ಪ್ರಕರಣ ರಾಜ್ಯದಾದ್ಯಂತ ಭಾರೀ ಸಂಚಲನ ಮೂಡಿಸಿದ ಪ್ರಕರಣ,
ಗೋಪಾಲಪುರ ಗ್ರಾಮದ ದಲಿತ ಮಹಿಳೆ, ಬಿಜೆಪಿ ನಾಯಕಿಯಾಗಿದ ಹೊನ್ನಮ್ಮ ನನ್ನು ಅದೇ ಗ್ರಾಮದ ಸವರ್ಣಿಯರ ಗುಂಪು ಬರ್ಬರವಾಗಿ ಹತ್ಯೆಮಾಡಿದರು
ಹಂದನಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು.ತುಮಕೂರು ಜಿಲ್ಲಾ ಅರ್ಟಾಸಿಟಿ ಕೋರ್ಟ್ 14ವರ್ಷಗಳ ಸುದೀರ್ಘ ವಿಚಾರಣೆ ನಡೆದಿದ್ದು, 27 ಅರೋಪಿಗಳ ಪೈಕಿ 4 ಜನ ಸಾವನ್ನಪ್ಪಿದು 21ಜನ ಅರೋಪಿಗಳ ಶಿಕ್ಷೆ ಕಾಯ್ದಿರಿಸಿದು,ಇಂದು ಶಿಕ್ಷೆ ತೀರ್ಪು ಪ್ರಕಟವಾಗುವ ಸಾಧ್ಯತೆ ಇದೆ
ಮರಕೊಂಬಿ ಗ್ರಾಮದ ದಲಿತ ದೌರ್ಜನ್ಯ ಪ್ರಕರಣದ ತೀರ್ಪು ಮಾಸುವ ಮುನ್ನವೇ ರಾಜ್ಯದಲ್ಲಿ ಭೀಕರವಾಗಿ ನಡೆದ ದಲಿತ ಮಹಿಳೆ ಹತ್ಯಾಕಾಂಡಕ್ಕೆ ಅರ್ಟಾಸಿಟಿ ಕೋರ್ಟ್ ತೀರ್ಪುಕಾಯ್ದಿರಿಸಿದೆ
ಗ್ರಾಮದಲ್ಲಿ ಹೊನ್ನಮ್ಮನಿಗೆ ಸೇರಿದ ಮರದ ತುಂಡುಗಳನ್ನ ಗ್ರಾಮದ ರಂಗನಾಥ ಎಂಬುವವರು ಕದ್ದುಕೊಂಡು ಹೋಗಿದ್ದಾರೆ ಎಂದು ಹೊನ್ನಮ್ಮ ಹಂದನಕೆರೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದರು. ದಲಿತ ಮಹಿಳೆ ಪೊಲೀಸ್ ಠಾಣೆಗೆ ದೂರು ನೀಡಿದರಿಂದ ಕುಪಿತಗೊಂಡ, ರಂಗನಾಥ ಮತ್ತು ಗ್ರಾಮದ ಸವರ್ಣೀಯರ ಗುಂಪು ದಿನಾಂಕ 28.06.2010 ರಂದು ಹುಳಿಯಾರಿಗೆ ಅನ್ಯಕೆಲಸದ ನಿಮಿತಹೋಗಿದ ಹೊನ್ನಮ್ಮ ಬಸ್ ಇಳಿದು, ತನ್ನ ಸ್ನೇಹಿತೆ ಮೀಲಾಕ್ಷಮ್ಮನ ಮನೆ ಬಳಿ ಕುಳಿತ್ತಿದ್ದಾಗ,ಮೀನಾಕ್ಷಮ್ಮನ ಮನೆ ಬಳಿ ಬಂದ ಗುಂಪು ಹೊನ್ನಮ್ಮನನ್ನು ಅಡ್ಡಗಟ್ಟಿ ಮಾದಿಗಮುಂಡೆ ನಮ್ಮ ಮೇಲೆ ಕಂಪ್ಲೇಟ್ ಕೊಡ್ತೀಯ ಎಂದು, ಅವಾಚ್ಯ ಶಬ್ದಗಳಿಂದ ಬೈದು, ಕಲ್ಲು ಎತ್ತಿಹಾಕಿ, ಬರ್ಬರವಾಗಿ ಹತ್ಯೆಮಾಡಿದರು. ಈ ಬಗ್ಗೆ ಕರಿಯಮ್ಮ ಬಿನ್ ಕುಮಾರಯ್ಯ ನೀಡಿದ ದೂರಿನಂತೆ ಹಂದನಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತಿಪಟೂರು ಡಿವೈಎಸ್ಪಿ ನೇತೃತ್ವದಲ್ಲಿ ತನಿಖೆ ನಡೆಸಲಾಗಿತ್ತು.
