KALPATHARU KRANTHI

ಅದ್ದೂರಿಯಾಗಿ ನಡೆದ ತಿಪ್ಪೂರು ಗ್ರಾಮದ ಶ್ರೀ ಕೋಡಿ ಕೆಂಪಮ್ಮ ದೇವಾಲಯದ ಗೋಪುರ ಕಳಸ ಸ್ಥಾಪನೆ

Spread the love

ಗುಬ್ಬಿ : ಗುಬ್ಬಿ ತಾಲ್ಲೂಕಿನ ತಿಪ್ಪೂರು ಗ್ರಾಮದ ಶ್ರೀ ಕೋಡಿಕೆಂಪಮ್ಮ‌ದೇವಿಯ ನೂತನ ವಿಮಾನ ಗೋಪುರ ಕಳಸ ಸ್ಥಾಪನ ಮಹೋತ್ಸವ ಅದ್ದೂರಿಯಾಗಿ ನಡೆಯಿತ್ತು.ಶ್ರೀ ಕೋಡಿ ಕೆಂಪಮ್ಮ ದೇವಿಯವ ಗಂಗಾಪೂಜಾ ಕಾರ್ಯಕ್ರಮ‌ ಹಾಗೂ ಮಹಿಳೆಯರಿಂದ ಪೂರ್ಣಕುಂಭ ಕಳಸ ಮಹೋತ್ಸವದ ಪೂಜಾ ಕಾರ್ಯಗಳು ಶ್ರದ್ದಾಭಕ್ತಿಯಿಂದ ನಡೆಯಿತ್ತು.ಸಂಜೆ ಗ್ರಾಮದ ಶ್ರೀ ಲಕ್ಷ್ಮೀರಂಗನಾಥಸ್ವಾಮಿ ,ಬಸವೇಶ್ವರಸ್ವಾಮಿ ಕೆಂಪಮ್ಮ‌ದೇವಿಯ ಉತ್ಸವ ದೊಂದಿಗೆ ನಂಧಿ ಧ್ವಜಾ ಬಾಣ ಬಿರುಸುಗಳೊಂದಿಗೆ ವೈಭವದೊಂದಿಗೆ ನಡೆಯಿತ್ತು. ಭಕ್ತರಿಗೆ ಮಹಾ ದಾಸೋಹ ಏರ್ಪಡಿಸಲಾಗಿತ್ತು.ಗೋಡೆಕೆರೆ ಮಠದ ಶ್ರೀ ಮೃತ್ಯುಂಜಯ ದೇಶಿಕೇಂದ್ರ ಸ್ವಾಮಿಗಳ ಅಮೃತ ಹಸ್ತದೊಂದಿಗೆ ಕಳಸ ಮಹೋತ್ಸವಕ್ಕೆ ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಪೂಜೆ ಸಲ್ಲಿಸಿದರು. ಕಳಸ ಮಹೋತ್ಸವಕ್ಕೆ ಗೋಡೆಕೆರೆ ಶ್ರೀಗಳು ಚಾಲನೇ ನೀಡಿದರು.

ವರದಿ: ಸಂತೋಷ್ ಓಬಳ. ಗುಬ್ಬಿ

Exit mobile version