ತಿಪಟೂರು: ತಿಪಟೂರಿನಲ್ಲಿ ಜನಶತಾಬ್ದಿ ರೈಲು ನಿಲುಗಡೆಗೆ ಕೇಂದ್ರ ಸಹಾಯಕ ರೈಲ್ವೆ ಹಾಗೂ ಜನಶಕ್ತಿ ಸಚಿವ ವಿ.ಸೋಮಣ್ಣ ಹಸಿರುನಿಶಾನೆ ತೋರಿಸಿದರು, ರೈಲ್ದೆ ನಿಲ್ದಾಣದ ಆವರಣದಲ್ಲಿ ಆಯೋಜಿಸಿದ ಸಾರ್ವಜನಿಕ ಸಭೆಯನ್ನ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು
ಸಾರ್ವಜನಿಕರನ್ನ ಉದೇಶಿಸಿ ಮಾತನಾಡಿದ ವಿ.ಸೋಮಣ್ಣ ತುಮಕೂರು ಲೋಕಸಭಾ ಕ್ಷೇತ್ರದ ಜನರ ಆಶೀರ್ವಾದದಿಂದ ಮಂತ್ರಿಯಾಗಿ ನಿಮ್ಮ ಸೇವೆ ಮಾಡೋ ಅವಕಾಶ ಲಭಿಸಿದೆ, ನೀವೂ ನೀಡಿರುವ ಪ್ರತಿಯೊಂದು ಮತದ ಶಕ್ತಿಯ ಅರಿವು, ನನಗಿದೆ, 5ವರ್ಷದಲ್ಲಿ ನಾನೂ ನಿಮಗೆ ನೀಡಿರುವ ಎಲ್ಲ ಭರವಣೆಗಳನ್ನ ಈಡೇರಿಸುತ್ತೇನೆ,ನೆಲಮಂಗಲದಿಂದ ತುಮಕೂರಿನವರೆಗೆ ಆರುಪಥದ ರಸ್ತೆ ನಿರ್ಮಾಣ ಮಾಡಲಾಗುವುದು, ಶಿರಾ ಹೈವೇ,ಹುಳಿಯಾರು ಹೈವೆ,ಹೊನ್ನವಳ್ಳಿ ಹಾಗೂ ಹಾಸನ ರಸ್ತೆ ಮೆಲ್ಸೇತುವೆ ಕಾಮಗಾರಿ ಶೀಘ್ರವಾಗಿ ಕೈಗೆತ್ತಿಕೊಳ್ಳಲಾಗುವುದು ಎಂದು ತಿಳಿಸಿದರು, ಕಾರ್ಯಕ್ರಮದಲ್ಲಿ ಶಾಸಕ ಜ್ಯೋತಿಗಣೇಶ್ ಸುರೇಶ್ ಗೌಡ, ಮಾಜಿ ಶಾಸಕ ಮಸಾಲೆ ಜಯರಾಮ್.ಮುಖಂಡರಾದ ಹೆಬ್ಬಾಕ ರವಿಶಂಕರ್ ಕೆ.ಟಿ ಶಾಂತಕುಮಾರ್ ಸೇರಿದಂತೆ ರೈಲ್ವೆ ಇಲಾಖೆ ಅಧಿಕಾರಿಗಳು ಉಪಸ್ಥಿತರಿದರು
ವರದಿ : ಮಂಜುನಾಥ್ ಹಾಲ್ಕುರಿಕೆ