ಹಂದನಕೆರೆ ಹೋಬಳಿ ಗೋಪಾಲಪುರ ಗ್ರಾಮದ ರಂಗನಾಥ ಬಿನ್ ಸುಬ್ಬಣ್ಣ,ಮಂಜುಳ ಬಿನ್ ರಂಗನಾಥ,ತಿಮ್ಮಣ್ಣ ಬಿನ್ ಯಲ್ಲಪ್ಪ,ಹನುಮಂತಯ್ಯ ಬಿನ್ ರಾಮಶೆಟ್ಟಿ,ಗಂಗಣ್ಣ ಬಿನ್ ಸುಬ್ಬಾಶೆಟ್ಟಿ,ರಾಜು ಬಿನ್ ಅಪ್ಪಣ್ಣಯ್ಯ,ವೆಂಕಟೇಶ ಬಿನ್ ಮುತ್ಯಾಲಪ್ಪ,ಶ್ರೀನಿವಾಸ ಬಿನ್ ದೊಡ್ಡಮನೆ ರಾಮಯ್ಯ,ಸ್ವಾಮಿ ಬಿನ್ ಗಂಗಜ್ಜ,ವೆಂಕಟಸ್ವಾಮಿ ಬಿನ್ ಗಂಗಪ್ಪ, ಮಾರಗೊಂಡನಹಳ್ಳಿ ವೆಂಕಟೇಶ್,ನಾಗರಾಜು ಬಿನ್ ಸಿದ್ದರಾಮಯ್ಯ,ರಾಜಪ್ಪ ಬಿನ್ ಸಿದ್ದರಾಮಶೆಟ್ಟಿ,ಮೀಸೆ ಹನುಮಂತಯ್ಯ ಬಿನ್ ಕುರುಡುಗಂಗಪ್ಪ,ರಾಮಯ್ಯ ಬಿನ್ ಯಲ್ಲಪ್ಪ,ರಂಗಣ್ಣ ಬಿನ್ ಸಿದ್ದರಾಮಶೆಟ್ಟಿ,ಉಮೇಶ್ ಬಿನ್ ರಾಮಯ್ಯ,ದಾಸಪ್ಪ ಬಿನ್ ರಾಮಯ್ಯ,ನಂಜುಂಡಯ್ಯ ಬಿನ್ ನಂಜಪ್ಪ ,ಸತ್ಯಪ್ಪ ಬಿನ್ ನಂಜಪ್ಪ,ಬುಳ್ಳರಾಮಯ್ಯ ಬಿನ್ ಹನುಮಯ್ಯ,ಚನ್ನಮ್ಮ ಕೋ ರಂಗಪ್ಪ ಸೇರಿ 27 ಜನರ ಮೇಲೆ ಪ್ರಕರಣ ದಾಖಲಾಗಿತ್ತು ಈ ಪೈಕಿ 4ಜನ ಸಾವನ್ನಪ್ಪಿದ್ದು 21 ಜನ ಆರೋಪಿಗಳಿಗೆ ಶಿಕ್ಷೆ ಕಾಯ್ದಿರಿಸಲಾಗಿದೆ.
ವರದಿ:ಮಂಜುನಾಥ್ ಹಾಲ್ಕುರಿಕೆ