KALPATHARU KRANTHI

ತಿಪಟೂರಿನಲ್ಲಿ ದಾಸಶ್ರೇಷ್ಠ ಕನಕದಾಸರ ಜಯಂತಿ ಆಚರಣೆ

Spread the love

ತಿಪಟೂರು ಆಡಳಿತ ಸೌಧದಲ್ಲಿ ಶಾಸಕ ಕೆ.ಷಡಕ್ಷರಿ ಕನಕ ದಾಸರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕನಕಜಯಂತಿಗೆ ಚಾಲನೆ ನೀಡಿದರು

ಸಭೆ ಉದೇಶಿಸಿ ಮಾತನಾಡಿದ ಶಾಸಕ ಕೆ.ಷಡಕ್ಷರಿಯವರು ಕನಕದಾಸರು ತಮ್ಮ ಭಕ್ತಿ ಪಂಥದ ಮೂಲಕ ಸಮಾಜದಲ್ಲಿ ಇದ್ದಂತಹ ಮೇಲು-ಕೀಲು ಜಾತಿ ತಾರತಮ್ಯವನ್ನು ಹೋಗಲಾಡಿಸಿ, ಎಲ್ಲರೂ ದೇವರ ಮುಂದೆ ಸಮಾನರು ಎನ್ನುವ ಸಿದ್ಧಾಂತವನ್ನು ಪ್ರಚಾರ ಮಾಡಿದ, ಶ್ರೇಷ್ಠ ಸಂತ ಕನಕದಾಸರ ದಾರಿಯಲ್ಲಿ ಪ್ರತಿಯೊಬ್ಬರು ನಡೆದರೆ ಸಮಾಜದಲ್ಲಿ ವರ್ಗ ತಾರತಮ್ಯ ನಿವಾರಣೆಯಾಗುತ್ತದೆ.
ಕುಲಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲಯನೇನಾದರು ಬಲ್ಲಿರಾ ಎನ್ನುವ ಕನಕ ದಾಸರ ಸಾಹಿತ್ಯವನ್ನ ಅರ್ಥಮಾಡಿಕೊಂಡರೆ, ಮೇಲೂ ಕೀಳು ಭಾವನೆಯಿಂದ ದೂರವಿರುತ್ತೇವೆ. ಯಾರೂ ಹುಟ್ಟುವಾಗ ಇದೇ ಜಾತಿಯಲ್ಲಿ ಹುಟ್ಟಬೇಕು ಎಂದು ಹುಟ್ಟುವುದಿಲ್ಲ , ನಾನೂ ಕಲಿಯುವ ಸಂಸ್ಕಾರ ನಮ್ಮ ನಡೆ ನುಡಿಗಳು ಉತ್ತಮವಾಗಿರಬೇಕು ಅಷ್ಟೆ
ಕನಕದಾರೂ ತಮ್ಮ ಸಾಹಿತ್ಯದ ಮೂಲಕ ಕನ್ನಡ ನಾಡು ನುಡಿಗೂ ಅಪಾರಕೊಡುಗೆ ನೀಡಿದ್ದಾರೆ
ಅವರ ಚಿಂತನೆಗಳನ್ನ ಎಲ್ಲರೂ ರೂಡಿಸಿಕೊಳ್ಳೋಣ, ಸಮಸಮಾಜದ ನಿರ್ಮಾಣಕ್ಕೆ ಒಗ್ಗೂಡೋಣ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ತಿಪಟೂರು ತಹಸೀಲ್ದಾರ್, ಪವನ್ ಕುಮಾರ್. ಇಒ ಸುದರ್ಶನ್. ಪೌರಾಯುಕ್ತ ವಿಶ್ವೇಶ್ವರಯ್ಯ ಬದರಗಡೆ,ಜೆಡಿಎಸ್ ಮುಖಂಡ ಜಕ್ಕನಹಳ್ಳಿ ಲಿಂಗರಾಜು,ರಂಗಾಪುರ ಗ್ರಾಮಪಂಚಾಯಿತಿ ಅಧ್ಯಕ್ಷ ವಿಶ್ವನಾಥ್ .ಸಂಗೋಳಿರಾಯಣ್ಣ ಕುರಿ,ಹುಣ್ಣೆ ಅಭಿವೃದ್ದಿ ಒಕ್ಕೂಟದ ನಿರ್ದೇಶಕ ಶಿವಪುರ ಲಿಂಗರಾಜು., ನಗರಸಭಾ ಸದಸ್ಯ ತರಕಾರಿ ಗಂಗಾಧರ್,ನಗರಸಭಾ ಸದಸ್ಯರಾದ ಡಾ//ಒಹಿಲಾ ಗಂಗಾಧರ್ , ಮುಖಂಡರಾದ ಎ.ಬಿ ಲಿಂಗರಾಜು.ಗೋವಿಂದಪ್ಪ ಶಿಕ್ಷಕರಾದ ಮಂಜಪ್ಪ ಮುಂತ್ತಾದವರು ಉಪಸ್ಥಿತರಿದರು

Exit mobile version